ಗಣೇಶ ಹಬ್ಬಕ್ಕೆ ಮಹಿಳೆಯರಿಗೆ ಗುಡ್ ನ್ಯೂಸ್; ಮತ್ತೊಂದು ಹೊಸ ಯೋಜನೆಗೆ ಚಾಲನೆ ನೀಡಿದ ಸಿಎಂ

ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಕೂಸಿನ ಮನೆ (Child Care) ಕೇಂದ್ರವನ್ನು ಪ್ರಾರಂಭಿಸಲಾಗುವುದು. ದಿನದಲ್ಲಿ 6:30 ತಾಸು ಈ ಕೂಸಿನ ಮನೆ ತೆರೆದಿರುತ್ತದೆ.

ಗೃಹಿಣಿಯರ ಸ್ವಾವಲಂಬಿ (independent women) ಜೀವನಕ್ಕೆ ಉತ್ತೇಜನ ನೀಡುವಂತಹ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತರುತ್ತಿದೆ. ಶಕ್ತಿ ಯೋಜನೆಯ (Shakti Yojana) ಅಡಿಯಲ್ಲಿ ಉಚಿತ ಬಸ್ (free bus) ಪ್ರಯಾಣಕ್ಕೆ ಮಹಿಳೆಯರಿಗೆ ಅನುಕೂಲ ಮಾಡಿಕೊಡಲಾಗಿದೆ.

ಗೃಹಲಕ್ಷ್ಮಿ ಯೋಜನೆಯ (graha lakshmi scheme) ಅಡಿಯಲ್ಲಿ ಪ್ರತಿ ತಿಂಗಳು ಮನೆಯ ಯಜಮಾನಿಗೆ 2ಸಾವಿರ ರೂಪಾಯಿಗಳು ಬರುವಂತೆಯೂ ಮಾಡಲಾಗಿದೆ. ಅದೇ ರೀತಿ ಈಗ ಮತ್ತೊಂದು ಯೋಜನೆಯನ್ನು ಸರ್ಕಾರ ಆರಂಭಿಸಿದ್ದು ಈಗಾಗಲೇ ಈ ಯೋಜನೆಗೆ ಕಲಬುರ್ಗಿ (kalaburagi)ಯಲ್ಲಿ ಚಾಲನೆ ನೀಡಲಾಗಿದೆ.

ರೇಷನ್ ಕಾರ್ಡ್ ಇಲ್ಲದ್ರೆ ಇದ್ರೂ ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಬಹುದಾ? ಇಲ್ಲಿದೆ ನಿಮ್ಮ ಗೊಂದಲಗಳಿಗೆ ಉತ್ತರ

ಗಣೇಶ ಹಬ್ಬಕ್ಕೆ ಮಹಿಳೆಯರಿಗೆ ಗುಡ್ ನ್ಯೂಸ್; ಮತ್ತೊಂದು ಹೊಸ ಯೋಜನೆಗೆ ಚಾಲನೆ ನೀಡಿದ ಸಿಎಂ - Kannada News

ಕೂಸಿನ ಮನೆ (kusina Mane project):

ಕಲಬುರ್ಗಿಯ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ (CM siddaramaiah) ಅವರು ಸರ್ಕಾರದ ಬಹು ಯೋಜನೆಗಳಲ್ಲಿ ಒಂದಾದ ಕೂಸಿನ ಮನೆ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಇದರಿಂದಾಗಿ ಮಹಿಳೆಯರು ತಮ್ಮ ಸ್ವಾವಲಂಬನೆಯ ಜೀವನ ನಡೆಸುವುದು ಮಾತ್ರವಲ್ಲದೆ ಮಕ್ಕಳ ಪೋಷಣೆಗೂ ಕೂಡ ಸಹಾಯಕವಾಗುತ್ತದೆ.

ಏನಿದು ಕೂಸಿನ ಮನೆ:

Child Care Center Kusina Mane For Narega Women Workersಕೆಲಸಕ್ಕೆ ಹೋಗುವ ಕಾರ್ಮಿಕರಿಗೆ (labours) ಚಿಕ್ಕ ಮಕ್ಕಳನ್ನು ಸಾಕುವುದು ಸಲಹುವುದು ಕಷ್ಟವಾಗುತ್ತದೆ. ಯಾಕೆಂದರೆ ಅವರು ಒಂದು ದಿನ ದುಡಿದು ಬಂದರೆ ಮಾತ್ರ ಊಟ ಮಾಡುವಷ್ಟು ಬಡತನ ಕೂಡ ಅವರನ್ನು ಕಾಡುತ್ತದೆ. ಇದೇ ಕಾರಣಕ್ಕೆ ಕಟ್ಟಡ ಕೂಲಿ ಕಾರ್ಮಿಕರ ಮೂರು ವರ್ಷದ ಒಳಗಿನ ಮಕ್ಕಳನ್ನು ಸರ್ಕಾರ ಘೋಷಣೆ ಮಾಡಲು ನಿರ್ಧರಿಸಿದೆ.

ಕೂಸಿನ ಮನೆ ಯೋಜನೆಯ ಅಡಿಯಲ್ಲಿ ಗ್ರಾಮ ಪಂಚಾಯತ್ (gram Panchayat) ನಲ್ಲಿ ಮಕ್ಕಳಿಗಾಗಿ ಒಂದು ಕೇಂದ್ರವನ್ನು ಆರಂಭಿಸಿ ಅದರಲ್ಲಿ ಕೂಲಿ ಕಾರ್ಮಿಕರ ಮಕ್ಕಳನ್ನು ಪೋಷಣೆ ಮಾಡಲಾಗುತ್ತದೆ. ಆ ಮಕ್ಕಳಿಗೆ ಮೂರು ವರ್ಷ ವಯಸ್ಸು ಆಗುವವರೆಗೂ ಮಕ್ಕಳ ಪೋಷಣೆ ಸರ್ಕಾರದ್ದೇ ಆಗಿರುತ್ತದೆ.

ಹೊಸ ಅಪ್ಡೇಟ್! ಗೃಹಲಕ್ಷ್ಮಿ ಯೋಜನೆಗೆ ನಿಮ್ಮ ಬ್ಯಾಂಕ್ ಅಕೌಂಟ್ ಸರಿಯಾಗಿ ಲಿಂಕ್ ಆಗಿದ್ಯಾ ತಿಳಿದುಕೊಳ್ಳಿ

ಇಲ್ಲಿ ಮಕ್ಕಳಿಗೆ ಕಲಿಕೆ ಸ್ವಚ್ಛತೆ ಮೊದಲಾದ ಪಾಠದ ಜೊತೆಗೆ ಆಟಿಕೆ ಸಾಮಗ್ರಿಗಳನ್ನು ಕೂಡ ಇಡಲಾಗುತ್ತದೆ. ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಕೂಸಿನ ಮನೆ (Child Care) ಕೇಂದ್ರವನ್ನು ಪ್ರಾರಂಭಿಸಲಾಗುವುದು. ದಿನದಲ್ಲಿ 6:30 ತಾಸು ಈ ಕೂಸಿನ ಮನೆ ತೆರೆದಿರುತ್ತದೆ.

ಕೂಲಿಗೆ ಅಥವಾ ಕಾರ್ಮಿಕ ಕೆಲಸಕ್ಕೆ ಹೋಗುವ ತಾಯಂದಿರು ಕೆಲಸಕ್ಕೆ ಹೋಗಿ ಬಂದ ನಂತರ ತಮ್ಮ ಮಗುವನ್ನು ನೋಡಿಕೊಂಡರೆ ಸಾಕು. ಅಲ್ಲಿಯವರೆಗೂ ಈ ಕೇಂದ್ರದಲ್ಲಿ ಇರುವ ಸಿಬ್ಬಂದಿಗಳೇ ನೋಡಿಕೊಳ್ಳುತ್ತಾರೆ.

ಸ್ಥಳ ಗುರುತಿಸಲು ಸರ್ಕಾರದಿಂದ ಆದೇಶ:

ಪುಟ್ಟ ಮಕ್ಕಳನ್ನು ನೋಡಿಕೊಳ್ಳುವ ಈ ಯೋಜನೆಯಲ್ಲಿ ಮಕ್ಕಳ ಸ್ವಚ್ಛತೆ, ನೈರ್ಮಲ್ಯ ಎಲ್ಲವೂ ಬಹಳ ಮುಖ್ಯ. ಹಾಗಾಗಿ ಇದಕ್ಕೆ ಸುರಕ್ಷಿತವಾದ ಸ್ಥಳವನ್ನು ಸೂಚಿಸುವಂತೆ ಸರ್ಕಾರವು ಕೂಡ ಹೇಳಿದೆ. ಇದರ ಜೊತೆಗೆ ಸುಸಜ್ಜಿತ ಕಟ್ಟಡ, ನೀರು, ಗಾಳಿ, ಬೆಳಕು ಸ್ವಚ್ಛತೆ ಗೆಲುವು ಇರುವಂತಹ ಕೂಸಿನ ಮನೆ ನಿರ್ಮಾಣ ಮಾಡಲಾಗುವುದು.

ರೇಷನ್ ಕಾರ್ಡ್ ಅಪ್ಡೇಟ್ ಮಾಡದವರಿಗೆ ಹೊಸ ಸಮಸ್ಯೆ, ಈಗ ಅಪ್ಡೇಟ್ ಮಾಡಿಸುವ ಅವಕಾಶ ಕೂಡ ಇಲ್ಲ

ಇನ್ನು ಕೂಸಿನ ಮನೆಯಲ್ಲಿ ಮೂರು ವರ್ಷದ ಒಳಗಿನ ಮಕ್ಕಳನ್ನು ನೋಡಿಕೊಳ್ಳಲಾಗುತ್ತದೆ ಹಾಗೂ ಮಕ್ಕಳನ್ನು ನೋಡಿಕೊಳ್ಳಲು ಸರಿಯಾದ ಸಿಬ್ಬಂದಿ ವರ್ಗವನ್ನು ಕೂಡ ನೇಮಿಸಲಾಗುತ್ತದೆ. ಕಲಬುರ್ಗಿಯಲ್ಲಿ ಕೂಸಿನ ಮನೆ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ರಾಜ್ಯದ್ಯಂತ ಕೂಸಿನ ಮನೆ ಯೋಜನೆ ಸದ್ಯದಲ್ಲಿ ಆರಂಭವಾಗಬಹುದು.

CM launched another new scheme for women

Follow us On

FaceBook Google News

CM launched another new scheme for women