Karnataka NewsBangalore News

ಇನ್ಮುಂದೆ ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸಲು ಸಾಧ್ಯವಿಲ್ಲ! ತಲೆ ನೋವಾಗಿ ಪರಿಣಮಿಸಿದೆ ಹೊಸ ನಿಯಮ

ನಮ್ಮ ರಾಜ್ಯದಲ್ಲಿ ಈಗ ಕಾಂಗ್ರೆಸ್ ಪಕ್ಷವು 5 ಗ್ಯಾರಂಟಿ ಯೋಜನೆಗಳಲ್ಲಿ 4 ಯೋಜನೆಗಳನ್ನು ಜಾರಿಗೆ ತಂದಿದೆ. ಗೃಹಲಕ್ಷ್ಮಿ (Gruha lakshmi Yojana), ಗೃಹಜ್ಯೋತಿ (Gruha jyothi Yojane), ಅನ್ನಭಾಗ್ಯ (Annabhagya Yojane) ಮತ್ತು ಶಕ್ತಿ ಯೋಜನೆ (Shakti Yojana) ಜಾರಿಗೆ ಬಂದಿದ್ದು, ಇನ್ನುಳಿದಿರುವ ಯುವನಿಧಿ ಯೋಜನೆ (Yuvanidhi Yojane) ಡಿಸೆಂಬರ್ ನಲ್ಲಿ ಜಾರಿಗೆ ಬರಲಿದೆ.

ಜಾರಿಗೆ ಬಂದಿರುವ ನಾಲ್ಕು ಯೋಜನೆಗಳ ಪೈಕಿ ಶಕ್ತಿ ಯೋಜನೆ ಬಿಟ್ಟು, ಇನ್ನು 3 ಯೋಜನೆಗಳ ಸೌಲಭ್ಯ ಪಡೆಯಲು BPL Ration Card ಕಡ್ಡಾಯವಾಗಿ ಬೇಕು. BPL ರೇಷನ್ ಕಾರ್ಡ್ ಮತ್ತು ಅದರಲ್ಲಿ ಎಲ್ಲಾ ಮಾಹಿತಿಗಳು ಇದ್ದು, ಸರ್ಕಾರದ ನಿಯಮಗಳನ್ನು ಪಾಲಿಸುತ್ತಾ ಇರುವವರಿಗೆ ಮಾತ್ರ ಯೋಜನೆಯ ಸೌಲಭ್ಯಗಳು ಸಿಗುತ್ತಿದೆ.

Demand for BPL ration card, Here is the update When will the new ration card be issued

ಆದರೆ ಕೆಲವು ಜನರು ತಮ್ಮ BPL Ration Card ಗಳಲ್ಲಿ ನೀಡಿರುವ ಮಾಹಿತಿ ತಪ್ಪಿರುವ ಕಾರಣ ಅವರಿಗೆ ಈ ಸೌಲಭ್ಯಗಳು ಸಿಗುತ್ತಿರಲಿಲ್ಲ, ಅಂಥವರು ತಮ್ಮ Ration Card Update ಮಾಡಿಸಲಿ ಎಂದು ಸರ್ಕಾರ ಒಂದು ಅವಕಾಶ ನೀಡಿತ್ತು.

10ನೇ ತರಗತಿ ಪಾಸ್ ಆಗಿದ್ರೂ ಸಾಕು ಸಿಗಲಿದೆ ಸರ್ಕಾರಿ ಕೆಲಸ! ₹37,900 ಸಂಬಳ, ಇಂದೇ ಅಪ್ಲೈ ಮಾಡಿ

ಸೆಪ್ಟೆಂಬರ್ 1 ರಿಂದ 10ನೇ ತಾರೀಕಿನ ವರೆಗು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಸರ್ಕಾರ ಸಮಯ ನೀಡಿತ್ತು, ಆದರೆ ಸರ್ವರ್ ಸಮಸ್ಯೆಯ ಕಾರಣ ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸಲು ಸಾಧ್ಯ ಆಗದವರಿಗಾಗಿ 4 ದಿನಗಳ ಕಾಲ ವಿಸ್ತರಿಸಿ, ಸೆಪ್ಟೆಂಬರ್ 14ರ ವರೆಗು ತಿದ್ದುಪಡಿ ಮಾಡಿಸುವ ಅವಕಾಶ ನೀಡಿತು, ಆದರೆ ಈಗ ರೇಷನ್ ಕಾರ್ಡ್ ತಿದ್ದುಪಡಿಗೆ ನೀಡಿದ್ದ ಸಮಯಾವಕಾಶ ಮುಗಿದಿದ್ದು, ಇನ್ನುಮುಂದೆ ಅಪ್ಡೇಟ್ ಮಾಡಿಸಲು ಸಾಧ್ಯವಿಲ್ಲ ಎಂದು ಮಾಹಿತಿ ಸಿಕ್ಕಿದೆ.

ಈ ಬಾರಿ ನೀಡಿದ್ದ ಅವಕಾಶದಲ್ಲಿ ಜನರು ಬೇರೆ ಬೇರೆ ತಿದ್ದುಪಡಿ ಮಾಡಿಸಬಹುದಿತ್ತು, ಅಡ್ರೆಸ್ ಚೇಂಜ್ (Address Change) ಮಾಡಿಸುವುದು ಅಥವಾ ಅಡ್ರೆಸ್ ತಿದ್ದುಪಡಿ, ಹೊಸ ಸದಸ್ಯರ ಹೆಸರು ಸೇರಿಸುವುದು, ಅಥವಾ ಹೆಸರು ತೆಗೆಸುವುದು, ಮನೆಯ ಮುಖ್ಯಸ್ಥರ ಹೆಸರನ್ನು ಬದಲಾವಣೆ ಮಾಡುವುದು, ಈ ಎಲ್ಲಾ ಥರದ ತಿದ್ದುಪಡಿಗಳನ್ನು ಮಾಡಿಸಲು ಸರ್ಕಾರ ಅವಕಾಶ ನೀಡಿದ್ದ ವೇಳೆ ಸುಮಾರು 2 ಲಕ್ಷ ಜನರು ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಂಡಿದ್ದಾರೆ. ಆದರೆ ಇನ್ನೂ ಹಲವು ಜನರು ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸಲು ಸಾಧ್ಯವಾಗಿಲ್ಲ.

ಗಣೇಶ ಹಬ್ಬಕ್ಕೆ ಮಹಿಳೆಯರಿಗೆ ಗುಡ್ ನ್ಯೂಸ್; ಮತ್ತೊಂದು ಹೊಸ ಯೋಜನೆಗೆ ಚಾಲನೆ ನೀಡಿದ ಸಿಎಂ

ಇವರಿಗೆಲ್ಲಾ ಸರ್ವರ್ ಪ್ರಾಬ್ಲಮ್ ಆದ ಕಾರಣಕ್ಕೆ ಸಮಸ್ಯೆ ಉಂಟಾಗಿದ್ದು, ಇನ್ನು ರೇಶನ್ ಕಾರ್ಡ್ ಅಪ್ಡೇಟ್ ಮಾಡಿಸಲು ಸಾಧ್ಯವಾಗದ ಜನರು ತಮಗೆ ಇನ್ನೊಂದು ಅವಕಾಶ ಕೊಡಬೇಕು ಎಂದು ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದಾರೆ.

BPL Ration Cardಆದರೆ ರೇಷನ್ ಕಾರ್ಡ್ ಅಪ್ಡೇಟ್ ಗೆ ಮತ್ತೆ ಅವಕಾಶ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ. ಹಳ್ಳಿಗಳಲ್ಲಿ ಮತ್ತು ಸಿಟಿಗಳಲ್ಲಿ ಈ ಎರಡು ಕಡೆ ಹಲವು ಜನರಿಗೆ ಸರ್ವರ್ ಸಮಸ್ಯೆ ಉಂಟಾಗಿದೆ, ಹೀಗಾಗಿರುವ ಜನರು ಮೂರ್ನಾಲ್ಕು ದಿನಗಳ ಕಾಲ ರೇಶನ್ ಕಾರ್ಡ್ ಅಪ್ಡೇಟ್ ಮಾಡಿಸಲು ಕಾದಿದ್ದರು ಕೂಡ ಯಾವುದೇ ಪ್ರಯೋಜನ ಇಲ್ಲದ ಹಾಗೆ ಆಗಿದೆ.

ರೇಷನ್ ಕಾರ್ಡ್ ಇಲ್ಲದ್ರೆ ಇದ್ರೂ ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಬಹುದಾ? ಇಲ್ಲಿದೆ ನಿಮ್ಮ ಗೊಂದಲಗಳಿಗೆ ಉತ್ತರ

ಆದರೆ ಈ ವೇಳೆ ಸರ್ಕಾರದ ಅನ್ನಭಾಗ್ಯ ಯೋಜನೆಯ 5 ಕೆಜಿ ಅಕ್ಕಿಯ ಬದಲಿನ ಹಣ ಮತ್ತು ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಮನೆಯ ಗೃಹಲಕ್ಷ್ಮಿಯ ಖಾತೆಗೆ (Bank Account) ಸೇರಬೇಕು ಎಂದರೆ ರೇಶನ್ ಕಾರ್ಡ್ ನಲ್ಲಿ ನೀಡಿರುವ ಎಲ್ಲಾ ಮಾಹಿತಿ ಪೂರ್ತಿಯಾಗಿ ಸರಿಯಾಗಿರಬೇಕು.

ಆದರೆ ಸರ್ಕಾರ ರೇಷನ್ ಕಾರ್ಡ್ ಅಪ್ಡೇಟ್ ಗಾಗಿ ಕೊಟ್ಟಿದ್ದ ಸಮಯದ ಗಡುವು ಮುಗಿದು ಹೋಗಿದ್ದು, ಮತ್ತೊಮ್ಮೆ ತಿದ್ದುಪಡಿ ಮಾಡಿಸುವ ಅವಕಾಶ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಅದರ ಜೊತೆಗೆ ಇನ್ನು ಕೂಡ ಹಲವು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ. ಈಗಾಗಲೇ 1.2 ಕೋಟಿಗಿಂತ ಹೆಚ್ಚಿನ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿದ್ದು, ಅವರಲ್ಲಿ ಎಲ್ಲರಿಗು ಯೋಜನೆಯ ಹಣ ಲಭಿಸಿಲ್ಲ.

ಹೊಸ ಅಪ್ಡೇಟ್! ಗೃಹಲಕ್ಷ್ಮಿ ಯೋಜನೆಗೆ ನಿಮ್ಮ ಬ್ಯಾಂಕ್ ಅಕೌಂಟ್ ಸರಿಯಾಗಿ ಲಿಂಕ್ ಆಗಿದ್ಯಾ ತಿಳಿದುಕೊಳ್ಳಿ

ರೇಷನ್ ಕಾರ್ಡ್ ನಲ್ಲಿ ಮನೆಯ ಮುಖ್ಯಸ್ಥೆ ಎಂದು ಮಹಿಳೆಯ ಹೆಸರು ಇದ್ದರೆ, ಅಂಥವರಿಗೆ ಮಾತ್ರ ಈ ಯೋಜನೆಯ ಹಣ ಸಿಗುತ್ತಿದೆ. ಇಲ್ಲದೆ ಹೋದರೆ ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿದ್ದರು ಕೂಡ ಅವರಿಗೆ ಹಣ ಬಂದಿರುವುದಿಲ್ಲ (Money Deposit). ಅಂಥವರು ತಿದ್ದುಪಡಿ ಮಾಡಿಸಿಕೊಳ್ಳಲಿ ಎಂದೇ ಸರ್ಕಾರ ಅವಕಾಶ ನೀಡಿತ್ತು, ಆದರೆ ಎಲ್ಲರೂ ತಿದ್ದುಪಡಿ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ.

Not possible to Ration Card Corrections, Ration Card update Last Date

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories