Karnataka NewsBangalore News

ರಾಜ್ಯದಲ್ಲಿ ಆಸ್ತಿ ಖರೀದಿ ಮತ್ತು ಮಾರಾಟ ಮಾಡುವವರಿಗೆ ಹೊಸ ನಿಯಮ ಜಾರಿ! ಇನ್ಮುಂದೆ ಹೊಸ ರೂಲ್ಸ್

ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಜಾರಿಗೆ ಬಂದು, ಹಲವು ಯೋಜನೆಗಳನ್ನು ಜನರಿಗಾಗಿ ತಂದಿದೆ. ಹಾಗೆಯೇ, ಹಲವು ನಿಯಮಗಳಲ್ಲಿ ಸಹ ಬದಲಾವಣೆ ತರುತ್ತಿದೆ.

ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಈಗ ಆಸ್ತಿ ಖರೀದಿ (Property Purchase) ಮತ್ತು ಮಾರಾಟ ಮಾಡುವ (Land Sale) ವಿಚಾರದಲ್ಲಿ ಬದಲಾವಣೆ ತರಲಾಗುತ್ತದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ರಾಜ್ಯದ ಶಿಕ್ಷಣ ನೀತಿಯನ್ನು ಕೂಡ ಕಾಂಗ್ರೆಸ್ ಸರ್ಕಾರ ಬದಲಾಯಿಸಿದ್ದು, ಇದೀಗ ಹೊಸ ನಿಯಮ ತರುವುದಕ್ಕೆ ಮುಂದಾಗಿದೆ..

Big update for those who have a house in government land

ರಾಜ್ಯದಲ್ಲಿ ಉಚಿತ ಯೋಜನೆಗಳು ಜಾಸ್ತಿ ಆಗಿರುವುದರಿಂದ ಹಣದುಬ್ಬರ ಕೂಡ ಅದೇ ರೀತಿಯಲ್ಲಿ ಜಾಸ್ತಿಯಾಗುತ್ತಲೇ ಇದೆ. ಇದರ ಪ್ರಭಾವ ಎದುರಿಸುತ್ತಿರುವವರು ರಾಜ್ಯದ ಸಾಮಾನ್ಯ ಜನರು.

ಜನ ಸಂಪರ್ಕಕ್ಕಾಗಿ ಸಿಎಂ ಸಿದ್ದರಾಮಯ್ಯ ಮತ್ತೊಂದು ಪ್ಲಾನ್; ಈಗಲೇ ಸಿಎಂ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಪ್ರಸ್ತುತ ಇರುವ ಬೆಲೆ ಏರಿಕೆ ಸಮಸ್ಯೆಯನ್ನು ಕೂಡ ಜನರು ಎದುರಿಸುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಪ್ರತಿದಿನ ಬಳಸುವ ಅಗತ್ಯ ವಸ್ತುಗಳ ಬೆಲೆ ಕೂಡ ಹೆಚ್ಚಾಗಿದೆ, ಹಾಲು, ತರಕಾರಿ, ಮೊಸರು, ಗ್ಯಾಸ್ ಸಿಲಿಂಡರ್, ಇವುಗಳ ಬೆಲೆ ಕೂಡ ಜಾಸ್ತಿಯಾಗಿದ್ದು, ಇದರಿಂದ ನಷ್ಟ ಆಗುತ್ತಿರುವುದು ಸಾಮಾನ್ಯ ವರ್ಗದ ಜನರಿಗೆ.

ಈ ಕಷ್ಟವನ್ನೇ ಜನರು ಎದುರಿಸುತ್ತಿರುವಾಗ ರಾಜ್ಯ ಸರ್ಕಾರ ಮತ್ತೊಂದು ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ಬಾರಿ ಬೆಲೆ ಏರಿಕೆ ಮತ್ತು ಹೊಸ ನಿಯಮ ಜಾರಿಗೆ ಬಂದಿರುವುದು ಆಸ್ತಿ ಖರೀದಿ ವಿಚಾರದಲ್ಲಿ, ನಮ್ಮ ದೇಶದಲ್ಲಿ ಆಸ್ತಿಯ ಓನರ್ ಗಳೇ ಆಗಿಲ್ಲದ ಜನರು ಮೋಸದಿಂದ ಆಸ್ತಿ ಮಾರಾಟ ಮಾಡಿ, ಜನರು ಮೋಸ ಹೋಗಿರುವ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿದೆ.

ಹಾಗಾಗಿ ಆಸ್ತಿ ಮಾರಾಟ ಮತ್ತು ಖರೀದಿ ವಿಚಾರದಲ್ಲಿ (Property Purchase and Sale) ಜನರು ಮೋಸ ಹೋಗಬಾರದು ಎಂದು ಸರ್ಕಾರ ಈ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ರೇಷನ್ ಕಾರ್ಡ್ eKYC ಆಗಿದ್ಯೋ ಇಲ್ಲವೋ ಒಂದೇ ಕ್ಲಿಕ್ ನಲ್ಲಿ ಚೆಕ್ ಮಾಡಿ? ಆಗದೆ ಇದ್ರೆ ಈ ರೀತಿ ಮಾಡಿ

Property buying and selling

ಆಸ್ತಿಯ ಮೇಲೆ ಅಧಿಕಾರ ಇಲ್ಲದೆ ಇರುವ ವ್ಯಕ್ತಿ ಯಾವುದೇ ಕಾರಣಕ್ಕೂ ಆಸ್ತಿಯನ್ನು ಮಾರಾಟ ಮಾಡಬಾರದು ಎಂದು ಸರ್ಕಾರ ಹೊಸ ಕಾನೂನನ್ನು ಜಾರಿಗೆ ತಂದಿದೆ. ಮೋಸದ ಪ್ರಕರಣಕ್ಕೆ ತಡೆ ಹಾಕಲು ಇನ್ನಷ್ಟು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಇನ್ನುಮುಂದೆ ಆಸ್ತಿ ಮಾರಾಟ ಮತ್ತು ಖರೀದಿ ವಿಚಾರದಲ್ಲಿ ನಿಯಮ ಬದಲಾವಣೆ ಆಗಲಿದ್ದು, ಅದರ ಜೊತೆಗೆ ಆಸ್ತಿ ನೋಂದಣಿಗೆ ನಿಗದಿ ಮಾಡಲಾಗಿರುವ ದರ ಕೂಡ ಜಾಸ್ತಿ ಆಗಲಿದೆ ಎಂದು ಮಾಹಿತಿ ಸಿಕ್ಕಿದೆ.

ವರ್ಷಕ್ಕೆ ಒಂದು ಸಾರಿ ಆಸ್ತಿ ಖರೀದಿ ಮತ್ತು ಮಾರಾಟ ಮಾಡುವ ನಿಯಮಗಳನ್ನು ಪರಿಷ್ಕರಿಸಬಹುದು ಎಂದು ನಿಯಮವಿದ್ದು, ಅದೇ ರೀತಿ 2023ರ ಆಕ್ಟೊಬರ್ 1 ರಿಂದ ಹೊಸ ನಿಯಮ ಜಾರಿಗೆ ಬರಲಿದೆ. Land Registration Rate ಕೂಡ ಜಾಸ್ತಿಯಾಗಲಿದೆ. ಆಸ್ತಿ ಖರೀದಿ ಮಾಡುವ ವಿಚಾರದಲ್ಲಿ ಈ ಮೊದಲೇ ಹೊಸ ನಿಯಮಗಳನ್ನು ಜಾರಿಗೆ ತಂದಿರುವ ಸರ್ಕಾರ, ಇದೀಗ ಮತ್ತೊಂದು ಹೊಸ ನಿಯಮವನ್ನು ಜಾರಿಗೆ ತಂದಿದೆ. ಇದೀಗ ಆಸ್ತಿ ಖರೀದಿಯಲ್ಲಿ ಮುದ್ರಾಣಾಂಕ ಶುಲ್ಕವನ್ನು ಜಾಸ್ತಿ ಮಾಡಲಿದೆ.

ಎಪಿಎಲ್ ಕಾರ್ಡ್ ಇದ್ರೂ ಸಿಗುತ್ತಾ ಗೃಹಲಕ್ಷ್ಮಿ ಹಣ? ಈಗಲೂ ಅಪ್ಲೈ ಮಾಡಬಹುದಾ? ಇಲ್ಲಿದೆ ಉತ್ತರ

ಹಾಗಾಗಿ ಆಸ್ತಿ ಖರೀದಿ ಮಾಡುವ ಮೊತ್ತ ಇನ್ನುಮುಂದೆ ಹೆಚ್ಚಾಗುತ್ತದೆ. ಸ್ಥಿರಾಸ್ತಿಗಳ ಮಾರಾಟ ಹಕ್ಕು ಮುಂದಿನ ತಿಂಗಳಿನಿಂದ ಜಾಸ್ತಿ ಆಗಲಿದೆ. ಈ ವರ್ಷ ಕಳೆಯುವ ವೇಳೆಗೆ ಆಸ್ತಿ ಮಾರಾಟದ ಖರ್ಚು 30 ಇಂದ 40% ವರೆಗು ಜಾಸ್ತಿಯಾಗಲಿದೆ. ಈ ಹೊಸ ನಿಯಮವು ಭೂಮಿ, ನಿವೇಶನ, ಕಟ್ಟಡ ಇದೆಲ್ಲದರ ಮೇಲೆ ಪರಿಣಾಮ ಬೀರಲಿದ್ದು, ಆಕ್ಟೊಬರ್ 1 ರಿಂದ ಹೊಸ ನಿಯಮ ಜಾರಿಗೆ ಬರಲಿದೆ.

Implementation of new rules for buying and selling property

Our Whatsapp Channel is Live Now 👇

Whatsapp Channel

Related Stories