ಜನ ಸಂಪರ್ಕಕ್ಕಾಗಿ ಸಿಎಂ ಸಿದ್ದರಾಮಯ್ಯ ಮತ್ತೊಂದು ಪ್ಲಾನ್; ಈಗಲೇ ಸಿಎಂ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ವಾಟ್ಸಾಪ್ ಚಾನೆಲ್ ಗೆ ಸಿಎಂ ಸಿದ್ದರಾಮಯ್ಯ ಅವರು ಕೂಡ ಸೇರ್ಪಡೆಗೊಂಡಿದ್ದಾರೆ (Karnataka CM WhatsApp Channel). ವಾಟ್ಸಪ್ ಚಾನೆಲ್ ಗೆ ನೀವು ಸೇರಿಕೊಂಡು ನಿರಂತರವಾಗಿ ಮಾಹಿತಿ ಪಡೆಯಬಹುದು.
ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಒಬ್ಬ ಆಡಳಿತ ವ್ಯಕ್ತಿ, ಅದರಲ್ಲೂ ರಾಜ್ಯದ ಮುಖ್ಯಮಂತ್ರಿ ಅವರ ಜೊತೆಗೆ ಅವರ ಆಡಳಿತದ ಬಗ್ಗೆ ಪಾರದರ್ಶಕ (Transparency) ಮಾಹಿತಿಯನ್ನು ಜನರು ನೇರವಾಗಿ ಪಡೆದುಕೊಳ್ಳಬಹುದು.
ಇಂಥ ಒಂದು ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಅವರು ಭದ್ಧರಾಗಿದ್ದಾರೆ. ನೀವು ಕೂಡ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ವಾಟ್ಸಾಪ್ ಚಾನೆಲ್ (WhatsApp Channel) ಗೆ ಸೇರಿಕೊಂಡರೆ ಸರ್ಕಾರದ ಆಗುಹೋಗುಗಳ ಪ್ರತಿ ಕ್ಷಣದ ವರದಿ ನಿಮ್ಮ ಕೈಯಲ್ಲಿ ಇರುತ್ತೆ.
ರೇಷನ್ ಕಾರ್ಡ್ eKYC ಆಗಿದ್ಯೋ ಇಲ್ಲವೋ ಒಂದೇ ಕ್ಲಿಕ್ ನಲ್ಲಿ ಚೆಕ್ ಮಾಡಿ? ಆಗದೆ ಇದ್ರೆ ಈ ರೀತಿ ಮಾಡಿ
ಸಿಎಂ ಸಿದ್ದರಾಮಯ್ಯ ಅವರ ಹೊಸ ವಾಟ್ಸಪ್ ಚಾನೆಲ್;
ಇತ್ತೀಚಿಗೆ ಮೆಟ್ (Meta) ವಾಟ್ಸಪ್ ಚಾನಲ್ ಎನ್ನುವ ಹೊಸ ಫೀಚರ್ ಒಂದನ್ನು ಪರಿಚಯಿಸಿದೆ. ನೀವು ನಿಮ್ಮ ಮೊಬೈಲ್ ನಲ್ಲಿ ಸ್ಟೇಟಸ್ (Status) ಎನ್ನುವ ಆ ಜಾಗದಲ್ಲಿ ಈಗ ಅಪ್ಡೆಟ್ಸ್ (updates) ಎನ್ನುವ ಆಯ್ಕೆಯನ್ನು ಕಾಣುತ್ತೀರಿ.
ಇಲ್ಲಿ ಟ್ವಿಟರ್ (Twitter) ನಲ್ಲಿ ಇರುವಂತೆ ಸಾಕಷ್ಟು ಚಾನೆಲ್ ಗಳು ಕಾಣಿಸುತ್ತವೆ. ನಿಮಗೆ ಇಷ್ಟವಾದ ಹಾಗೂ ಪ್ರಮುಖವಾದ ಚಾನೆಲ್ ಗಳಿಗೆ ನೀವು ಸೇರ್ಪಡೆಗೊಳ್ಳಬಹುದು. ಹೀಗೆ ಮಾಡಿದರೆ ಆ ಚಾನೆಲ್ ನ ಪ್ರತಿಯೊಂದು ಅಪ್ಡೇಟ್ ಕೂಡ ನಿಮಗೆ ತಕ್ಷಣವೇ ಸಿಗುತ್ತದೆ.
ಸಿಎಂ ಸಿದ್ದರಾಮಯ್ಯ ಅವರ ವಾಟ್ಸಪ್ ಚಾನೆಲ್
ಈ ರೀತಿ ವಾಟ್ಸಾಪ್ ಚಾನೆಲ್ ಗೆ ಸಿಎಂ ಸಿದ್ದರಾಮಯ್ಯ ಅವರು ಕೂಡ ಸೇರ್ಪಡೆಗೊಂಡಿದ್ದಾರೆ (Karnataka CM WhatsApp Channel). ಸಿಎಂ ಸಿದ್ದರಾಮಯ್ಯ ಅವರ ವಾಟ್ಸಪ್ ಚಾನೆಲ್ ಗೆ ನೀವು ಸೇರಿಕೊಂಡು ನಿರಂತರವಾಗಿ ಈ ಚಾನೆಲ್ ಮೂಲಕ ಸರ್ಕಾರದ ಪ್ರತಿಯೊಂದು ಹೆಜ್ಜೆಯ ಬಗ್ಗೆ ಮಾಹಿತಿ ಪಡೆಯಬಹುದು.
ಎಪಿಎಲ್ ಕಾರ್ಡ್ ಇದ್ರೂ ಸಿಗುತ್ತಾ ಗೃಹಲಕ್ಷ್ಮಿ ಹಣ? ಈಗಲೂ ಅಪ್ಲೈ ಮಾಡಬಹುದಾ? ಇಲ್ಲಿದೆ ಉತ್ತರ
75,000ಕ್ಕೂ ಅಧಿಕ ಮಂದಿ ಸೇರ್ಪಡೆ!
ಸಿಎಂ ಸಿದ್ದರಾಮಯ್ಯ ಅವರ ಚಾನೆಲ್ ಸೆಪ್ಟೆಂಬರ್ 19ಕ್ಕೆ ಆರಂಭವಾಗಿತ್ತು. ಈಗಾಗಲೇ 75,000ಕ್ಕೂ ಹೆಚ್ಚಿನ ಜನ ಈ ಚಾನೆಲ್ ಸೇರ್ಪಡೆಯಾಗಿದ್ದಾರೆ. ಇನ್ನಷ್ಟು ಜನ ಸೇರುವ ನಿರೀಕ್ಷೆ ಇದೆ. ಜನರಿಗೆ ಬೆರಳ ತುದಿಯಲ್ಲಿ ಸರ್ಕಾರದ ದೈನಂದಿನ ಕೆಲಸ ಆಗುಹೋಗುಗಳ ಬಗ್ಗೆ ಮಾಹಿತಿ ಒದಗಿಸುವುದು ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪರಿಣಾಮಕಾರಿಯಾಗಿ ಜನರಿಗೆ ಆಡಳಿತದ ಬಗ್ಗೆ ತಿಳಿಸುವುದು ಈ ಚಾನಲ್ ಉದ್ದೇಶ.
ಒಂದೇ ಮನೆಯಲ್ಲಿ ಎರಡು ಮೂರು ರೇಷನ್ ಕಾರ್ಡ್ ಇರುವವರಿಗೆ ಬಿಗ್ ಅಪ್ಡೇಟ್; ಬಂದಿದೆ ಹೊಸ ರೂಲ್ಸ್
ಸಿಎಂ ವಾಟ್ಸಪ್ ಚಾನೆಲ್ ಸೇರುವುದರಿಂದ ಏನು ಬೆನಿಫಿಟ್?
ನೀವು ದೈನಂದಿನ ಸಿಎಂ ಅವರ ಚಟುವಟಿಕೆಯ ಬಗ್ಗೆ ಅವರು ತೆಗೆದುಕೊಂಡು ನಿರ್ಧಾರ ಪ್ರಮುಖ ಸಭೆಗಳು ಪ್ರಮುಖ ಭೇಟಿ ಹೊಸ ಯೋಜನೆಯ ಬಗ್ಗೆ ಸಿಎಂ ನೀಡಿದ ಮಾಹಿತಿ, ಪ್ರಚಲಿತ ಘಟನೆಗಳು ಅದಕ್ಕೆ ಸಿಎಂ ಪ್ರತಿಕ್ರಿಯಿಸುವ ರೀತಿ ಹೀಗೆ ಪ್ರತಿಯೊಂದು ವಿಚಾರಗಳ ಬಗ್ಗೆ ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲದೆ ನೀವು ಇಮೂಜಿ ಕಳುಹಿಸುವ ಮೂಲಕ ಪ್ರತಿಕ್ರಿಯೆಯನ್ನು ಕೂಡ ತಿಳಿಸಬಹುದು.
ಸಿಎಂ ಚಾನೆಲ್ ಸೇರುವುದು ಹೇಗೆ?
ವಾಟ್ಸಾಪ್ ನಾ ಅಪ್ಡೇಟ್ಸ್ ಎನ್ನುವ ಆಯ್ಕೆ ಕ್ಲಿಕ್ ಮಾಡಿ ಅಲ್ಲಿ chief minister of Karnataka ಎಂದು ಸರ್ಚ್ ಮಾಡಿ. ನಿಮಗೆ ಸಿಎಂ ಅವರ ಅಧಿಕೃತ ಚಾನೆಲ್ ಕಾಣಿಸುತ್ತದೆ. ಚಾನೆಲ್ ಎದುರು ಇರುವ ಪ್ಲಸ್ ಮಾರ್ಕ್ ಒತ್ತುವುದರ ಮೂಲಕ ಅಧಿಕೃತವಾಗಿ ನೀವು ಕೂಡ ಆ ಚಾನೆಲ್ ಸದಸ್ಯರಾಗಬಹುದು.
ಇನ್ಮುಂದೆ ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸಲು ಸಾಧ್ಯವಿಲ್ಲ! ತಲೆ ನೋವಾಗಿ ಪರಿಣಮಿಸಿದೆ ಹೊಸ ನಿಯಮ
ಇನ್ನು ಈ ಸೌಲಭ್ಯ ಸಿಗಬೇಕು ಅಂದ್ರೆ ನೀವು ನಿಮ್ಮ ವಾಟ್ಸಪ್ ಅಪ್ಡೇಟ್ ಮಾಡಿಕೊಳ್ಳಬೇಕು. ಪ್ಲೇ ಸ್ಟೋರ್ ಗೆ ಹೋಗಿ ವಾಟ್ಸಾಪ್ ಎಂದು ಕ್ಲಿಕ್ ಮಾಡಿ ಅಲ್ಲಿ ನೀವು ವಾಟ್ಸಪ್ ಇನ್ಸ್ಟಾಲ್ ಮಾಡಿಕೊಂಡಿದ್ದರೆ ಅಪ್ಡೇಟ್ ಎನ್ನುವ ಆಯ್ಕೆ ಕಾಣಿಸುತ್ತದೆ. ಕೂಡಲೇ ಅಪ್ಡೇಟ್ ಮಾಡಿಕೊಂಡು, ವಾಟ್ಸಾಪ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಚಾನೆಲ್ ಸೇರ್ಪಡೆಗೊಳ್ಳಿ. ಪ್ರಚಲಿತ ಮಾಹಿತಿ ತಿಳಿದುಕೊಳ್ಳಿ.
Join to Karnataka CM Siddaramaiah WhatsApp channel