ರೇಷನ್ ಕಾರ್ಡ್ eKYC ಆಗಿದ್ಯೋ ಇಲ್ಲವೋ ಒಂದೇ ಕ್ಲಿಕ್ ನಲ್ಲಿ ಚೆಕ್ ಮಾಡಿ? ಆಗದೆ ಇದ್ರೆ ಈ ರೀತಿ ಮಾಡಿ
ನಿಮ್ಮ ರೇಷನ್ ಕಾರ್ಡ್ ಇ-ಕೆವೈಸಿ ಆಗದೆ ಇದ್ದಲ್ಲಿ ನಿಮಗೆ ಅನ್ನ ಭಾಗ್ಯದ ಹಣ ನೇರವಾಗಿ ನಿಮ್ಮ ಖಾತೆಗೆ (Bank Account) ವರ್ಗಾವಣೆ ಆಗುವುದಿಲ್ಲ. ಯಾವ ನಿಮ್ಮ ಬ್ಯಾಂಕ್ ಖಾತೆಗೆ ಬಂದರು ಅದು ನಿಮ್ಮ ಕೈ ಸೇರುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರ (Karnataka Government) ತಂದಿರುವ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವುದಕ್ಕೇ ಆಧಾರ್ ಕಾರ್ಡ್ (Aadhaar card) ಬ್ಯಾಂಕ್ (bank account) ಖಾತೆ ರೇಷನ್ ಕಾರ್ಡ್ (ration card) ಎಲ್ಲವು ಮುಖ್ಯವಾಗಿರುತ್ತದೆ ,ಜೊತೆಗೆ ಎಲ್ಲವೂ ಲಿಂಕ್ ಆಗಿರಬೇಕು.
ಬ್ಯಾಂಕ್ ಖಾತೆಗೆ ಇ-ಕೆವೈಸಿ (ekyc) ಮಾಡಿಸಿಕೊಂಡಿರಬೇಕು. ಈ ಕೆಲಸಗಳು ಆಗದೆ ಇದ್ದರೆ ಸರ್ಕಾರದಿಂದ ಸಿಗುವ ಹಣ ನಿಮ್ಮ ಖಾತೆಗೆ ಬರುವುದಿಲ್ಲ. ಆದರೆ ನೀವು ಆನ್ಲೈನ್ (online) ಮೂಲಕ ಸುಲಭವಾಗಿ ಈ ಕೆವೈಸಿ ಆಗಿದ್ಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.
ಒಂದು ವೇಳೆ ಆಗದೆ ಇದ್ದಲ್ಲಿ ಏನು ಮಾಡಬೇಕು ಎಂಬುದನ್ನು ಈ ಲೇಖನ ಓದಿ ತಿಳಿದುಕೊಳ್ಳಿ ತಕ್ಷಣವೇ ಆ ಕೆಲಸ ಮಾಡಿ.
ಎಪಿಎಲ್ ಕಾರ್ಡ್ ಇದ್ರೂ ಸಿಗುತ್ತಾ ಗೃಹಲಕ್ಷ್ಮಿ ಹಣ? ಈಗಲೂ ಅಪ್ಲೈ ಮಾಡಬಹುದಾ? ಇಲ್ಲಿದೆ ಉತ್ತರ
ಇ-ಕೆವೈಸಿ ಚೆಕ್ ಮಾಡುವುದು ಹೇಗೆ?
ಮೊದಲನೆಯದಾಗಿ ಆಹಾರ ಇಲಾಖೆಯ https://ahara.kar.nic.in/Home/EServices ಈ ವೆಬ್ ಸೈಟ್ ಗೆ ಹೋಗಿ.
ಅಲ್ಲಿ ಈ ಸರ್ವಿಸ್ (e service) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನಂತರ ನಿಮ್ಮ ಎಡಭಾಗದಲ್ಲಿ ಸ್ಕ್ರೀನ್ ಮೇಲೆ ಕಾಣುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ.
ಅಲ್ಲಿ ಇ – ಸ್ಟೇಟಸ್ (E status) ಎನ್ನುವ ಆಯ್ಕೆ ಕಾಣಿಸುತ್ತಿದೆ.
ಅದರ ಒಳಗೆ ಡಿಬಿಟಿ ಸ್ಟೇಟಸ್ (dbt status) ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನಂತರ ಹೊಸ ಪೇಜ್ ತೆರೆದುಕೊಳ್ಳುತ್ತದೆ ಅದರಲ್ಲಿ ಪಡಿತರ ಚೀಟಿ ವಿವರ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಬಳಿಕ ಮತ್ತೊಂದು ಪೇಜ್ ತೆರೆದುಕೊಳ್ಳುತ್ತದೆ ಅಲ್ಲಿ ನೀವು ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿ ಗೋ (GO) ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ಒಂದೇ ಮನೆಯಲ್ಲಿ ಎರಡು ಮೂರು ರೇಷನ್ ಕಾರ್ಡ್ ಇರುವವರಿಗೆ ಬಿಗ್ ಅಪ್ಡೇಟ್; ಬಂದಿದೆ ಹೊಸ ರೂಲ್ಸ್
ಬಳಿಕ ನಿಮ್ಮ ರೇಷನ್ ಕಾರ್ಡ್ ಸಂಪೂರ್ಣ ವಿವರ ಅಲ್ಲಿ ಕಾಣಿಸುತ್ತದೆ ಎಷ್ಟು ಜನ ರೇಷನ್ ಕಾರ್ಡ್ ನಲ್ಲಿ ಸದಸ್ಯರ ಸಂಖ್ಯೆ ಹೆಸರುಗಳು ಇವೆ ಎಲ್ಲಾ ಸದಸ್ಯರ ಹೆಸರುಗಳಿಗೂ ಇ-ಕೆವೈಸಿ ಆಗಿದೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಜೊತೆಗೆ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ನಿಮಗೆ ಎಷ್ಟು ಅಕ್ಕಿ ಅಥವಾ ಹಣ ಸಂದಾಯವಾಗಿದೆ (Money Deposit) ಎಂಬ ಮಾಹಿತಿಯು ಲಭ್ಯವಾಗುತ್ತದೆ.
ಇ-ಕೆವೈಸಿ ಆಗದೇ ಇದ್ದರೆ ಏನು ಮಾಡಬೇಕು?
ಇನ್ಮುಂದೆ ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸಲು ಸಾಧ್ಯವಿಲ್ಲ! ತಲೆ ನೋವಾಗಿ ಪರಿಣಮಿಸಿದೆ ಹೊಸ ನಿಯಮ
ನಿಮ್ಮ ರೇಷನ್ ಕಾರ್ಡ್ ಇ-ಕೆವೈಸಿ ಆಗದೆ ಇದ್ದಲ್ಲಿ ನಿಮಗೆ ಅನ್ನ ಭಾಗ್ಯದ ಹಣ ನೇರವಾಗಿ ನಿಮ್ಮ ಖಾತೆಗೆ (Bank Account) ವರ್ಗಾವಣೆ ಆಗುವುದಿಲ್ಲ. ಯಾವ ನಿಮ್ಮ ಬ್ಯಾಂಕ್ ಖಾತೆಗೆ ಬಂದರು ಅದು ನಿಮ್ಮ ಕೈ ಸೇರುವುದಿಲ್ಲ. ಹಾಗಾಗಿ ಕೂಡಲೇ ಬಹಳ ಮುಖ್ಯವಾಗಿರುವ ಇ-ಕೆವೈಸಿ ಮಾಡಿಸಿ ಸರ್ಕಾರ ನೀಡುವ ಪ್ರಯೋಜನ ಪಡೆದುಕೊಳ್ಳಿ.
Check whether Your Ration Card is eKYC or not in one click Online
Follow us On
Google News |