ಗೃಹಲಕ್ಷ್ಮಿ ಯೋಜನೆ ಹಣ ಇನ್ನೂ ಬಂದಿಲ್ಲದ ಮಹಿಳೆಯರಿಗೆ ಮತ್ತೊಂದು ಅಪ್ಡೇಟ್ ಕೊಟ್ಟ ಸರ್ಕಾರ
ಗೃಹಲಕ್ಷ್ಮಿ ಯೋಜನೆಗೆ ಬೇಕಾಗಿರುವ ಪ್ರಮುಖ ದಾಖಲೆ ಅಂದರೆ ರೇಷನ್ ಕಾರ್ಡ್ (ration card). ಅದು ಎಪಿಎಲ್ (APL card) ಆಗಿರಬಹುದು ಅಥವಾ ಬಿಪಿಎಲ್ ಕಾರ್ಡ್ (BPL card) ಆಗಿರಬಹುದು.
ಗೃಹಲಕ್ಷ್ಮಿ ಯೋಜನೆ (Gruha Lakshmi scheme) ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು ಈ ಯೋಜನೆಯ ಅಡಿಯಲ್ಲಿ ಕರ್ನಾಟಕದ ಪ್ರತಿ ಕುಟುಂಬದ ಮೊದಲ ಗೃಹಿಣಿ ಯ ಖಾತೆಗೆ ಎರಡು ಸಾವಿರ ರೂಪಾಯಿಗಳನ್ನು ಜಮಾ (Bank Account) ಮಾಡಲಾಗುತ್ತದೆ.
ಮೊದಲ ಕಂತಿನ ಹಣ ಆಗಸ್ಟ್ 30 ರಿಂದ ಬಿಡುಗಡೆಯಾಗಿದೆ. ಕೋಟಿಗಟ್ಟಲೆ ಅರ್ಜಿಗಳು ಸಲ್ಲಿಕೆಯಾಗಿದ್ದು ಇದರಲ್ಲಿ ಸುಮಾರು 82 ಲಕ್ಷ ಜನರ ಖಾತೆಗೆ ಈಗಾಗಲೇ ಹಣ ವರ್ಗಾವಣೆಯಾಗಿದೆ (Money Transfer).
ಇವರಿಗಿಲ್ಲ ಗೃಹಲಕ್ಷ್ಮಿ ಹಣ! 1 ಲಕ್ಷ ಎಪಿಎಲ್, ಬಿಪಿಎಲ್ ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿಗಳು ತಿರಸ್ಕೃತ
ಅರ್ಜಿ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತ
ಬೆಂಗಳೂರು ಒನ್, ಗ್ರಾಮ ಒನ್, ಬಾಪೂಜಿ ಕೇಂದ್ರ ಹಾಗೂ ಕರ್ನಾಟಕ ಒನ್ ಈ ನಾಲ್ಕು ಸೇವಾ ಕೇಂದ್ರಗಳಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವವರ ಅರ್ಜಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಸ್ಪಷ್ಟನೆ ನೀಡಿದ್ದು ಹಣ ಸಂದಾಯ ಮಾಡುವ ಪ್ರಕ್ರಿಯೆ ಜಾರಿಯಲ್ಲಿ ಇದೆ. ಹಾಗಾಗಿ ಈ ಗೊಂದಲ ನಿವಾರಣೆಯಾಗುವವರೆಗೆ ಒಂದರಿಂದ ಎರಡು ವಾರಗಳ ಕಾಲ ಹೊಸ ಅರ್ಜಿ ತೆಗೆದುಕೊಳ್ಳುವ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಎಲ್ಲರಿಗೂ ಹಣ ಸಿಗುವುದಿಲ್ಲವೇ?
ಕೆಲವರಿಗೆ ಹಣ ಬಂದಿದೆ ಆದರೆ ಇನ್ನೂ ಸಾಕಷ್ಟು ಅರ್ಜಿ ಸಲ್ಲಿಸಿರುವ (application) ಫಲಾನುಭವಿಗಳಿಗೆ ಮೊದಲ ಕಂತಿನ ಹಣ (first installment) ಬಂದಿಲ್ಲ, ಸರ್ಕಾರ ವಿಳಂಬ ಆಗುತ್ತಿರುವುದಕ್ಕೆ ಕಾರಣಗಳನ್ನು ಕೊಟ್ಟಿದ್ದು ಸೆಪ್ಟೆಂಬರ್ ತಿಂಗಳ (September) ಕೊನೆಯ ಒಳಗೆ ಎಲ್ಲರ ಖಾತೆಗೂ ಹಣ ಬರುವುದಾಗಿ ಭರವಸೆ ನೀಡಿದೆ.
ಇದಕ್ಕೆ ಸ್ಪಷ್ಟನೆ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಮೊದಲ ಬಾರಿಗೆ ಈ ಯೋಜನೆ ಕರ್ನಾಟಕದಲ್ಲಿ ಜಾರಿಯಾಗಿದ್ದು ಮೊದಲ ಕಂತಿನ ಹಣ ಸ್ವಲ್ಪ ವಿಳಂಬವಾದರೂ ಎರಡನೇ ಕಂತಿನ ಹಣ ಎಲ್ಲರೂ ಖಾತೆಗೂ ಬೇಗ ಬಂದು ತಲುಪುತ್ತದೆ. ಹಾಗೂ ಯಾರಿಗೆಲ್ಲಾ ಮೊದಲ ಕಂತಿನ ಹಣ ಇನ್ನೂ ಸಿಕ್ಕಿಲ್ಲವೋ ಅಂತವರಿಗೆ ಎರಡನೇ ಕಂತಿನ ಹಣವನ್ನು ಸೇರಿಸಿ ಒಟ್ಟಿಗೆ 4,000 ರೂ.ಖಾತೆಗೆ ಬರುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಆಸ್ತಿ ಖರೀದಿ ಮತ್ತು ಮಾರಾಟ ಮಾಡುವವರಿಗೆ ಹೊಸ ನಿಯಮ ಜಾರಿ! ಇನ್ಮುಂದೆ ಹೊಸ ರೂಲ್ಸ್
ರೇಷನ್ ಕಾರ್ಡ್ ಸರಿಪಡಿಸಿಕೊಂಡಿಲ್ಲವೇ?
ಆದರೆ ಅರ್ಜಿ ಸಲ್ಲಿಸುವ ಮಹಿಳೆಯರು ರೇಷನ್ ಕಾರ್ಡ್ ಹೊಂದಿರಬೇಕು ಹಾಗೂ ಆ ರೇಷನ್ ಕಾರ್ಡ್ ನಲ್ಲಿ ಮೊದಲ ಹೆಸರು ಮನೆಯ ಗೃಹಿಣಿಯದ್ದೇ ಆಗಿರಬೇಕು. ಈ ನಿಯಮವನ್ನು ಸರ್ಕಾರ ಹೇಳಿದ ನಂತರ ಸಾಕಷ್ಟು ಜನ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಂಡಿದ್ದಾರೆ
ಇದಕ್ಕಾಗಿ ಸೆಪ್ಟೆಂಬರ್ ಒಂದರಿಂದ 10ನೇ ತಾರೀಖಿನ ವರೆಗೆ ಸರ್ಕಾರ ಅವಕಾಶವನ್ನು ಕೂಡ ನೀಡಿತ್ತು. ಆದ್ರೆ ಇನ್ನೂ ಹಲವರು ರೇಷನ್ ಕಾರ್ಡ್ ತಿದ್ದುಪಡಿ (ration card correction) ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಹಾಗಾಗಿ ಗೃಹಲಕ್ಷ್ಮಿ ಅರ್ಜಿ ಹಾಕಿದರು ಅವರಿಗೆ ಹಣ ಬಂದು ಸೇರಿಲ್ಲ.
ರೇಷನ್ ಕಾರ್ಡ್ eKYC ಆಗಿದ್ಯೋ ಇಲ್ಲವೋ ಒಂದೇ ಕ್ಲಿಕ್ ನಲ್ಲಿ ಚೆಕ್ ಮಾಡಿ? ಆಗದೆ ಇದ್ರೆ ಈ ರೀತಿ ಮಾಡಿ
ಆನ್ಲೈನ್ ನಲ್ಲಿ ಸ್ಟೇಟಸ್ ಚೆಕ್ ಮಾಡಬಹುದಾ?
https://sevasindhugs.karnataka.gov.in/ ಸರ್ಕಾರದ ಈ ಅಧಿಕೃತ ವೆಬ್ಸೈಟ್ನಲ್ಲಿ (website) ನೀವು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ನಿಮ್ಮ ಅಪ್ಲಿಕೇಶನ್ ನ ಸ್ಥಿತಿ ತಿಳಿದುಕೊಳ್ಳಬಹುದಾಗಿದೆ.
ಅಷ್ಟೇ ಅಲ್ಲದೆ ಕರ್ನಾಟಕ ಸರ್ಕಾರ ಡಿ ಬಿ ಟಿ ಕರ್ನಾಟಕ (DBT Karnataka) ಎನ್ನುವ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಗೃಹಲಕ್ಷ್ಮಿ ಯೋಜನೆಯ ಹಾಗೂ ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ (Bank Account) ಬಂದಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.
ಯಾರ ಬಳಿ ಸರಿಯಾದ ದಾಖಲೆ ಇದೆಯೋ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಹಾಗೂ ಹೆಸರು ಹೋಲಿಕೆ ಆಗುತ್ತದೆಯೋ ಅಂತವರ ಖಾತೆಗೆ ಸದ್ಯದಲ್ಲಿಯೇ ಹಣ ಬರಲಿದೆ. ಇದರ ಜೊತೆಗೆ ರೇಷನ್ ಕಾರ್ಡ್ ನಲ್ಲಿ ಅಗತ್ಯ ಇರುವ ತಿದ್ದುಪಡಿ ಮಾಡಿಕೊಂಡು ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು
ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ತಿಳಿಸಿರುವಂತೆ ಕೊನೆಯ ದಿನಾಂಕ ಎಂಬುದು ಇಲ್ಲ, ವರ್ಷ ಪೂರ್ತಿ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ ನಿಮ್ಮ ಬಳಿ ಹೊಸ ರೇಷನ್ ಕಾರ್ಡ್ ಬಂದ ನಂತರವೂ ಕೂಡ ನೀವು ಅರ್ಜಿ ಸಲ್ಲಿಸಬಹುದು.
The government Given Update For who have not yet received the Gruha Lakshmi Yojana money
Follow us On
Google News |