ಕುದುರೆಮುಖ ಅರಣ್ಯದಲ್ಲಿ ಭೀಕರ ಕಾಡ್ಗಿಚ್ಚು
ಕುದುರೆಮುಖ ಅರಣ್ಯದಲ್ಲಿ ಭೀಕರ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಇದರಿಂದ 10 ಎಕರೆ ಮರ, ಗಿಡ, ಬಳ್ಳಿಗಳು ಸುಟ್ಟು ನಾಶವಾಗಿವೆ.
ಚಿಕ್ಕಮಗಳೂರು: ಕುದುರೆಮುಖ ಅರಣ್ಯದಲ್ಲಿ ಭೀಕರ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಇದರಿಂದ 10 ಎಕರೆ ಮರ, ಗಿಡ, ಬಳ್ಳಿಗಳು ಸುಟ್ಟು ನಾಶವಾಗಿವೆ, ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಅರಣ್ಯದ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಬಗ್ಗೆ ಆ ಭಾಗದ ಜನರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದಾದ ನಂತರ ಅರಣ್ಯ ಇಲಾಖೆಯವರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.
ಅಗ್ನಿಶಾಮಕ ವಾಹನ ಹೋಗಲು ಸಾಧ್ಯವಾಗದ ಕಾರಣ ಅರಣ್ಯ ಇಲಾಖೆ ಕಾರ್ಯಕರ್ತರು ಹಾಗೂ ಸ್ವಯಂ ಸೇವಕರು ಸೇರಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಆದರೆ ಬೆಂಕಿ ಹೊತ್ತಿ ಉರಿದಿದ್ದರಿಂದ ನಂದಿಸಲು ಸಾಧ್ಯವಾಗಲಿಲ್ಲ.
ಹಗಲು ರಾತ್ರಿ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಸುದೀರ್ಘ ಹೋರಾಟದ ನಂತರ ಬೆಂಕಿಯನ್ನು ಹತೋಟಿಗೆ ತರಲಾಯಿತು. ಆದರೆ ಕಾಡ್ಗಿಚ್ಚು ಸಂಪೂರ್ಣವಾಗಿ ನಂದಿಸಲಾಗಿಲ್ಲ. ಬೆಂಕಿ ನಂದಿಸಲು ಅರಣ್ಯ ಇಲಾಖೆ ಗಂಭೀರ ಕ್ರಮ ಕೈಗೊಳ್ಳುತ್ತಿದೆ. ಈ ಕಾರ್ಯದಲ್ಲಿ 50ಕ್ಕೂ ಹೆಚ್ಚು ಮಂದಿ ತೊಡಗಿಸಿಕೊಂಡಿದ್ದಾರೆ.
ಈ ಬೆಂಕಿಯಿಂದಾಗಿ ಕುದುರೆಮುಖ ಅರಣ್ಯ ಪ್ರದೇಶದಲ್ಲಿ 10 ಎಕರೆ ಮರ, ಗಿಡ, ಬಳ್ಳಿಗಳು ನಾಶವಾಗಿವೆ. ಆದರೆ, ಯಾವುದೇ ಕಾಡು ಪ್ರಾಣಿಗಳು ಬೆಂಕಿಗೆ ಆಹುತಿಯಾಗಿವೆ ಎಂಬ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ನೀಡಿಲ್ಲ. ಬಿಸಿಲಿನ ಝಳಕ್ಕೆ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಅರಣ್ಯ ಇಲಾಖೆ ಶಂಕೆ ವ್ಯಕ್ತಪಡಿಸಿದೆ.
Terrible forest fire in Kudremukha forest
Follow us On
Google News |
Advertisement