ಗೃಹಲಕ್ಷ್ಮಿ ಯೋಜನೆಗೆ ಇನ್ನು ಅರ್ಜಿ ಹಾಕಿಲ್ಲದವರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ! ಎಲ್ಲರಿಗೂ ಸಿಗಲಿದೆ ಯೋಜನೆಯ ಫಲ
ಗೃಹಲಕ್ಷ್ಮಿ ಯೋಜನೆಗೆ ನೀವು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಅರ್ಜಿ ಹಾಕಲು ಇನ್ನು ಕೊನೆಯ ದಿನಾಂಕವನ್ನು ನಿಗದಿ ಮಾಡಿಲ್ಲ.
ನಮ್ಮ ರಾಜ್ಯದಲ್ಲಿ ಎಲ್ಲ ಹೆಣ್ಣುಮಕ್ಕಳು ಕಾಯುತ್ತಿದ್ದ ಸರ್ಕಾರದ ಗ್ಯಾರಂಟಿ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆ (Gruha lakshmi yojana) ಎಂದು ಹೇಳಬಹುದು. ಈ ಯೋಜನೆಯ ಮೂಲಕ ಮನೆ ನಡೆಸುತ್ತಿರುವ ಎಲ್ಲಾ ಗೃಹಿಣಿಯರ ಬ್ಯಾಂಕ್ ಅಕೌಂಟ್ ಗೆ (Bank Account) ₹2000 ರೂಪಾಯಿ ಜಮೆ ಮಾಡುತ್ತಿದೆ ಸರ್ಕಾರ.
ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 30ರಂದು ಚಾಲನೆ ಸಿಕ್ಕಿದ್ದು, ಅರ್ಜಿ ಹಾಕಿ ಅರ್ಹತೆ ಹೊಂದಿರುವ ಬಹಳಷ್ಟು ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ ಗೃಹಲಕ್ಷ್ಮಿ ಯೋಜನೆಯ ಹಣ ಡಿಬಿಟಿ ಮೂಲಕ ಕ್ರೆಡಿಟ್ (Amount Credited) ಆಗಿದೆ.
ಇನ್ಮುಂದೆ ಸಿಗೋದಿಲ್ಲ ಬಿಪಿಎಲ್ ರೇಷನ್ ಕಾರ್ಡ್! ರಾಜ್ಯ ಸರ್ಕಾರದಿಂದ ರಾತ್ರೋ ರಾತ್ರಿ ಬಿಗ್ ಅಪ್ಡೇಟ್
1.10 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಅರ್ಜಿ (Application) ಸಲ್ಲಿಸಿದ್ದಾರೆ. ಒಂದು ವೇಳೆ ಇನ್ನು ಅರ್ಜಿ ಸಲ್ಲಿಸಿಲ್ಲ ಎಂದರೆ ಅಂಥ ಮಹಿಳೆಯರು ಈಗಲೂ ಕೂಡ ಅರ್ಜಿ ಸಲ್ಲಿಸಬಹುದು.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂದು ನಿಗದಿ ಮಾಡಿಲ್ಲ. ಎಲ್ಲಾ ಮಹಿಳೆಯರಿಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ಸರ್ಕಾರ ನೀಡಿರುವುದರಿಂದ ಒಂದು ವೇಳೆ ನೀವಿನ್ನು ಅರ್ಜಿ ಸಲ್ಲಿಸಿಲ್ಲ ಎಂದರೆ ಈಗಲೂ ಅರ್ಜಿ ಸಲ್ಲಿಸಬಹುದು. ಅದಕ್ಕಾಗಿ ಯಾವೆಲ್ಲಾ ದಾಖಲೆಗಳು (Documents) ಬೇಕಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮುಖ್ಯವಾಗಿ ಬೇಕಾಗುವ ದಾಖಲೆಗಳು..
*ಆಧಾರ್ ಕಾರ್ಡ್ (Aadhar Card)
*ಬ್ಯಾಂಕ್ ಅಕೌಂಟ್ ಮಾಹಿತಿ (ಆಧಾರ್ ಕಾರ್ಡ್ ರೇಶನ್ ಕಾರ್ಡ್ ಗೆ ಲಿಂಕ್ ಆಗಿರಬೇಕು..)
ಇದಿಷ್ಟು ದಾಖಲೆಗಳು ನಿಮ್ಮ ಹತ್ತಿರ ಇದ್ದರೆ ಸಾಕು, ಗೃಹಲಕ್ಷ್ಮಿ ಯೋಜನೆಗೆ ಸುಲಭವಾಗಿ ಅಪ್ಲೈ ಮಾಡಬಹುದು.
ಗೃಹಲಕ್ಷ್ಮಿ ಯೋಜನೆಯ ₹2000 ಇನ್ನು ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ, ಹಣ ಬರುತ್ತೋ ಇಲ್ಲವೋ ಗೊತ್ತಾಗುತ್ತೆ
ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಲು ನಿಮ್ಮ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮಹಿಳೆಯ ಹೆಸರು ಮುಖ್ಯಸ್ಥೆಯ ಸ್ಥಾನದಲ್ಲಿ ಇರುವುದು ಕಡ್ಡಾಯವಾಗಿದೆ.
ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಈ ರೀತಿ ಇಲ್ಲ ಎಂದರೆ ನೀವು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿ, ಮಹಿಳೆಯನ್ನು ಮನೆಯ ಮುಖ್ಯಸ್ಥೆ ಎಂದು ಮಾಡಿಸಿಕೊಳ್ಳಬಹುದು. ರೇಷನ್ ಕಾರ್ಡ್ ತಿದ್ದುಪಡಿಗೆ (Ration Card Correction) ಸರ್ಕಾರ ಅವಕಾಶ ನೀಡಿರುವುದರಿಂದ, ತಿದ್ದುಪಡಿ ಮಾಡಿಸಿಕೊಂಡು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಗೃಹಲಕ್ಷ್ಮಿ ಯೋಜನೆಗೆ ನೀವು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಅರ್ಜಿ ಹಾಕಲು ಇನ್ನು ಕೊನೆಯ ದಿನಾಂಕವನ್ನು ನಿಗದಿ ಮಾಡಿಲ್ಲ. ಇದೊಂದು ನಿರಂತರ ಯೋಜನೆ ಎಂದು ಸರ್ಕಾರ ತಿಳಿಸಿದ್ದು, ಒಂದು ವೇಳೆ ನೀವು ಇನ್ನು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಎಂದರೆ ಈಗಲೇ ಅರ್ಜಿ ಸಲ್ಲಿಸಿ, ಸರ್ಕಾರ ನೀಡುತ್ತಿರುವ ಯೋಜನೆಯ ಸೌಲಭ್ಯವನ್ನು ಪಡೆಯಿರಿ.
The government has given good news to those who have not applied for the Gruha Lakshmi Yojana
Follow us On
Google News |