ಇಂತಹ ರೈತರಿಗೆ ಸರ್ಕಾರವೇ ಕೊಡುತ್ತೆ 10,000 ರೂಪಾಯಿ! ರೈತರಿಗೆ ಬಂಪರ್ ಅವಕಾಶ
ಬ್ಯಾಂಕ್ ಟ್ರಾನ್ಸ್ಫರ್ (Bank Transfer) ತಂತ್ರಜ್ಞಾನದ ಮೂಲಕ ರಾಜ್ಯ ಸರ್ಕಾರ ಈ ಹಣವನ್ನು ನೇರವಾಗಿ ರೈತರ ಖಾತೆಗೆ (Bank Account) ವರ್ಗಾವಣೆ ಮಾಡಲಿದೆ.
ನಮ್ಮ ದೇಶದ ಬೆನ್ನೆಲುಬು ರೈತ. ನಮ್ಮ ಸರ್ಕಾರ ಅವರಿಗೆ ಉಪಯೋಗ ಆಗುವ ರೀತಿಯಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತದೆ. ಅದೇ ರೀತಿಯಲ್ಲಿ ಇವತ್ತಿನ ಲೇಖನದ ಮೂಲಕ ನಾವು ಕಡಿಮೆ ಭೂಮಿ ಇರುವಂತಹ ರೈತರಿಗೆ ಸರ್ಕಾರ ನೀಡಲು ಹೊರಟಿರುವಂತಹ ಸಹಾಯಧನದ ಬಗ್ಗೆ ಹೇಳಲು ಹೊರಟಿದ್ದೇವೆ.
ಒಂದು ವೇಳೆ ನೀವು ಕೂಡ ಇದೇ ವರ್ಗದ ರೈತರ ಸಾಲಿನಲ್ಲಿ ಬಂದರೆ ನೀವು ಕೂಡ ಅರ್ಜಿ ಸಲ್ಲಿಸಿ ಈ ಹಣವನ್ನು ಪಡೆದುಕೊಳ್ಳಬಹುದಾಗಿದ್ದು, ಹೇಗೆ ಎನ್ನುವುದರ ಬಗ್ಗೆ ಇಲ್ಲಿದೆ ಸಂಪೂರ್ಣ ಡೀಟೇಲ್ಸ್.
ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್; ಇಂಥವರ ಖಾತೆಗೆ ಹಣ ಮಿಸ್ ಆಗೋದಿಲ್ಲ!
ರೈತಸಿರಿ ಯೋಜನೆ!
ಅತ್ಯಂತ ಕಡಿಮೆ ಭೂಮಿ ಅಂದ್ರೆ ಎರಡು ಹೆಕ್ಟೇರಿಗಿಂತ ಕಡಿಮೆ ಭೂಮಿಯನ್ನು ಹೊಂದಿರುವಂತಹ ರೈತರಿಗೆ ಹತ್ತು ಸಾವಿರ ರೂಪಾಯಿಗಳ ಸಹಾಯಧನವನ್ನು ರೈತಸಿರಿ ಯೋಜನೆ ಅಡಿಯಲ್ಲಿ ನೀಡುವಂತಹ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಈ ಕಡಿಮೆ ಭೂಮಿಯಲ್ಲಿ ಬೆಳೆಯಲು ಬೇಕಾಗಿರುವಂತಹ ಬೀಜ ಹಾಗೂ ರಸಗೊಬ್ಬರಗಳನ್ನು ಖರೀದಿ ಮಾಡುವುದಕ್ಕಾಗಿ ರೈತರಿಗೆ 10 ಸಾವಿರ ರೂಪಾಯಿಗಳ ಈ ಧನ ಸಹಾಯವನ್ನು ರಾಜ್ಯ ಸರ್ಕಾರ ಮಾಡಲು ಹೊರಟಿದೆ. ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್ಫರ್ (Bank Transfer) ತಂತ್ರಜ್ಞಾನದ ಮೂಲಕ ರಾಜ್ಯ ಸರ್ಕಾರ ಈ ಹಣವನ್ನು ನೇರವಾಗಿ ರೈತರ ಖಾತೆಗೆ (Bank Account) ವರ್ಗಾವಣೆ ಮಾಡಲಿದೆ.
ಸಣ್ಣಪುಟ್ಟ ರೈತರಲ್ಲಿ ಸಿರಿಧಾನ್ಯದ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಕೂಡ ಸರ್ಕಾರ ಈ ಯೋಜನೆಯ ಮೂಲಕ ಮುಂದಾಗುತ್ತಿದೆ. ದೊಡ್ಡ ರೈತರಿಗೆ ಸಾಕಷ್ಟು ಯೋಜನೆಗಳನ್ನು ಸರ್ಕಾರ ಪರಿಚಯಿಸುವಂತಹ ಕೆಲಸವನ್ನು ಮಾಡಿದೆ, ಆದರೆ ಈ ರೀತಿ ಎರಡು ಹೆಕ್ಟೇರ್ ಗಿಂತ ಕಡಿಮೆ ಭೂಮಿ ಇರುವಂತಹ ರೈತರಿಗೆ ಈ ಯೋಜನೆಯ ಮೂಲಕ ಹತ್ತು ಸಾವಿರ ರೂಪಾಯಿಗಳ ಸಹಾಯಧನವನ್ನು ನೀಡುವ ಮೂಲಕ ಅವರಿಗೆ ಬೀಜಗಳನ್ನು ಹಾಗೂ ರಸಗೊಬ್ಬರಗಳನ್ನು ಖರೀದಿಸಲು ಬೇಕಾಗಿರುವಂತಹ ಹಣವನ್ನು ಸರ್ಕಾರವೇ ನೀಡಲು ಹೊರಟಿರೋದು ನಿಜಕ್ಕೂ ಮೆಚ್ಚ ಬೇಕಾಗಿರುವ ವಿಚಾರ.
ಈ ದಾಖಲೆಗಳು ಇದ್ರೆ ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ! ಇಲ್ಲಿದೆ ಡೀಟೇಲ್ಸ್
https://raitamitra.karnataka.gov.in/info-2/Raita+Siri/en ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ರೈತಸಿರಿ ಯೋಜನೆಯ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ನೀವು ಅರ್ಜಿಯನ್ನು ಸಲ್ಲಿಸುವಂತಹ ಕೆಲಸವನ್ನು ಮಾಡಬಹುದಾಗಿದೆ.
ಸಾಕಷ್ಟು ಸಣ್ಣ ಪುಟ್ಟ ರೈತರಿಗೆ ಸರ್ಕಾರದ ಈ ಯೋಜನೆ ಬಗ್ಗೆ ಮಾಹಿತಿ ಇರುವುದಿಲ್ಲ ಹೀಗಾಗಿ ಅಂಥವರ ಜೊತೆಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರಿಗೂ ಕೂಡ ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಫಲಾನುಭವಿಗಳಾಗುವುದಕ್ಕೆ ಸಹಾಯ ಮಾಡಿ.
ಅನ್ನಭಾಗ್ಯ ಯೋಜನೆ ಹಣದ ಸ್ಟೇಟಸ್ ಚೆಕ್ ಮಾಡಲು ಹೊಸ ಡೈರೆಕ್ಟ್ ಲಿಂಕ್ ಇಲ್ಲಿದೆ
ರೈತರ ಬೆಳವಣಿಗೆ ದೇಶದ ಬೆಳವಣಿಗೆ ಅನ್ನೋದನ್ನ ಈ ಮೂಲಕ ನೀವು ನೆನಪಿಟ್ಟುಕೊಳ್ಳಬೇಕಾಗಿರುತ್ತದೆ. ರೈತ ಸಿರಿ ಯೋಜನೆಯ ಲಾಭವನ್ನು ಈ ರೀತಿ ಸಣ್ಣಪುಟ್ಟ ರೈತರು ಪಡೆದುಕೊಳ್ಳುವುದಕ್ಕೆ ನೀವು ಕೂಡ ಕಾರಣಿಕರ್ತರಾಗಬಹುದಾಗಿದೆ. ಇಂತಹ ಸಾಕಷ್ಟು ಯೋಜನೆಗಳು ರೈತರಿಗಾಗಿ ಜಾರಿಗೆ ಬಂದಿದ್ದು ಇದರ ಸಂಪೂರ್ಣ ಮಾಹಿತಿಗಳು ರೈತರಿಗೆ ಅರ್ಹ ರೀತಿಯಲ್ಲಿ ಸಲ್ಲ ಬೇಕಾಗಿರುವುದು ಅತ್ಯಂತ ಅಗತ್ಯವಾಗಿದೆ.
The government will give 10,000 rupees to such farmers by this Scheme