ಒಂದು ಶಾಲೆ ಅಥವಾ ಕಾಲೇಜಿಗೆ ಸೇರಿಕೊಳ್ಳಲು (College Admission), ಕೆಲಸಕ್ಕೆ ಸೇರಲು (Join Job), ಅಥವಾ ಸರ್ಕಾರದ ಬೇರೆ ಪ್ರಯೋಜನಗಳನ್ನು (Govt Schemes) ಪಡೆಯಲು ನಮ್ಮ ಹತ್ತಿರ ಒಂದಷ್ಟು ದಾಖಲೆಗಳು (Important Documents) ಇರಬೇಕಾಗುತ್ತದೆ. ಆ ಎಲ್ಲಾ ದಾಖಲೆಗಳನ್ನು ನಾವು ಆದಷ್ಟು ಹುಷಾರಾಗಿಯೇ ಇಟ್ಟುಕೊಂಡಿರುತ್ತೇವೆ.
ಆದರೆ ಎಷ್ಟೇ ಹುಷಾರಾಗಿದ್ದರು ಕೂಡ, ಕೆಲವೊಮ್ಮೆ ದಾಖಲೆಗಳು ಕಳೆದು ಹೋಗುತ್ತದೆ. ಒಂದು ವೇಳೆ ಆ ರೀತಿ ಆದಾಗ, ಕಳೆದು ಹೋದ ದಾಖಲೆಗಳನ್ನು ಹಿಂಪಡೆಯಲು ಪೊಲೀಸ್ ಸ್ಟೇಶನ್ ಗೆ (Police Station) ಹೋಗಿ ದೂರು ಕೊಡಬೇಕಿತ್ತು, ನಂತರ ಮಾತ್ರ ನಿಮಗೆ ನಿಮ್ಮ ದಾಖಲೆಗಳು ವಾಪಸ್ ಸಿಗುತ್ತಿದ್ದವು.
ತಮ್ಮ ದಾಖಲೆಗಳನ್ನು ಕಳೆದುಕೊಂಡು ಮಾನಸಿಕವಾಗಿ ಕುಗ್ಗಿರುವಾಗ, ತೊಂದರೆಯಲ್ಲಿ ಇರುವಾಗ ಪೊಲೀಸ್ ಸ್ಟೇಶನ್ ಗೆ ಹೋಗಿ ಕಂಪ್ಲೇಂಟ್ ಕೊಡುವುದಕ್ಕೆ ತೊಂದರೆ ಅನ್ನಿಸಬಹುದು. ಇನ್ನು ಕೆಲವರು ಏನು ಮಾಡಬೇಕು ಎಂದು ಗೊತ್ತಾಗದೆ, ಪೊಲೀಸ್ ಸ್ಟೇಶನ್ ಗಳು ಸರ್ಕಾರಿ ಆಫೀಸ್ ಗಳು ಎಂದು ಎಲ್ಲಾ ಕಡೆ ಅಲೆದಾಡುತ್ತಾರೆ.
ಇಂತಹವರ ರೇಷನ್ ಕಾರ್ಡ್ ರದ್ದುಗೊಳಿಸಿ ಸರ್ಕಾರದ ಆದೇಶ, ನಿಮ್ಮ ಕಾರ್ಡ್ ಸ್ಥಿತಿ ಏನಾಗಿದೆ?
ಆ ರೀತಿ ಆದಾಗ, ನೀವು ಎಲ್ಲಾ ಕಡೆ ಓಡಾಡುತ್ತಾ ಕೂರುವುದಕ್ಕಿಂತ, ಇಂದು ನಾವು ತಿಳಿಸುವ ಈ ಒಂದು ಕೆಲಸ ಮಾಡಿದರೆ ಸಾಕು, ಇನ್ನುಮುಂದೆ ದಾಖಲೆಗಳು ಕಳೆದು ಹೋಗಿದೆ ಎಂದು ಪೊಲೀಸ್ ಸ್ಟೇಶನ್ ಗೆ ಹೋಗಬೇಕಾದ ಅವಶ್ಯಕತೆಯೇ ಬರುವುದಿಲ್ಲ.
ಆ ಸುಲಭದ ವಿಧಾನ ಏನು ಎಂದು ತಿಳಿಸುತ್ತೇವೆ ನೋಡಿ.. ನಿಮ್ಮ ವೋಟರ್ ಐಡಿ, ಕ್ರೆಡಿಟ್ ಕಾರ್ಡ್ (Credit Card), ಡೆಬಿಟ್ ಕಾರ್ಡ್ (Debit Card), ಡ್ರೈವಿಂಗ್ ಲೈಸೆನ್ಸ್ (Driving Licence) , ಐಪ್ಯಾಡ್, ಚೆಕ್, ಡಿಡಿ, ಲ್ಯಾಪ್ ಟಾಪ್, ಮೊಬೈಲ್, ಪಾಸ್ ಬುಕ್, ರೇಷನ್ ಕಾರ್ಡ್, ಮಾರ್ಕ್ಸ್ ಕಾರ್ಡ್ ಗಳು ಇಂಥ ಪ್ರಮುಖ ದಾಖಲೆಗಳನ್ನು ನೀವು ಕಳೆದುಕೊಂಡರೆ, ಇನ್ನುಮುಂದೆ ಟೆನ್ಷನ್ ಮಾಡಿಕೊಳ್ಳದೆ, ಈ ಒಂದು ಕೆಲಸ ಮಾಡುವ ಮೂಲಕ ದೂರು ನೀಡಿ. ಈ ಒಂದು ಮಾರ್ಗವನ್ನು ನೀವು ತಿಳಿದುಕೊಂಡರೆ ಸಾಕು.
ಈ ತರಹದ ಸಮಸ್ಯೆ ಎದುರಾದಾಗ, ಪೊಲೀಸ್ ಸ್ಟೇಶನ್ ವರೆಗು ಹೋಗಿ ಕಂಪ್ಲೇಂಟ್ ಕೊಡುವ ಅವಶ್ಯಕತೆಯೇ ಇಲ್ಲ. ಅದರ ಬದಲಾಗಿ ನೀವು, ಸರ್ಕಾರವು ಹೊರತಂದಿರುವ ಹೊಸ ವೆಬ್ಸೈಟ್ ನಲ್ಲಿ ಕಂಪ್ಲೇಂಟ್ ಮಾಡಬಹುದು.
ನಿಮ್ಮ ಗೃಹಲಕ್ಷ್ಮಿ ಯೋಜನೆ ಅರ್ಜಿ ಆಪ್ರೋವ್ ಆಗಿದ್ಯಾ? ಯಾವುದಕ್ಕೂ ಒಮ್ಮೆ ಸ್ಟೇಟಸ್ ಚೆಕ್ ಮಾಡಿಕೊಳ್ಳಿ
ಈ ವೆಬ್ಸೈಟ್ ನಲ್ಲಿ ದೂರು ಸಲ್ಲಿಸುವುದು ಈಗ ಬಹಳ ಸುಲಭದ ಕೆಲಸ ಆಗಿದೆ. https://ksp.karnataka.govt.in/ ಇದು ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿದ್ದು, ಇಲ್ಲಿಗೆ ಭೇಟಿ ನೀಡಿ ನೀವು ದೂರು ನೀಡಬಹುದು. ವೆಬ್ಸೈಟ್ ಗೆ ಭೇಟಿ ನೀಡಿ, ದೂರು ನೀಡುವ ಪ್ರಕ್ರಿಯೆ ಹೇಗೆ ಎಂದು ತಿಳಿಸುತ್ತೇವೆ ನೋಡಿ..
ಈ ವೆಬ್ಸೈಟ್ ಗೆ ಭೇಟಿ ನೀಡಿದ ನಂತರ, ಅಲ್ಲಿ ನಿಮಗೆ Elost ಎನ್ನುವ ಆಪ್ಶನ್ ಸಿಗುತ್ತದೆ, ಅದನ್ನು ಸೆಲೆಕ್ಟ್ ಮಾಡಿ, ಸ್ಕ್ರಾಲ್ ಮಾಡಿ ಕೆಳಗೆ ಹೋದ ನಂತರ ಯಾವ ದಾಖಲೆ ಕಳೆದು ಹೋಗಿದೆ ಎಂದು ದೂರು ಸಲ್ಲಿಸಬಹುದು.
ಈ ವೆಬ್ಸೈಟ್ ಕಂಪ್ಲೇಂಟ್ ನಲ್ಲೇ ಎಲ್ಲಾ ವಿವರಗಳನ್ನು ನೀವು ವಿವರಿಸಿದರೆ, ನಿಮ್ಮ ಕಂಪ್ಲೇಂಟ್ ಪರವಾಗಿ ಪೊಲೀಸರು ವಿಚಾರಣೆ ಕೂಡ ನಡೆಸುತ್ತಾರೆ. ಇದು ಒಂದು ರೀತಿ, ಮತ್ತೊಂದು ವಿಧಾನ ಏನು ಎಂದರೆ.. ಗೂಗಲ್ ಪ್ಲೇ ಸ್ಟೋರ್ ಆಪ್ (Google Play Store App) ಇಂದ ಸಹ ನೀವು ದೂರು ಸಲ್ಲಿಸಬಹುದು. ಸರ್ಕಾರದ ಆಪ್ ಹೆಸರು KSP APP, ಈ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ (Download) ಮಾಡಿ, ದೂರು ಸಲ್ಲಿಸಬಹುದು.
There is no need to go to the police station for such cases
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.