ನಮ್ಮ ರಾಜ್ಯದಲ್ಲಿ ಈಗ ಲಭ್ಯವಿರುವ ಸೌಲಭ್ಯಗಳನ್ನು ಪಡೆಯಲು ಬಿಪಿಎಲ್ ಕಾರ್ಡ್ (BPL Ration Card) ಅತ್ಯಾವಶ್ಯಕ ಆಗಿದೆ. ಸರ್ಕಾರವೇ ತಿಳಿಸಿರುವ ಹಾಗೆ ಬಿಪಿಎಲ್ ಕಾರ್ಡ್ ಇರುವವರಿಗೆ ಮಾತ್ರ ಎಲ್ಲಾ ಗ್ಯಾರಂಟಿ ಸೌಲಭ್ಯಗಳು ಸಿಗಲಿದೆ.
ಹಾಗಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಇದು ಒಳ್ಳೆಯ ಸಮಯ ಆಗಿದ್ದು, ಅವರು ಯೋಜನೆಗಳ ಸೌಲಭ್ಯ (Govt Schemes) ಪಡೆಯುತ್ತಿದ್ದು, ಬಿಪಿಎಲ್ ಕಾರ್ಡ್ ಇಲ್ಲದೆ ಇರುವವರು ಹೊಸದಾಗಿ ಕಾರ್ಡ್ ಗೆ ಅಪ್ಲೈ ಮಾಡುತ್ತಿದ್ದಾರೆ.
ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ರಾಜ್ಯದ ಎಲ್ಲಾ ಗ್ಯಾರಂಟಿ ಯೋಜನೆಗಳು ಮತ್ತು ಇನ್ನಿತರ ಸೌಲಭ್ಯಗಳೆಲ್ಲವು ಲಭ್ಯವಿದೆ ಎನ್ನುವ ಕಾರಣಕ್ಕೆ ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಹೊಸದಾಗಿ ಬಿಪಿಎಲ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಲು ಮುಗಿಬೀಳುತ್ತಿದ್ದಾರೆ.
ನಿಮ್ಮ ಗೃಹಲಕ್ಷ್ಮಿ ಯೋಜನೆ ಅರ್ಜಿ ಆಪ್ರೋವ್ ಆಗಿದ್ಯಾ? ಯಾವುದಕ್ಕೂ ಒಮ್ಮೆ ಸ್ಟೇಟಸ್ ಚೆಕ್ ಮಾಡಿಕೊಳ್ಳಿ
ಬಿಪಿಎಲ್ ರೇಷನ್ ಕಾರ್ಡ್ ಮಾಡಿಸಲು ಬೇಡಿಕೆ ಕೂಡ ಜಾಸ್ತಿ ಆಗುತ್ತಿದೆ. ಬಿಪಿಎಲ್ ರೇಷನ್ ಕಾರ್ಡ್ ಎಂದರೆ, ಅದು ಬಡತನದ ರೇಖೆಗಿಂತ ಕಡಿಮೆ ಇದ್ದು, ಕಷ್ಟ ಪಡುತ್ತಿರುವ ಜನರಿಗೆ ಸಿಗುತ್ತಿರುವ ಸೌಲಭ್ಯ.
ಆದರೆ ಹಲವು ಜನರು ಈ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ, ಇನ್ನು ಮಾಡಿಕೊಳ್ಳುತ್ತಲೇ ಇದ್ದಾರೆ. ಬಿಪಿಎಲ್ ಕಾರ್ಡ್ ಪಡೆಯಲು ಅರ್ಹತೆ ಇಲ್ಲದೆ ಇದ್ದರು ಸಹ, ಸುಳ್ಳು ದಾಖಲೆ ನೀಡಿ, ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿದ್ದಾರೆ.
ಈ ರೀತಿ ನಡೆಯಬಾರದು ಎಂದು ಇಂಥವರ ವಿರುದ್ಧ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಲು ಮುಖ್ಯವಾದ ನಿರ್ಧಾರ ಒಂದನ್ನು ತೆಗೆದುಕೊಂಡಿದೆ. ಈ ರೀತಿ ಇರುವ ಕೆಲವು ಜನರಿಗೆ ರೇಶನ್ ಕಾರ್ಡ್ ಬ್ಯಾನ್ (Ration Card Ban) ಎಂದು ತಿಳಿಸಿದೆ..
SSLC ಪರೀಕ್ಷೆ ಬರೆಯುವ ಮಕ್ಕಳಿಗೆ ಇನ್ಮುಂದೆ ಹೊಸ ನಿಯಮ! ಹೊಸ ರೂಲ್ಸ್ ಜಾರಿಗೆ ತಂದ ರಾಜ್ಯ ಸರ್ಕಾರ
ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುವವರು ಮತ್ತು ಶ್ರೀಮಂತ ಕುಟುಂಬಕ್ಕೆ ಸೇರಿರುವವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲಾಗುತ್ತದೆ ಎಂದು ಸರ್ಕಾರ ಸೂಚನೆ ನೀಡಿದೆ. ಹಾಗೆಯೇ ಆ ರೀತಿ ಸುಳ್ಳು ಮಾಹಿತಿ ನೀಡಿ, ರೇಷನ್ ಕಾರ್ಡ್ ಮಾಡಿಸಿಕೊಂಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಆಹಾರ ಇಲಾಖೆ ಪರಿಶೀಲನೆ ನಡೆಸಿ, ಸುಳ್ಳು ದಾಖಲೆ (Fake Documents) ಮತ್ತು ತಪ್ಪಾದ ಮಾಹಿತಿಗಳನ್ನು ಕೊಟ್ಟು ರೇಷನ್ ಕಾರ್ಡ್ ಮಾಡಿಸಿಕೊಂಡಿರುವವರಿಗೆ ಹೆಚ್ಚು ದಂಡ ವಿಧಿಸಲಿದೆ.
ಮೇ ತಿಂಗಳಿನಲ್ಲಿ ನಮ್ಮ ರಾಜ್ಯದಲ್ಲಿ ವಿಧಾನಸಭಾ ಎಲೆಕ್ಷನ್ ಇದ್ದ ಕಾರಣ, ಹೊಸದಾಗಿ ರೇಷನ್ ಕಾರ್ಡ್ (New Ration Card) ಮಾಡಿಸುವ ಪ್ರಕ್ರಿಯೆಗೆ ಬ್ರೇಕ್ ಹಾಕಲಾಗಿತ್ತು. ಆದರೆ ಜುಲೈ ಇಂದ ಹೊಸದಾಗಿ ರೇಷನ್ ಕಾರ್ಡ್ ಮಾಡಿಸಲು ಪೋರ್ಟಲ್ ಶುರುವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದಕ್ಕೆ ಶುರು ಮಾಡಿದ್ದಾರೆ.
ಹಾಗೆಯೇ ಹಲವು ಜನರು ತಪ್ಪು ಮಾಹಿತಿ, ತಪ್ಪು ದಾಖಲೆ ನೀಡಿ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಕಾರಣಕ್ಕೆ ರೇಷನ್ ಕಾರ್ಡ್ ವಿಚಾರದಲ್ಲಿ ಆಗುತ್ತಿರುವ ಈ ಸ್ಕ್ಯಾಮ್ ತಡೆಯಲು ಸರ್ಕಾರವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
ಪ್ರಸ್ತುತ ಸುಳ್ಳು ದಾಖಲೆ ಕೊಟ್ಟು ಬಿಪಿಎಲ್ ರೇಷನ್ ಕಾರ್ಡ್ ಪಡೆದಿರುವ ಹಲವು ಕುಟುಂಬಗಳ ಬಿಪಿಎಲ್ ಕಾರ್ಡ್ ಬ್ಯಾನ್ ಆಗುವ ಭಯ ಶುರುವಾಗಿದೆ. ಇದೀಗ ಸ್ವಂತ ಕಾರ್ ಇರುವ ಎಲ್ಲಾ ಕುಟುಂಬಗಳ ರೇಷನ್ ಕಾರ್ಡ್ ಬ್ಯಾನ್ ಮಾಡಬೇಕು ಎಂದು ಸರ್ಕಾರ ಸೂಚನೆ ಹೊರಡಿಸಿದೆ.
ಸ್ವಂತ ಕಾರ್ ಇದ್ದು ಬಿಪಿಎಲ್ ಕಾರ್ಡ್ ಇರುವವರ ರೇಷನ್ ಕಾರ್ಡ್ ಬ್ಯಾನ್ ಆಗಲಿದೆ. ವೈಟ್ ಬೋರ್ಡ್ ಕಾರ್ ಹೊಂದಿರುವ ಕುಟುಂಬಗಳ ಬಿಪಿಎಲ್ ಕಾರ್ಡ್ ರದ್ದಾಗಲಿದ್ದು, ಯೆಲ್ಲೋ ಬೋರ್ಡ್ ಕಾರ್ ಇರುವವರಿಗೆ ಸಮಸ್ಯೆ ಆಗುವ ಹಾಗೆ ಕಾಣುತ್ತಿಲ್ಲ.
The government has banned the ration card of such people
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.