SSLC ಪರೀಕ್ಷೆ ಬರೆಯುವ ಮಕ್ಕಳಿಗೆ ಇನ್ಮುಂದೆ ಹೊಸ ನಿಯಮ! ಹೊಸ ರೂಲ್ಸ್ ಜಾರಿಗೆ ತಂದ ರಾಜ್ಯ ಸರ್ಕಾರ

SSLC Exam New Rules : ಎಸ್ ಎಸ್ ಎಲ್ ಸಿ ಪರೀಕ್ಷೆಯು ಪ್ರತಿಯೊಬ್ಬ ವಿದ್ಯಾರ್ಥಿ (Student) ಜೀವನದ ಅತಿ ದೊಡ್ಡ ಹಾಗೂ ಬಹಳ ಮುಖ್ಯವಾದ ಪರೀಕ್ಷೆಗಳಲ್ಲಿ ಒಂದಾಗಿದೆ. ಇನ್ನು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಬೇಕು ಎನ್ನುವುದು ಪ್ರತಿಯೊಬ್ಬ ವಿಧ್ಯಾರ್ಥಿ ಹಾಗೂ ಅವರ ಪೋಷಕರ ಕನಸ್ಸು.
ಇನ್ನು ಎಸ್ ಎಲ್ಲಾ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಕಾಲೇಜುಗಳಲ್ಲಿ ಅಡ್ಮಿಷನ್ (College Admission) ಪಡೆಯಬಹುದು. ಅಲ್ಲದೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದರೆ ನಿಮಗೆ ಹಲವಾರು ಕೆಲಸಗಳ ಆಯ್ಕೆಗಳು ಸಹ ಸಿಗುತ್ತದೆ. ಇನ್ನು ಎಸ್ ಎಸ್ ಎಲ್ ಸಿ ಪರೀಕ್ಷೆಯ ಮಾರ್ಕ್ಸ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಗಳಲ್ಲಿ ಒಂದಾಗಿದೆ.
ರೇಷನ್ ಕಾರ್ಡ್ ಇಲ್ಲದವರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ? ಹೊಸ ಸೂಚನೆ ನೀಡಿದ ಸರ್ಕಾರ
ಇನ್ನು ವಿಧ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಸರ್ಕಾರವು ಅನೇಕ ನಿಯಮಗಳನ್ನು ಜಾರಿಗೆ ತಂದಿದೆ. ಇನ್ನು ಈ ನಿಯಮಗಳನ್ನು ಎಲ್ಲಾ ಶಿಕ್ಷಣ ಇಲಾಖೆಗಳು (Education Department) ಸರಿಯಾಗಿ ಪಾಲಿಸುವಂತೆ ಸಹ ಸೂಚನೆಗಳನ್ನು ಸರ್ಕಾರ ಹೊರಡಿಸುತ್ತದೆ.
ಇದೀಗ 2023- 2024 ರ ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ. ಇನ್ನು ಈ ವರ್ಷದ ಶೈಕ್ಷಣಿಕ ವರ್ಷದ ಆರಂಭದ ಜೊತೆಗೆ ಶಿಕ್ಷಣ ಇಲಾಖೆಯು ಅನೇಕ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಎಲ್ಲ ವಿಧ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಇದೀಗ ಅನೇಕ ಹೊಸ ನಿಯಮಗಳನ್ನು (New Rules) ಜಾರಿಗೆ ತರಲು ನಿರ್ಧರಿಸಲಾಗಿದೆ.

ಕರ್ನಾಟಕ ರಾಜ್ಯದ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬಹಳ ಕಟ್ಟು ನಿಟ್ಟಾಗಿ ನಡೆಸಲು ಇದೀಗ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇಷ್ಟು ದಿನ ಗ್ರಾಮೀಣ ಪ್ರದೇಶಗಳಲ್ಲಿ ಸಹ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು, ಆದರೆ ಈಗ ಗ್ರಾಮೀಣ ಪ್ರದೇಶಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ರದ್ದುಗೊಳಿಸಲು ಸರ್ಕಾರ ಮುಂದಾಗಿದೆ.
ಗ್ರಾಮೀಣ ಪ್ರದೇಶಗಳ ಬದಲಿಗೆ ಹೋಬಳಿ, ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವಂತೆ ಇದೀಗ ಸರ್ಕಾರ ಸೂಚನೆಯನ್ನು ಹೊರಡಿಸಿದೆ. ಈ ವರ್ಷದ 2023-2024 ವರ್ಷಕ್ಕೆ ಈ ನಿಯಮ ಅನ್ವಯಿಸಲಿದ್ದು, ಇದೆ ಮಾರ್ಚ್ 2024 ರಲ್ಲಿ ನಡೆಯಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಜಿಲ್ಲಾ ತಾಲೂಕು ಅಥವಾ ಹೋಬಳಿ ಕೇಂದ್ರಗಳಲ್ಲಿ, ಬಹಳ ಶಿಸ್ತು ಬದ್ದಾಗಿ ಎಲ್ಲಾ ನಿಯಮಗಳು ಅನುಸರಿಸಿಕೊಂಡು ನಡೆಸಲು ಇದೀಗ ಸರ್ಕಾರವು ಮುಂದಾಗಿದೆ.
Government has implemented a new rule for students appearing for the SSLC exam



