Karnataka NewsBangalore News

ರೇಷನ್ ಕಾರ್ಡ್ ಇದ್ದು ರೇಷನ್ ತೆಗೆದುಕೊಳ್ಳದೆ ಇರೋರಿಗೆ, ರೇಷನ್ ಮಾರಿಕೊಳ್ಳೋರಿಗೆ ಸರ್ಕಾರ ಖಡಕ್ ವಾರ್ನಿಗ್! ರೇಷನ್ ಕಾರ್ಡ್ ಅಮಾನತ್ತು

ಬಡ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಲುವಾಗಿ ರಾಜ್ಯ ಸರ್ಕಾರ (State Government) ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇನ್ನು ಅನ್ನಭಾಗ್ಯ ಯೋಜನೆಯ (Annabhagya Scheme) ಮೂಲಕ ಜನರಿಗೆ ಅಕ್ಕಿ ಹಾಗೂ ಧಾನ್ಯಗಳನ್ನು ನೀಡುವ ಮೂಲಕ ಅವರ ಹಸಿವನ್ನು ನೀಗಿಸುವ ಪ್ರಯತ್ನ ಸಹ ಮಾಡುತ್ತಿದೆ.

ಇನ್ನು ಈ ಅನ್ನ ಭಾಗ್ಯ ಲಾಭವನ್ನು ಪಡೆಯಲು ನಿಮ್ಮ ಬಳಿ ಪಡಿತರ ಚೀಟಿ (Ration Card) ಇರುವುದು ಬಹಳ ಮುಖ್ಯ. ಇನ್ನು ಅನ್ನಭಾಗ್ಯ ಯೋಜನೆಯ ಚಾಲನೆಗೆ ಅನೇಕ ಸಂಕಷ್ಟಗಳು ಎದುರಾಗುತ್ತಿದ್ದು, ಈ ಕುರಿತು ರಾಜ್ಯ ಸರ್ಕಾರಕ್ಕೆ ಸಾಕಷ್ಟು ತಲೆ ಬಿಸಿಯಾಗಿದೆ ಎಂದರೆ ತಪ್ಪಾಗುವುದಿಲ್ಲ. ಇನ್ನು ಅನೇಕರು ಸರ್ಕಾರದ ಈ ಲಾಭವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಇದೀಗ ಸರ್ಕಾರದ ಗಮನಕ್ಕೆ ಬಂದಿದೆ.

Survey of those who have not Taking ration for 6 months, 15,000 ration card is canceled

ರಾಜ್ಯದ ಜನರಿಗೆ ಸಿಹಿ ಸುದ್ದಿ! ಅನ್ನಭಾಗ್ಯ ಯೋಜನೆಯ ಸಂಕಷ್ಟಕ್ಕೆ ರಾತ್ರೋರಾತ್ರಿ ಪರಿಹಾರ ಹುಡುಕಿದ ಸರ್ಕಾರ

ಇನ್ನು ಇಂತಹ ಕಾರ್ಯಗಳಿಗೆ ಮುಂದಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಇದೀಗ ಸರ್ಕಾರ ಹೊಸ ನಿಯಮಗಳನ್ನು (New Rules) ಜಾರಿಗೆ ತಂದಿದೆ. ಹೌದು, ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಪಡೆಯುವ ಅಕ್ಕಿ ಹಾಗೂ ಧಾನ್ಯಗಳನ್ನು ಅನೇಕರು ಮಾರಾಟ ಮಾಡಿಕೊಳ್ಳುತ್ತಿರುವ ವಿಷಯ ಇದೀಗ ಸರ್ಕಾರದ ಗಮನಕ್ಕೆ ಬಂದಿದೆ.

ಇನ್ನು ಈ ರೀತಿ ಹಣ ಪಡೆಯುವ ಸಲುವಾಗಿ ಅಕ್ಕಿಯನ್ನು ಮಾರಾಟ ಮಾಡುವವರ ರೇಷನ್ ಕಾರ್ಡ್ ಅನ್ನು 6 ತಿಂಗಳುಗಳ ಕಾಲ ಅಮಾನತ್ತು ಮಾಡಲು ಇದೀಗ ಸರ್ಕಾರ ನಿರ್ಧರಿಸಿದ್ದು, ಇಂತಹ ಕೆಲಸಗಳಲ್ಲಿ ಸಿಕ್ಕಿ ಬಿದ್ದ ಜನರ ರೇಷನ್ ಕಾರ್ಡ್ ಅನ್ನು 6 ತಿಂಗಳ ಕಾಲ ಅಮಾನತ್ತು ಮಾಡುವಂತೆ ಸೂಚನೆಗಳನ್ನು ಸಹ ಹೊರಡಿಸಿದೆ.

BPL Ration Cardಅಲ್ಲದೆ ಅನೇಕರು ಹೊಸ ರೇಷನ್ ಕಾರ್ಡ್ ಅರ್ಜಿಯನ್ನು (Apply Ration Card) ಸಲ್ಲಿಸುವಾಗ ಸುಳ್ಳು ಮಾಹಿತಿ ನೀಡಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇನ್ನು ಈ ಮೂಲಕ ರೇಷನ್ ಕಾರ್ಡ್ ಗಳನ್ನು ದುರುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ನಡೆಯುತ್ತಿರುವ ಕಾರ್ಯಗಳಿಗೆ ಬ್ರೇಕ್ ಹಾಕಲು ಇದೀಗ ಸರ್ಕಾರ ತೀರ್ಮಾನಿಸಿದೆ.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ ಅನೇಕರ ಅರ್ಜಿ ರದ್ದು ಮಾಡಿದ ಸರ್ಕಾರ! ರಾತ್ರೋರಾತ್ರಿ ಹೊಸ ರೂಲ್ಸ್

ಇನ್ನು ಸುಳ್ಳು ಮಾಹಿತಿ ನೀಡಿ ರೇಷನ್ ಕಾರ್ಡ್ ಗಾಗಿ ಅರ್ಜಿಗಳನ್ನು ಸಲ್ಲಿಸಿದವರ ಅರ್ಜಿಗಳನ್ನು ಇದೀಗ ರದ್ದು ಮಾಡಲಾಗಿದೆ. ಇನ್ನು ಸರ್ಕಾರದ ಗ್ಯಾರೆಂಟಿ ಯೋಜನೆಗಳ ಲಾಭವನ್ನು ಪಡೆಯಲು ರೇಷನ್ ಕಾರ್ಡ್ ಬಹು ಮುಖ್ಯವಾದ ದಾಖಲೆಗಳಲ್ಲಿ ಒಂದಾಗಿದೆ.

ಇನ್ನು ರೇಷನ್ ಕಾರ್ಡ್ ಇಲ್ಲದೆ ಈ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಇನ್ನು ಅನೇಕರ ಬಳಿ ರೇಷನ್ ಕಾರ್ಡ್ ಇಲ್ಲದ ಕಾರಣ ಸರ್ಕಾರವೂ ಇತ್ತೀಚೆಗೆ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಿತ್ತು.

ಆದರೆ ಇದೀಗ ರೇಷನ್ ಕಾರ್ಡ್ ಅನ್ನು ದುರುಪಯೋಗ ಪಡಿಸಿ ಕೊಳ್ಳುತ್ತಿರುವುದನ್ನು ಇದೀಗ ಗಮನಿಸಿದ ಸರ್ಕಾರ ಇದೀಗ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಯನ್ನು ಸ್ಥಗಿತಗೊಳಿಸಿದೆ. ಇನ್ನು ಶೀಘ್ರದಲ್ಲೇ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಕೆಯನ್ನು ಮತ್ತೊಮ್ಮೆ ಆರಂಭಿಸಲಾಗುತ್ತದೆ ಎಂದು ಸಹ ತಿಳಿಸಿದೆ.

ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಮನೆ ಯಜಮಾನಿಯರಿಗೆ ಪಿಂಕ್ ಕಾರ್ಡ್ ವಿತರಣೆ! ಇದರ ಲಾಭಗಳೇನು ಗೊತ್ತಾ?

Ration card will cancelled if Ration is Sold or Not Taken Every Month Ration

Our Whatsapp Channel is Live Now 👇

Whatsapp Channel

Kannada News Today

Kannada News Today 🌐

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
FacebookX
We value your thoughts!
Send your feedback to us at kannadanewstoday@gmail.com

Related Stories