Karnataka NewsBangalore News

ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಮನೆ ಯಜಮಾನಿಯರಿಗೆ ಪಿಂಕ್ ಕಾರ್ಡ್ ವಿತರಣೆ! ಇದರ ಲಾಭಗಳೇನು ಗೊತ್ತಾ?

ಕಾಂಗ್ರೆಸ್ ಸರ್ಕಾರದ ಬಹು ಮುಖ್ಯ ಯೋಜನೆಗಳ ಪೈಕಿ ಗೃಹ ಲಕ್ಷ್ಮಿ ಯೋಜನೆ (Gruha Lakshmi Scheme) ಸಹ ಒಂದಾಗಿದೆ. ಈ ಯೋಜನೆಯ ಅಡಿಯಲ್ಲಿ ಮನೆಯ ಯಜಮಾನಿ ಖಾತೆಗೆ (Bank Account) ಪ್ರತಿ ತಿಂಗಳು 2000 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ.

ಇನ್ನು ಈಗಾಗಲೇ ಈ ಯೋಜನೆಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದ್ದು, ಜುಲೈ 19 ರಿಂದ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಇನ್ನು ಅನೇಕರು ಈಗಾಗಲೇ ಈ ಯೋಜನೆಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ.

Gruha Lakshmi Yojana money will be credited to everyone's account without missing on this date

ಇನ್ನು ನೀವು ಸಹ ಈ ಯೋಜನೆಯ ಲಾಭವನ್ನು ಪಡೆಯಲು ಯೋಚಿಸುತ್ತಿದ್ದರೆ, ಇಂದೆ ಈ ಯೋಜನೆಗೆ ಆನ್ ಲೈನ್ ಮೂಲಕ ಅಥವಾ ನಿಮ್ಮ ಹತ್ತಿರದ ಗ್ರಾಮ ಪಂಚಾಯತಿ ಕಚೇರಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.

200 ಯೂನಿಟ್ ಉಚಿತ ವಿದ್ಯುತ್ ಬಗ್ಗೆ ಬಿಗ್ ಅಪ್ಡೇಟ್, ನಿಮಗೆ ಶೂನ್ಯ ವಿದ್ಯುತ್ ಬಿಲ್ ಬರಲಿಲ್ಲವಾದರೆ ಈ ರೀತಿ ಮಾಡಿ

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ಇನ್ನು ನಿಗದಿ ಪಡಿಸಲಾಗಿಲ್ಲ. ಇನ್ನು ಇತ್ತೀಚೆಗೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಇದೆ ಆಗಸ್ಟ್ 27 ರಂದು ಗೃಹಲಕ್ಷ್ಮೀ ಯೋಜನೆಯನ್ನು (Gruha Lakshmi Yojane) ಬೆಳಗಾವಿಯಲ್ಲಿ ಚಾಲನೆ ಮಾಡುವಂತೆ ಮಾಹಿತಿ ನೀಡಿದ್ದಾರೆ.

ಜೊತೆಗೆ ಇದೆ ದಿನ ರಾಜ್ಯದ 11 ಸಾವಿರ ಕಡೆಗಳಲ್ಲಿ ಈ ಯೋಜನೆಯ ಚಾಲನೆ ನಡೆಯುವಂತೆ ಸೂಚಿಸಲಾಗಿದೆ ಎಂದಿದ್ದಾರೆ. ಕರ್ನಾಟಕ ಒನ್, ಗ್ರಾಮ ಒನ್, ಗ್ರಾಮ ಪಂಚಾಯತಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ, ಈ ಯೋಜನೆಯ ಚಾಲನೆಯನ್ನು ಬಹಳ ಸಂಭ್ರಮದಿಂದ ಆಚರಿಸುವಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ ಡಿ ಕೆ ಶಿವಕುಮಾರ್.

Gruha Lakshmi Yojaneಇನ್ನು ಮಾತು ಮುಂದುವರೆಸಿದ ಸಚಿವರು, ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇಲ್ಲ, ಯಾವಾಗ ಬೇಕಾದರೂ ನೀವು ಅರ್ಜಿ ಸಲ್ಲಿಸಬಹುದು. ಅನೇಕರ ಬಳಿ ರೇಷನ್ ಕಾರ್ಡ್ ಇಲ್ಲ ಅಂತವರು ಹೊಸದಾಗಿ ಕಾರ್ಡ್ ಮಾಡಿಸುವ ಮೂಲಕ ಗೃಹಲಕ್ಷ್ಮೀ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು ಎಂದಿದ್ದಾರೆ.

ಈ ಕೆಲಸ ಮಾಡದೆ ಹೋದರೆ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ!

ರೇಷನ್ ಕಾರ್ಡ್ ನಲ್ಲಿ ಯಾವ ಮಹಿಳೆಯರ ಹೆಸರು ಮೊದಲಿರುತ್ತದೆಯೋ ಅವರು ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಇನ್ನು ಮಹಿಳೆಯರು ನಿಮ್ಮ ಹತ್ತಿರದ ಗ್ರಾಮ ಪಂಚಾಯತಿ ಕೇಂದ್ರಗಳಿಗೆ ಭೇಟಿ ನೀಡಿ, ಉಚಿತವಾಗಿ ಈ ಯೋಜನೆಗೆ ಅರ್ಜಿಗಳನ್ನು ಸಲ್ಲಿಸಬಹುದು.

ಇನ್ನು ಗೃಹ ಲಕ್ಷ್ಮೀ ಯೋಜನೆಯ ಚಾಲನೆ ಸಮಯದಲ್ಲಿ ಪಿಂಕ್ ಕಾರ್ಡ್ (Pink Card) ಅನ್ನು ಬಿಡುಗಡೆ ಮಾಡಲು ಇದೀಗ ಸರ್ಕಾರ ನಿರ್ಧರಿಸಿದೆ. ಹೌದು, ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳು ಪಿಂಕ್ ಕಾರ್ಡ್ ಅನ್ನು ಪಡೆಯಲಿದ್ದಾರೆ.

ಇನ್ನು ಈ ಪಿಂಕ್ ಕಾರ್ಡ್ ನ ಮೇಲೆ ಸಿಎಂ ಸಿದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೆ ಸಚಿವೆ ಲಕ್ಷ್ಮೀ ಹೆಬ್ಬಾಲ್ಕರ್ ಅವರ ಭಾವಚಿತ್ರದ ಜೊತೆಗೆ ಫಲಾನುಭವಿಗಳ ಸಂಪೂರ್ಣ ವಿವರ ಇರಲಿದೆ ಎಂದು ಇದೀಗ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ₹2000 ಹಣ ಈ ದಿನದಿಂದ ಗೃಹಿಣಿಯರ ಖಾತೆಗೆ ಬರಲಿದೆ! ಅಧಿಕೃತ ಪ್ರಕಟಣೆ

Distribution of Pink Card to the beneficiaries of Gruha Lakshmi Yojana

Our Whatsapp Channel is Live Now 👇

Whatsapp Channel

Related Stories