Karnataka NewsBangalore News

200 ಯೂನಿಟ್ ಉಚಿತ ವಿದ್ಯುತ್ ಬಗ್ಗೆ ಬಿಗ್ ಅಪ್ಡೇಟ್, ನಿಮಗೆ ಶೂನ್ಯ ವಿದ್ಯುತ್ ಬಿಲ್ ಬರಲಿಲ್ಲವಾದರೆ ಈ ರೀತಿ ಮಾಡಿ

Gruha Jyothi Scheme : ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ಗೆದ್ದು, ಹಲವಾರು ಯೋಜನೆಗಳನ್ನು (Govt Schemes) ಜಾರಿಗೆ ತರುವ ಮೂಲಕ ರಾಜ್ಯದ ಜನರಿಗೆ ಸಿಹಿ ಸುದ್ದಿ ನೀಡಿದೆ. ಇನ್ನು ಈಗಾಗಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು (Free Bus Scheme) ಚಾಲನೆ ಮಾಡಲಾಗಿದ್ದು, ಈ ಯೋಜನೆಯ ಲಾಭವನ್ನು ಪ್ರತಿಯೊಬ್ಬ ಮಹಿಳೆ ಸಹ ಬಹಳ ಸಂತೋಷದಿಂದ ಅನುಭವಿಸುತ್ತಿದ್ದಾರೆ.

ಇನ್ನು ಈ ಯೋಜನೆಗೆ ಎಲ್ಲರಿಂದ ಸಾಕಷ್ಟು ಮೆಚ್ಚುಗೆ ಸಹ ಸಿಕ್ಕಿದೆ. ಇನ್ನು ಗೃಹಲಕ್ಷ್ಮಿ (Gruha Lakshmi Scheme) ಹಾಗೂ ಗೃಹ ಜ್ಯೋತಿ ಯೋಜನೆಗಳನ್ನು (Gruha Jyothi Scheme) ಸಹ ಸರ್ಕಾರ ಚಾಲನೆ ಮಾಡಲಿದ್ದು, ಈ ಯೋಜನೆಗಳ ಲಾಭ ಪಡೆಯಲು ಎಲ್ಲರೂ ಬಹಳ ಕಾತುರದಿಂದ ಕಾಯುತ್ತಿದ್ದಾರೆ.

Free electricity, significant changes in the Gruha Jyothi scheme

ಇನ್ನು ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಯ ಲಾಭವನ್ನು ಈಗಾಗಲೇ ಅನೇಕರು ಪಡೆಯುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಹೌದು ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿ ಸುಮಾರು 200 ಯೂನಿಟ್ ಉಚಿತ ವಿದ್ಯುತ್ (Free Electricity) ಅನ್ನು ಅನೇಕರು ಪಡೆಯುತ್ತಿದ್ದು, ಈ ಯೋಜನೆಯ ಸಂಪೂರ್ಣ ಲಾಭವನ್ನು ಪಡೆಯುತ್ತಿದ್ದಾರೆ.

ಈ ಕೆಲಸ ಮಾಡದೆ ಹೋದರೆ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ!

ಇನ್ನು ಇದೆ ಆಗಸ್ಟ್ ತಿಂಗಳಿನಿಂದ ಅನೇಕರ ವಿದ್ಯುತ್ ಬಿಲ್ ಶೂನ್ಯ (Zero Electricity Bill) ಬಂದಿದೆ. ಇನ್ನು ಅನೇಕರು ಅರ್ಜಿ ಸಲ್ಲಿಸುವ ಸಮಯದಲ್ಲಿ ತೊಂದರೆಗಳನ್ನು ಎದುರಿಸಿದ್ದು, ಇದೀಗ ಅಂತವರಿಗೆ ಮತೊಮ್ಮೆ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿದೆ.

ಸರ್ಕಾರ ಉಚಿತ ವಿದ್ಯುತ್ ಬಿಲ್ ಎಂದು ಘೋಷಿಸಿದ ಕೂಡಲೇ ಅನೇಕರು ಹಳೆಯ ವಿದ್ಯುತ್ ಬಿಲ್ ಗಳನ್ನು ಪಾವತಿಸಿಲ್ಲ. ಇನ್ನು ಅಂತವರು ಗೃಹಜ್ಯೋತಿ ಯೋಜನೆಯ ಲಾಭ ಪಡೆಯಬಹುದಾ ಎನ್ನುವ ಪ್ರಶ್ನೆಗೆ ಉತ್ತರ ನೀಡುತ್ತೇವೆ ಬನ್ನಿ.

Gruha jyothi schemeನೀವು ಒಂದು ವೇಳೆ ಹಳೆಯ ಬಿಲ್ ಅನ್ನು ಪಾವತಿಸದೆ ಹೋದರೆ ನೀವು ಸರ್ಕಾರದ ಉಚಿತ ವಿದ್ಯುತ್ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ಹೌದು, ನೀವು ಹಳೆಯ ವಿದ್ಯುತ್ ಬಿಲ್ ಅನ್ನು ಪಾವತಿಸದೆ ಹೋದರೆ ಅದಕ್ಕೆ ನೀವು ದಂಡವನ್ನು ಸಹ ಪಾವತಿಸಬೇಕು. ನೀವು ಹಳೆಯ ಬಿಲ್ ಅನ್ನು ಸಂಪೂರ್ಣವಾಗಿ ಪಾವತಿಸಿದ ನಂತರ ನೀವು ಈ ಲಾಭವನ್ನು ಪಡೆಯಲು ಸಾಧ್ಯ.

ಗೃಹಲಕ್ಷ್ಮಿ ಯೋಜನೆಯ ₹2000 ಹಣ ಈ ದಿನದಿಂದ ಗೃಹಿಣಿಯರ ಖಾತೆಗೆ ಬರಲಿದೆ! ಅಧಿಕೃತ ಪ್ರಕಟಣೆ

ಈಗಾಗಲೇ 1.42 ಕೋಟಿಗೂ ಹೆಚ್ಚು ಜನರು ಈ ಯೋಜನೆಯ ಲಾಭ ಪಡೆಯಲು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇನ್ನು ನೀವು ನಿಮ್ಮ ಮನೆಯ ವಿದ್ಯುತ್ ಬಿಲ್ ಹಾಗೂ ನಿಮ್ಮ ಆಧಾರ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಜೊತೆಗೆ ಈ ಕೆಳಗಿರುವ ಲಿಂಕ್ ಗೆ ಹೋಗಿ sevasindhugs.karnataka.gov.in ಬಹಳ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು.

ಇನ್ನು ಈಗಾಗಲೇ ತಿಳಿಸಿದಂತೆ, ಜುಲೈ ತಿಂಗಳಿನಲ್ಲಿ ಅರ್ಜಿ ಸಲ್ಲಿಸಿದವರು ಆಗಸ್ಟ್ ತಿಂಗಳಿನಲ್ಲಿ ಉಚಿತ ವಿದ್ಯುತ್ ಬಿಲ್ ಅನ್ನು ಪಡೆಯುತ್ತಾರೆ. ಇನ್ನು ಆಗಸ್ಟ್ ತಿಂಗಳಿನಲ್ಲಿ ಈ ಲಾಭ ಪಡೆಯದೆ ಇರುವವರು ಸೆಪ್ಟೆಂಬರ್ ನಿಂದ ಉಚಿತ ಬಿಲ್ ಲಾಭವನ್ನು ಪಡೆಯುತ್ತಾರೆ.

ಇನ್ನು ನೀವು ಹಳೆಯ ವಿದ್ಯುತ್ ಬಿಲ್ ಅನ್ನು ಪಾವತಿ ಮಾಡುವವರೆಗೂ ನೀವು ಉಚಿತ ವಿದ್ಯುತ್ ಬಿಲ್ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ಹೌದು, ನೀವು ಇದೆ ಸೆಪ್ಟೆಂಬರ್ 30 ರೊಳಗೆ ನಿಮ್ಮ ಹಳೆಯ ವಿದ್ಯುತ್ ಬಿಲ್ ಅನ್ನು ಪಾವತಿಸಲು ಸರ್ಕಾರದಿಂದ ಅವಕಾಶ ನೀಡಲಾಗಿದೆ.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ದೊಡ್ಡ ಶಾಕಿಂಗ್ ಸುದ್ದಿ ನೀಡಿದ ಸರ್ಕಾರ! ಮುಂದಿನ ಆದೇಶದವರೆಗೆ ಸಿಗೋಲ್ಲ ಕಾರ್ಡ್

ನೀವು ಹಳೆಯ ವಿದ್ಯುತ್ ಬಿಲ್ ಕಟ್ಟದೆ ಇದ್ದರೆ, ನೀವು ದಂಡವನ್ನು ಸಹ ಪಾವತಿಸಬೇಕಾಗುತ್ತದೆ. ಬೆಸ್ಕಾಂ ಇತ್ತೀಚೆಗೆ ಜನರಿಗೆ ತಮ್ಮ ಹಳೆಯ ವಿದ್ಯುತ್ ಬಿಲ್ ಅನ್ನು ಆದಷ್ಟು ಬೇಗ ಪಾವತಿಸುವಂತೆ ಮನವಿ ಸಹ ಮಾಡಿತ್ತು.

Big update about 200 units of free electricity Scheme

Our Whatsapp Channel is Live Now 👇

Whatsapp Channel

Related Stories