ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ ಅನೇಕರ ಅರ್ಜಿ ರದ್ದು ಮಾಡಿದ ಸರ್ಕಾರ! ರಾತ್ರೋರಾತ್ರಿ ಹೊಸ ರೂಲ್ಸ್
ಬಡತನ ರೇಖೆಗಿಂತ ಕಡಿಮೆ ಇರುವ ಜನರ ಆರ್ಥಿಕ ಪರಿಸ್ಥಿತಿ ಸ್ಥಿರಗೊಳಿಸುವುದಕ್ಕಾಗಿ ಸರ್ಕಾರವು ಅನೇಕ ಯೋಜನೆಗಳನ್ನು (Govt Schemes) ಜಾರಿಗೆ ತಂದಿದೆ. ಇನ್ನು ಈ ಯೋಜನೆಗಳನ್ನು ಪಡೆಯಲು ರೇಷನ್ ಕಾರ್ಡ್ (Ration Card) ಅಗತ್ಯವಾಗಿದೆ.
ಹೌದು, ಈ ಯೋಜನೆಗಳ ಅಡಿಯಲ್ಲಿ ನೊಂದಾಯಿಸಿಕೊಳ್ಳಲು ರೇಷನ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಇನ್ನು ಗೃಹಲಕ್ಷ್ಮಿ ಯೋಜನೆ, (Gruha Lakshmi Scheme) ಅನ್ನಭಾಗ್ಯ (Annabhagya Scheme) ಹಾಗೂ ಇನ್ನಿತರ ಯೋಜನೆಗಳ ಲಾಭ ಪಡೆಯಲು ರೇಷನ್ ಕಾರ್ಡ್ ಬಹಳ ಮುಖ್ಯವಾಗಿದೆ. ಇನ್ನು ಇದೀಗ ಅನೇಕರು ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿಗಳನ್ನು ಸಲ್ಲಿಸಿದ್ದಾರೆ.
200 ಯೂನಿಟ್ ಉಚಿತ ವಿದ್ಯುತ್ ಬಗ್ಗೆ ಬಿಗ್ ಅಪ್ಡೇಟ್, ನಿಮಗೆ ಶೂನ್ಯ ವಿದ್ಯುತ್ ಬಿಲ್ ಬರಲಿಲ್ಲವಾದರೆ ಈ ರೀತಿ ಮಾಡಿ
ಆದರೆ ಅನೇಕರ ರೇಷನ್ ಕಾರ್ಡ್ ಅರ್ಜಿಗಳನ್ನು (Ration Card Application) ಸರ್ಕಾರ ಇದೀಗ ರದ್ದು ಗೊಳಿಸಿದೆ. ಹೌದು, ಇದೀಗ ಹೊಸ ಬಿಪಿಎಲ್ ಕಾರ್ಡ್ (New BPL Card) ಪಡೆಯಲು ಜನರು ಅರ್ಜಿಯನ್ನು ಸಲ್ಲಿಸಿದ್ದಾರೆ. ಆದರೆ ಇಂಥವರಲ್ಲಿ ಅನೇಕರು ಸುಳ್ಳು ದಾಖಲೆಗಳನ್ನು ನೀಡಿ ರೇಷನ್ ಕಾರ್ಡ್ ಪಡೆಯಲು ಪ್ರಯತ್ನಿಸುತ್ತಿರುವುದನ್ನು ಸರ್ಕಾರ ಗಮನಿಸಿದೆ.
ಇನ್ನು ರೇಷನ್ ಕಾರ್ಡ್ ಪಡೆದ ಬಳಿಕ ಅವರು ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ ಎನ್ನುವ ನಿಟ್ಟಿನಿಂದ ಅನೇಕ ರೇಷನ್ ಕಾರ್ಡ್ ಅರ್ಜಿಗಳನ್ನು ಇದೀಗ ಸರ್ಕಾರ ರದ್ದು ಗೊಳಿಸಿದೆ.
ಹಾಗಾದರೆ ನೀವು ಸಹ ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದ್ದರೆ, ನಿಮ್ಮ ರೇಷನ್ ಕಾರ್ಡ್ ನ ಸ್ಟೇಟಸ್ ತಿಳಿಯುವುದು ಹೇಗೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಬನ್ನಿ..
ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಮನೆ ಯಜಮಾನಿಯರಿಗೆ ಪಿಂಕ್ ಕಾರ್ಡ್ ವಿತರಣೆ! ಇದರ ಲಾಭಗಳೇನು ಗೊತ್ತಾ?
ಕಾಂಗ್ರೆಸ್ ಸರ್ಕಾರವು 10 ಕೆಜಿ ಅಕ್ಕಿ ಜೊತೆಗೆ ಹಲವು ಧಾನ್ಯಗಳನ್ನು ಪ್ರತಿ ರೇಷನ್ ಕಾರ್ಡ್ ಹೊಂದಿರುವ ಸದಸ್ಯರಿಗೆ ನೀಡುವುದಾಗಿ ಬರವಸೆ ನೀಡಿತ್ತು. ಆದರೆ ಅಕ್ಕಿಯ ಕೊರತೆಯಿಂದಾಗಿ ಇದೀಗ 10 ಕೆಜಿ ಬದಲಿಗೆ 5 ಕೆಜಿ ಅಕ್ಕಿ ಹಾಗೂ ಹಣವನ್ನು ನೀಡುವುದಾಗಿ ಇದೀಗ ಹೇಳಲಾಗಿದೆ.
ಇನ್ನು ಇದೆ ವೇಳೆ ಅನೇಕರು ಈ ಸೌಲಭ್ಯಗಳನ್ನು ಪಡೆಯಲು ಹೊಸ ರೇಷನ್ ಕಾರ್ಡ್ ಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇನ್ನು ಇದೀಗ ತಮ್ಮ ಅರ್ಜಿಯ ಸ್ಟೇಟಸ್ ತಿಳಿಯುವುದು ಹೇಗೆ ನೋಡೋಣ ಬನ್ನಿ.
ಗೃಹಲಕ್ಷ್ಮಿ ಯೋಜನೆಯ ₹2000 ಹಣ ಈ ದಿನದಿಂದ ಗೃಹಿಣಿಯರ ಖಾತೆಗೆ ಬರಲಿದೆ! ಅಧಿಕೃತ ಪ್ರಕಟಣೆ
ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ (https://ahara.kar.nic.in/Home/EServices), ನಿಮ್ಮ ಸ್ಕ್ರೀನ್ ಮೇಲೆ ಇ ಸೇವೆಗಳು ಎನ್ನುವ ಆಯ್ಕೆ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ, ನಂತರ ಇ ಪಡಿತರ ಚೀಟಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ನಂತರ ಸ್ಕ್ರೀನ್ ಮೇಲೆ ರದ್ದು ಪಡಿಸಲಾಗಿದೆ ಎನ್ನುವ ಆಯ್ಕೆ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿದ ನಂತರ ನಿಮ್ಮ ವಿಷಯಗಳನ್ನು ತುಂಬಿರಿ, ಗೊ ಎನ್ನುವ ಆಯ್ಕೆ ಕ್ಲಿಕ್ ಮಾಡಿದರೆ, ರದ್ದು ಗೊಳಿಸಲಾಗಿರುವ ರೇಷನ್ ಕಾರ್ಡ್ ಬಗ್ಗೆ ನಿಮಗೆ ಮಾಹಿತಿ ದೊರೆಯುತ್ತದೆ. ಅದಕ್ಕೆ ಸೂಕ್ತ ಕಾರಣಗಳನ್ನು ಸಹ ನೀಡಲಾಗಿರುತ್ತದೆ.
ಇನ್ನು ಅನೇಕರ ರೇಷನ್ ಕಾರ್ಡ್ ಗಳಲ್ಲಿ ಕೆಲವು ತಪ್ಪುಗಳಿದ್ದು, ಅದನ್ನು ಸರಿಪಡಿಸಿಕೊಳ್ಳಲು ಸರ್ಕಾರ ಅವಕಾಶವನ್ನು ನೀಡಿದೆ. ಹೌದು, ಆಹಾರ ಸರಬರಾಜು ಇಲಾಖೆ ಇದೀಗ ನಿಮ್ಮ ರೇಷನ್ ಕಾರ್ಡ್ ನಲ್ಲಿ ಹೆಸರು ಅಥವಾ ವಿಳಾಸದಂತಹ ತಿದ್ದುಪಡಿ ಮಾಡಿಸುವಂತವರಿಗೆ ಇದೀಗ ಅವಕಾಶ ನೀಡಿದೆ.
The government has canceled the applications of many who have applied for new ration cards