ರಾಜ್ಯದ ಜನರಿಗೆ ಸಿಹಿ ಸುದ್ದಿ! ಅನ್ನಭಾಗ್ಯ ಯೋಜನೆಯ ಸಂಕಷ್ಟಕ್ಕೆ ರಾತ್ರೋರಾತ್ರಿ ಪರಿಹಾರ ಹುಡುಕಿದ ಸರ್ಕಾರ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಜನರಿಗೆ ಭರವಸೆ ನೀಡಿತ್ತು. ಇನ್ನು ಅದರಂತೆ ಇದೀಗ ಒಂದೊಂದಾಗಿ ಯೋಜನೆಗಳನ್ನು (Govt Schemes) ಚಾಲನೆ ಮಾಡಲಾಗಿದೆ.
ಹೌದು, ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣವನ್ನು (Free Bus Facility) ಸರ್ಕಾರ ಈಗಾಗಲೇ ಚಾಲನೆ ಮಾಡಿದ್ದು, ಯೋಜನೆಗೆ ಮಹಿಳೆಯರಿಂದ ಒಳ್ಳೆಯ ರೆಸ್ಪಾನ್ಸ್ ದೊರಕಿದೆ. ಇನ್ನು ಗೃಹಜೋತಿ (Gruha Jyothi Scheme) ಹಾಗೂ ಗೃಹಲಕ್ಷ್ಮಿ ಯೋಜನೆಗಳನ್ನು (Gruha Lakshmi Scheme) ಸಹ ಚಾಲನೆ ಮಾಡಿದ್ದು, ಅನೇಕರು ಈಗಾಗಲೇ ಶೂನ್ಯ ವಿದ್ಯುತ್ ಬಿಲ್ (Zero Electricity Bill) ಪಡೆಯುತ್ತಿದ್ದಾರೆ.
ಅಲ್ಲದೆ ಇದೇ ಆಗಸ್ಟ್ ತಿಂಗಳ ಕೊನೆಯಲ್ಲಿ ಮಹಿಳೆಯರ ಖಾತೆಗೆ (Bank Account) 2000 ರೂಪಾಯಿಗಳು ಜಮಾ ಆಗುತ್ತದೆ ಎಂದು ತಿಳಿಸಲಾಗಿದೆ.
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ ಅನೇಕರ ಅರ್ಜಿ ರದ್ದು ಮಾಡಿದ ಸರ್ಕಾರ! ರಾತ್ರೋರಾತ್ರಿ ಹೊಸ ರೂಲ್ಸ್
ಅಲ್ಲದೆ ಪಡಿತರ ಚೀಟಿ (Ration Card) ಹೊಂದಿರುವ ಪ್ರತಿಯೊಬ್ಬ ಸದಸ್ಯರಿಗೂ ಸಹ 10 ಕೆಜಿ ಅಕ್ಕಿ ನೀಡುವಂತೆ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿತ್ತು. ಆದರೆ ರಾಜ್ಯದಲ್ಲಿ ಅಕ್ಕಿಯ ಕೊರತೆಯಿಂದಾಗಿ 10 ಕೆಜಿ ಅಕ್ಕಿ ಬದಲಿಗೆ 5 ಕೆಜಿ ಅಕ್ಕಿ, ಹಾಗೂ ಇನ್ನುಳಿದ ಐದು ಕೆಜಿ ಅಕ್ಕಿ ಬದಲಿಗೆ ಹಣ ನೀಡುವುದಾಗಿ ಹೇಳಲಾಗಿತ್ತು.
ಆದರೆ ಇದೀಗ ಸರ್ಕಾರ ಅಕ್ಕಿಯ ಕೊರತೆಯನ್ನು ನೀಗಿಸಲು ಹೊಸ ನಿರ್ಧಾರವನ್ನು ತೆಗೆದುಕೊಂಡಿದೆ. ಹೌದು ಈಗ ಕರ್ನಾಟಕ ರಾಜ್ಯ ಸರ್ಕಾರ ಆಂಧ್ರಪ್ರದೇಶದಿಂದ ಅಕ್ಕಿಯನ್ನು ಪಡೆದು ಅದನ್ನು ನಮ್ಮ ರಾಜ್ಯದ ಜನರಿಗೆ ವಿತರಣೆ ಮಾಡಲು ಮುಂದಾಗಿದೆ.
ಇನ್ನು ಮೊದಲು ಹೇಳಿದಂತೆ ಬಿಪಿಎಲ್ ಕಾರ್ಡ್ (BPL Card) ಹೊಂದಿರುವ ಪ್ರತಿಯೊಬ್ಬರಿಗೂ ಸಹ 10 ಕೆಜಿ ಅಕ್ಕಿ ನೀಡಲು ಇದೀಗ ಸರ್ಕಾರ ನಿರ್ಧರಿಸಿದೆ. ಇನ್ನು ಈಗಾಗಲೇ ರಾಜ್ಯ ಆಹಾರ ಮತ್ತು ಆರೋಗ್ಯ ಇಲಾಖೆಯ ಸಚಿವ ಮುನಿಯಪ್ಪ ಅವರು ಆಂಧ್ರಪ್ರದೇಶದ ಅಧಿಕಾರಿಗಳ ಜೊತೆಗೆ ಮಾತುಕತೆಯನ್ನು ನಡೆಸಿದ್ದು, ಶೀಘ್ರದಲ್ಲೇ ಆಂಧ್ರಪ್ರದೇಶದಿಂದ ನಮ್ಮ ಕರ್ನಾಟಕ ರಾಜ್ಯಕ್ಕೆ ಅಕ್ಕಿ ರವಾನೆಯಾಗಲಿದೆ ಎನ್ನಲಾಗುತ್ತಿದೆ.
200 ಯೂನಿಟ್ ಉಚಿತ ವಿದ್ಯುತ್ ಬಗ್ಗೆ ಬಿಗ್ ಅಪ್ಡೇಟ್, ನಿಮಗೆ ಶೂನ್ಯ ವಿದ್ಯುತ್ ಬಿಲ್ ಬರಲಿಲ್ಲವಾದರೆ ಈ ರೀತಿ ಮಾಡಿ
ಈ ಮೂಲಕ ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಗೆ (Annabhagya Scheme) ಎದುರಾಗಿದ್ದ ಸಂಕಷ್ಟವನ್ನು ತೊಲಗಿಸುವಲ್ಲಿ ಯಶಸ್ವಿಯಾಗಿದೆ ಎಂದರೆ ತಪ್ಪಾಗುವುದಿಲ್ಲ.
ಇನ್ನು ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದಂತೆ ಈಗಾಗಲೇ ನಾಲ್ಕು ಯೋಜನೆಗಳನ್ನು ಜಾರಿಗೆ ತಂದಿದೆ. ಇನ್ನು ಉಳಿದಿರುವ ಯುವನಿಧಿ ಯೋಜನೆಯನ್ನು ಸಹ ಆದಷ್ಟು ಬೇಗ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ.
ಇನ್ನು ಯುವ ನಿಧಿ ಯೋಜನೆಗೆ ಯಾವುದೇ ಕೊನೆಯ ದಿನಾಂಕ ಇರುವುದಿಲ್ಲ, ಹಾಗೆ ಇದೆ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಯುವನಿಧಿ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ ಎನ್ನುವ ಮಾತುಗಳು ಸದ್ಯ ಕೇಳಿಬರುತ್ತಿದೆ.
Annabhagya Scheme Updates, Rice will Import From Andhra Pradesh
Our Whatsapp Channel is Live Now 👇