ಎತ್ತಿನಬಂಡಿಗೆ ಬೈಕ್ ಡಿಕ್ಕಿ ಮೂವರು ಯುವಕರು ಸ್ಥಳದಲ್ಲೇ ದುರ್ಮರಣ
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಗುಡಗೂರು ಕ್ರಾಸ್ ಬಳಿ ಎತ್ತಿನಬಂಡಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
- ಎತ್ತಿನಬಂಡಿಗೆ ಡಿಕ್ಕಿ ಹೊಡೆದು ಬೈಕ್ ಸವಾರರು ಸೇರಿ ಮೂವರು ದುರ್ಮರಣ
- ಹನುಮನಮಟ್ಟಿಯಿಂದ ಮೈಲಾರ ಜಾತ್ರೆಗೆ ತೆರಳುತ್ತಿದ್ದ ವೇಳೆ ಅಪಘಾತ
- ಘಟನೆಯ ಕುರಿತು ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಗುಡಗೂರು ಕ್ರಾಸ್ ಬಳಿ ತಡರಾತ್ರಿ ದಾರುಣ ಘಟನೆ ಸಂಭವಿಸಿದೆ. ಮೈಲಾರ ಜಾತ್ರೆಗೆ ತೆರಳುತ್ತಿದ್ದ ಬೈಕ್ ಸವಾರರು ಎತ್ತಿನಬಂಡಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದುರ್ಘಟನೆ ಗ್ರಾಮವನ್ನು ಶೋಕದಲ್ಲಿ ಮುಳುಗಿಸಿದೆ
ಹಾಸನದಲ್ಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿ, ಹಲವರಿಗೆ ಗಾಯ
ಮೃತರ ವಿವರ:
ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರು ಶಶಿಕುಮಾರ್ ಉಪ್ಪಾರ (25), ಆಕಾಶ್ ಬಿರಾದಾರ (23) ಮತ್ತು ದರ್ಶನ್ (23) ಎಂದು ಗುರುತಿಸಲಾಗಿದೆ. ದರ್ಶನ್ ಹಾಗೂ ಆಕಾಶ್ ಬಿಎಸ್ಸಿ ಮೂರನೇ ವರ್ಷದ ವಿದ್ಯಾರ್ಥಿಗಳಾಗಿದ್ದು, ಶಶಿಕುಮಾರ್ ಹನುಮನಮಟ್ಟಿಯಲ್ಲಿ ಹೋಟೆಲ್ ಉದ್ಯೋಗಿಯಾಗಿದ್ದರು.
ಅಪಘಾತದ ಕಾರಣ:
ಕತ್ತಲೆ ಆದ್ದರಿಂದ ಎತ್ತಿನಬಂಡಿಯು ಸ್ಪಷ್ಟವಾಗಿ ಕಾಣದೇ, ನಿಯಂತ್ರಣ ತಪ್ಪಿದ ಬೈಕ್ ಅದಕ್ಕೆ ಡಿಕ್ಕಿ ಹೊಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಘಟನೆಯ ಕುರಿತು ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Three Youths Die as Bike Hits Bullock Cart in Haveri