Karnataka NewsCrime News

ಕಾರವಾರದಲ್ಲಿ ದುರಂತ, ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು

ನೀಲ್ಕುಂದದ ವಾಟೆಹೊಳೆ ಜಲಪಾತದಲ್ಲಿ ಈಜಲು ಹೋಹೋಗಿದ್ದ ಇಬ್ಬರು ಯುವಕರು ನೀರುಪಾಲಾದ ದಾರುಣ ಘಟನೆ ನಡೆದಿದೆ. ಸಾವಿಗೀಡಾದವರ ಮೃತದೇಹಗಳನ್ನು ಮೇಲಕ್ಕೆತ್ತಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ವಾಟೆಹೊಳೆ ಜಲಪಾತದಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ಸಾವು
  • ಶವಗಳಿಗಾಗಿ ಮುಳುಗು ತಜ್ಞರು ಕಾರ್ಯಾಚರಣೆ ನಡೆಸಿ ಶವಗಳು ಪತ್ತೆ
  • ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭ

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನೀಲ್ಕುಂದ ಬಳಿಯ ವಾಟೆಹೊಳೆ ಜಲಪಾತದಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲಾದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಘಟನೆ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆ ಸ್ಥಳೀಯರು ಮತ್ತು ರಕ್ಷಕ ತಂಡ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ.

ಸಿದ್ದಾಪುರ ತಾಲೂಕಿನ ನೀಲ್ಕುಂದ ಸಮೀಪದ ವಾಟೆಹೊಳೆ ಜಲಪಾತ ಪ್ರವಾಸಿಗರಿಗೆ ಹೆಚ್ಚು ಆಕರ್ಷಣೆಯಾಗಿರುವ ಸ್ಥಳ. ಆದರೆ ಶುಕ್ರವಾರ ಸಂಜೆ, ಈ ಮನೋರಂಜನೆಯ ಸ್ಥಳವೇ ಇಬ್ಬರು ಯುವಕರ ಸಾವಿಗೆ ಕಾರಣವಾಗಿದೆ. ಸ್ನೇಹಿತರೊಂದಿಗೆ ಜಲಪಾತ ವೀಕ್ಷಣೆಗೆ ತೆರಳಿದ್ದ ಯುವಕರು ಸಾವನ್ನಪ್ಪಿದ್ದಾರೆ.

ಕಾರವಾರದಲ್ಲಿ ದುರಂತ, ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು

ಮೃತರು ಶಿರಸಿ ತಾಲೂಕಿನ ಅಕ್ಷಯ್ ಪರಮೇಶ್ವರ ಭಟ್ (22) ಮತ್ತು ಮರಾಠಿಕೊಪ್ಪದ ಸುಹಾಸ ಶೆಟ್ಟಿ (22) ಎಂದು ಗುರುತಿಸಲಾಗಿದೆ. ಈ ಇಬ್ಬರೂ ಸ್ನೇಹಿತರ ಜೊತೆಗೆ ಆರು ಮಂದಿ ಸೇರಿಕೊಂಡು ಜಲಪಾತ ವೀಕ್ಷಣೆಗೆ ಹೋಗಿದ್ದರು. ಈ ವೇಳೆ ಅವಘಡ ಸಂಭವಿಸಿದಾಗ, ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಘಟನೆಯ ಮಾಹಿತಿ ತಿಳಿದೊಡನೆ ಡಿ.ಎಸ್.ಪಿ. ಕೆ.ಎಲ್. ಗಣೇಶ್ ಹಾಗೂ ಸಿದ್ದಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜೆ.ಬಿ. ಸೀತಾರಾಮ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮುಳುಗು ತಜ್ಞರು ಮತ್ತು ಮಾರಿಕಾಂಬಾ ಲೈಫ್ ಗಾರ್ಡ್ ತಂಡದವರು ಶವಗಳಿಗಾಗಿ ಕಾರ್ಯಾಚರಣೆ ನಡೆಸಿದ್ದು, ಕೊನೆಗೂ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ.

ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ಕುರಿತಾಗಿ ಸಿದ್ದಾಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಘಟನೆ ಬಳಿಕ ಸ್ಥಳೀಯರು ಜಲಪಾತದ ಸುತ್ತ ಬಿಗಿ ಭದ್ರತೆ ವಹಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಪ್ರತಿ ವರ್ಷ ಜಲಪಾತಗಳ ಬಳಿ ಈ ರೀತಿಯ ದುರ್ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಪ್ರವಾಸಿಗರು ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ.

Waterfall Turns Tragic, Two Youths Drown in Karwar

English Summary

Our Whatsapp Channel is Live Now 👇

Whatsapp Channel

Related Stories