Karnataka News
ರೈಲಿನಿಂದ ನದಿಗೆ ಬಿದ್ದ ಯುವಕ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು
ರೈಲು ಬೋಗಿಯ ಬಾಗಿಲಲ್ಲಿ ನಿಂತಿದ್ದ ಯುವಕ. ಹೊಳೆನರಸೀಪುರ ಪಟ್ಟಣದ ಬಳಿ ಹೇಮಾವತಿ ನದಿ ಸೇತುವೆ ದಾಟುವಾಗ 70 ಅಡಿ ಎತ್ತರದಿಂದ ಕಾಲು ಜಾರಿ ನದಿಗೆ ಬಿದ್ದಿದ್ದಾನೆ.
- ರೈಲಿನ ಬಾಗಿಲಿಂದ ಕಾಲು ಜಾರಿ ಹೇಮಾವತಿ ನದಿಗೆ ಬಿದ್ದ ಘಟನೆ.
- 70 ಅಡಿ ಎತ್ತರದಿಂದ ಬಿದ್ದರೂ, ನದಿಯ ಹರಿವು ಕಡಿಮೆಯಾಗಿದ್ದು ಪಾರು.
- ನದಿಗೆ ಬಿದ್ದ ಯುವಕ ಆಸ್ಪತ್ರೆಗೆ ದಾಖಲು.
ರೈಲಿನ ಬಾಗಿಲಲ್ಲಿ ನಿಂತಿದ್ದ ವಿದ್ಯಾರ್ಥಿಯೊಬ್ಬ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹಾಸನದಲ್ಲಿ ಪಿಯುಸಿ ಓದುತ್ತಿರುವ ಮುಜಾಮಿಲ್ (17) ಎಂಬಾತ ಕೆಆರ್ ನಗರದಿಂದ ಹಾಸನಕ್ಕೆ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ.
ರೈಲು ಬೋಗಿಯ ಬಾಗಿಲಲ್ಲಿ ನಿಂತಿದ್ದ ಯುವಕ. ಹೊಳೆನರಸೀಪುರ ಪಟ್ಟಣದ ಬಳಿ ಹೇಮಾವತಿ ನದಿ ಸೇತುವೆ ದಾಟುವಾಗ 70 ಅಡಿ ಎತ್ತರದಿಂದ ಕಾಲು ಜಾರಿ ನದಿಗೆ ಬಿದ್ದಿದ್ದಾನೆ.
ಘಟನೆ ನೋಡಿದ ಸಹ ಪ್ರಯಾಣಿಕರು ಜೋರಾಗಿ ಕಿರುಚಿದ್ದಾರೆ. ಆದರೆ ನದಿಯ ಹರಿವು ಕಡಿಮೆಯಾಗಿದ್ದರಿಂದ ಈಜಲು ಸಾಧ್ಯವಾಗಿದ್ದರಿಂದ ಹೇಗೋ ಈಜಿಕೊಂಡು ರಕ್ಷಣೆಗಾಗಿ ಕೂಗಿಕೊಂಡಿದ್ದಾನೆ. ಇದನ್ನು ಕಂಡ ಸ್ಥಳೀಯರು ಸುರಕ್ಷಿತವಾಗಿ ಆತನನ್ನು ದಡಕ್ಕೆ ತಂದಿದ್ದಾರೆ. ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
Youth Falls from Moving Train into Hemavathi River
English Summary▼