ವೈರಲ್ ವಿಡಿಯೋ: ಅಪ್ಪ ಖರೀದಿಸಿದ ಸೆಕೆಂಡ್ ಹ್ಯಾಂಡ್ ಸೈಕಲ್ ನೋಡಿ ಮಗನ ಪ್ರತಿಕ್ರಿಯೆ
ತಂದೆ ಮಗನ ಈ ಆನಂದ ನೋಡಿ ನೆಟ್ಟಿಗರು ಪಿಧಾ ಆಗಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ನೆಟಿಜನ್‌ಗಳ ಮನಸ್ಸನ್ನು ದೋಚಿದೆ.
ಹಣವಿದ್ದವರು ಏನು ಬೇಕಾದರೂ ಖರೀದಿಸುತ್ತಾರೆ. ಆದರೆ ಬಡವರು ಸಣ್ಣ ವಸ್ತುವನ್ನು ಖರೀದಿಸಲು ತುಂಬಾ ಕಷ್ಟಪಡಬೇಕಾಗುತ್ತದೆ. ಸಾಹುಕಾರರಿಗೆ ಚಿಕ್ಕ ಚಿಕ್ಕ ವಸ್ತುಗಳು ವಿಷಯಗಳೇ ಅಲ್ಲ, ಆದರೆ ಬಡವರಿಗೆ ಅದು ಕನಸಾಗಿರುತ್ತದೆ, ನೀವು ಹಣದಿಂದ ಏನು ಖರೀದಿಸಿದರೂ ಇವರ ಆನಂದ ಸಿಗುವುದು ಕಷ್ಟ.. ತಂದೆಯೊಬ್ಬರು ಸೆಕೆಂಡ್ ಹ್ಯಾಂಡ್ ನಲ್ಲಿ ಖರೀದಿಸಿದ ಸೈಕಲ್ ಗೆ ಪೂಜೆ ಮಾಡುವಾಗ, ಮಗನಿಗೆ ಎಲ್ಲಿಲ್ಲದ ಖುಷಿ. ತಂದೆ ಮಗನ ಈ ಆನಂದ ನೋಡಿ ನೆಟ್ಟಿಗರು ಪಿಧಾ ಆಗಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ನೆಟಿಜನ್‌ಗಳ ಮನಸ್ಸನ್ನು ದೋಚಿದೆ.
ಈ ವಿಡಿಯೋದಲ್ಲಿ ಅಪ್ಪ ತಾನು ಖರೀದಿಸಿದ ಸೆಕೆಂಡ್ ಹ್ಯಾಂಡ್ ಸೈಕಲ್ ಗೆ ಪೂಜೆ ಮಾಡುತ್ತಿದ್ದಾರೆ. ದೂರದಲ್ಲಿ ನಿಂತಿದ್ದ ಮಗ ಚಪ್ಪಾಳೆ ತಟ್ಟಿ ಸಂತಸದಿಂದಅಪ್ಪನ ಬಳಿ ಬಂದು ತಾನು ಸೈಕಲ್ ಗೆ ನಮಸ್ಕಾರ ಮಾಡುತ್ತಾನೆ. ಆ ಬಾಲಕನ ಸಂತೋಷಕ್ಕೆ ಮಿತಿಯೇ ಇಲ್ಲ.
ಈ ವಿಡಿಯೋವನ್ನು ಅವನೀಶ್ ಶರೋನ್ ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಇದು ಕೇವಲ ಸೆಕೆಂಡ್ ಹ್ಯಾಂಡ್ ಬೈಸಿಕಲ್. ಅವರ ಮುಖದಲ್ಲಿನ ಸಂತೋಷವನ್ನು ನೋಡಿ. ಅವರು ಹೊಸ ಮರ್ಸಿಡಿಸ್ ಬೆಂಜ್ ಖರೀದಿಸಿದಷ್ಟು ಉತ್ಸುಕರಾಗಿದ್ದಾರೆ. ಎಂದು ಟ್ವೀಟ್ ಮಾಡಿದ್ದಾರೆ. ಈ ವೀಡಿಯೊವನ್ನು ಇಲ್ಲಿಯವರೆಗೆ 1.7 ಮಿಲಿಯನ್ ಜನರು ವೀಕ್ಷಿಸಿದ್ದಾರೆ.
It’s just a second-hand bicycle. Look at the joy on their faces. Their expression says, they have bought a New Mercedes Benz.❤️ pic.twitter.com/e6PUVjLLZW
— Awanish Sharan (@AwanishSharan) May 21, 2022
Young Boy Jumps In Excitement At A Second Hand Bicycle
Follow Us on : Google News | Facebook | Twitter | YouTube