ಜಿದ್ದಾಜಿದ್ದಿನ ಕಣವಾದ ಬಾಗಲಕೋಟೆ ಲೋಕಸಭಾ ಕ್ಷೇತ್ರ
ಜಿದ್ದಾಜಿದ್ದಿನ ಕಣವಾದ ಬಾಗಲಕೋಟೆ ಲೋಕಸಭಾ ಕ್ಷೇತ್ರ: ಪಿ ಸಿ ಗದ್ದಿಗೌಡರ್ ಮತ್ತು ಶ್ರೀಮತಿ ವೀಣಾ ಕಾಶಪ್ಪನವರ ಭಾರಿ ಹಣಾಹಣಿ
ಬಾಗಲಕೋಟೆ : ಬಾಗಲಕೋಟೆ ಲೋಕಸಭಾ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ. ಬಹಳಷ್ಟು ಹೆಸರು ಗಳಿಸಿದ ಅಭ್ಯರ್ಥಿಗಳು ಕಣದಲ್ಲಿ ಇದ್ದು, ಇವರ ಮಧ್ಯದಲ್ಲಿ ಚುನಾವಣಾ ಹಣಾಹಣಿ ನಡೆಯಲಿದೆ. ಬಿಜೆಪಿ ಹಾಗೂ ಮೈತ್ರಿ ಪಕ್ಷದ ಮಧ್ಯದಲ್ಲಿ ಭಾರಿ ಪೈಪೋಟಿ ಇದೆ. ಅಲ್ಲದೆ ಇಬ್ಬರು ಶಾಸಕರ ನಡುವೆ ಬಾಗಲಕೋಟೆ ಲೋಕಸಭಾ ಕ್ಷೇತ್ರ ಪ್ರತಿಷ್ಠೆ ಕಣವಾಗಿ ಮಾರ್ಪಟ್ಟಿದೆ.
ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಅಖಾಡದಲ್ಲಿ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ಪಿ ಸಿ ಗದ್ದಿಗೌಡರ್ ಹಾಗೂ ಕಾಂಗ್ರೆಸ್ಸಿನಿಂದ ಶ್ರೀಮತಿ ವೀಣಾ ಕಾಶಪ್ಪನವರ್ ಅವರು ಅಖಾಡದಲ್ಲಿರುವದರಿಂದ ಚುನಾವಣಾ ಕಣ ತೀವ್ರ ರಂಗೇರಿದೆ. ಇನ್ನು ತಮ್ಮ ಪತ್ನಿಯನ್ನು ಗೆಲ್ಲಿಸಲು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಮತ ಬೇಟೆ ಮಾಡುತ್ತಿದ್ದಾರೆ. ಇನ್ನು ಮೂರು ಬಾರಿ ಜಯಭೇರಿ ಬಾರಿಸಿದ ಶ್ರೀ ಪಿ ಸಿ ಗದ್ದಿಗೌಡರ್ ಗೆಲ್ಲಿಸಲು ಬಾಗಲ್ಕೋಟ್ ಶಾಸಕರಾದ ವೀರಣ್ಣ ಚರಂತಿಮಠ ಅವರು ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇನ್ನು ತಮ್ಮ ಪತ್ನಿ ವೀಣಾ ಕಾಶಪ್ಪನವರ್ ಅವರನ್ನು ಶತಾಯ ಗತಾಯ ಗೆಲ್ಲಿಸುವದಕ್ಕಾಗಿ ಪತಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಹಠ ತೊಟ್ಟಿದ್ದಾರೆ. ಇನ್ನು ಸೋಲಿಲ್ಲದ ಸರ್ದಾರ ನನ್ನ ಮತ್ತೊಂದು ಭಾರಿ ಸಂಸದರನ್ನಾಗಿ ಮಾಡಲು ಶಾಸಕ ವೀರಣ್ಣ ಚರಂತಿ ಮಠ ಅವರು ಅವರು ಪಣತೊಟ್ಟಿದ್ದಾರೆ.
ಇನ್ನು ಚುನಾವಣೆ ನೋಡಿದರೆ ಇಬ್ಬರ ಕದನವೋ ರಣಕಣವಾಗಿದೆ. ಕಳೆದ ಮೂರು ಬಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ಪಿ.ಸಿ ಗದ್ದಿಗೌಡರ್ ಅವರು 3 ಜಯಭೇರಿ ಸಾಧಿಸಿ ಈಗ ಬೌಂಡರಿ ಹೊಡೆಯಲು ಸಿದ್ಧರಾಗಿದ್ದಾರೆ ಅದನ್ನು ತಡೆಯುವುದಕ್ಕಾಗಿ ಕಾಂಗ್ರೆಸ್ಸಿನ ಅಭ್ಯರ್ಥಿ ವೀಣಾ ಕಾಶಪ್ಪನವರ್ ಅದನು ತಪ್ಪಿಸಲು ಸಜ್ಜಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀ ವೀರಣ್ಣ ಚರಂತಿ ಮಠ್ ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ವಿಜಯಾನಂದ ಕಾಶಪ್ಪನವರ್ ಪರಭಾವಗೊಂಡಿದ್ದಾರೆ.
ಇದೀಗ ಮತ್ತೆ ಶ್ರೀಮತಿ ವೀಣಾ ವಿಜಯಾನಂದ ಕಾಶಪ್ಪನವರ್ ಹಾಗೂ ಶ್ರೀ ಪಿ ಸಿ ಗದ್ದಿಗೌಡರ್ ಅವರು ಚುನಾವಣೆ ಅಖಾಡದಲ್ಲಿ ಇರುವದರಿಂದ ಇಬ್ಬರ ನಡುವೆ ಇರುವ ಸ್ಪರ್ಧೆ ರಾಜ್ಯದ ಗಮನ ಸೆಳೆದಿದೆ.
ಬಾಗಲಕೋಟೆ ಮತ ಕ್ಷೇತ್ರದ ಶಾಸಕ ವೀರಣ್ಣ ಚರಂತಿಮಠ ಅವರು ತಮ್ಮ ಬಿಜೆಪಿ ಲೋಕಸಭಾ ಅಭ್ಯರ್ಥಿ ಯಾದ ಶ್ರಿ ಪಿ.ಸಿ ಗದ್ದಿಗೌಡರ್ ಅವರನ್ನು ಗೆಲ್ಲಿಸಲು ತಾವು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಇಟ್ಟುಕೊಂಡು ಜನರ ಬಳಿ ಮತ ಕೇಳುತ್ತಿದ್ದಾರೆ. ಶಾಸಕ ವೀರಣ್ಣ ಚರಂತಿ ಮಠ ಅವರು ಅವರು ಕಳೆದ ಎರಡು ವಾರದಿಂದ 6 ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಪ್ರಚಾರ ನಡೆಸಿ ಜನರ ಬಳಿ ಮತಯಾಚಿಸುತ್ತಿದ್ದಾರೆ.
ವೀಣಾ ಕಾಶಪ್ಪನವರ್ ಅವರು ತಮ್ಮ ಪತಿ ಕಳೆದ ಚುನಾವಣೆಯಲ್ಲಿ ಒಂದು ಬಾರಿ ಬಿಜೆಪಿ ವಿರುದ್ಧ ಸೋಲು ಕಂಡಿದ್ದಾರೆ.ಹಳೆ ಸೇಡನ್ನು ತೀರಿಸಿಕೊಳ್ಳಲು ತಮ್ಮ ಪತ್ನಿ ಶ್ರೀಮತಿ ವೀಣಾ ಅವರನ್ನು ಗೆಲ್ಲಿಸಲು ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ರಾಜಕೀಯ ರಣತಂತ್ರ ರೂಪಿಸುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ್ ಅವರು ಸಹಕಾರಿ ರಂಗದಲ್ಲಿ ಸಾಕಷ್ಟು ಕಾರ್ಯ ಮಾಡಿಕೊಂಡು ಬಂದಿದ್ದಾರೆ.
ಇನ್ನು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಸಹ ಅವರು ಕಳೆದ 20 ವರ್ಷದಿಂದ ಶಾಸಕರಾಗಿ ರಾಜಕೀಯವಾಗಿ ಹಲವಾರು ಕೊಡುಗೆ ನೀಡಿ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ.
ಬಾಗಲಕೋಟೆ ಲೋಕಸಭಾ ಕ್ಷೇತ್ರದ ಮತದಾರರು ಇದೀಗ ಯಾರ ಕೈ ಹಿಡಿಯುತ್ತಾರೆ ಎನ್ನುವುದೆ ಇದೀಗ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಬಲಾಡ್ಯ ಕಟ್ಟಾಳುಗಳೇ ಲೋಕಸಭಾ ಕ್ಷೇತ್ರದ ಅಖಾಡದಲ್ಲಿರುವದರಿಂದ ಮತದಾರ ಪ್ರಭು ಯಾರ ಕೈ ಹಿಡಿಯುತ್ತಾನೆ ಎನ್ನುವದ ಕಾದು ನೋಡಬೇಕಿದೆ. //// ವರದಿ : ರವಿಕುಮಾರ ಮುರಾಳ



