ಇಂದಿನಿಂದ, ದಚ್ಚು, ರಾಕಿ ಬಾಯ್ ಅಸಲಿ ಪಿಕ್ಚರ್ ಶುರು

darshan and yash election campaign

ಇಂದಿನಿಂದ, ದಚ್ಚು, ರಾಕಿ ಬಾಯ್ ಅಸಲಿ ಪಿಕ್ಚರ್ ಶುರು – darshan and yash election campaign

ಮಂಡ್ಯದಲ್ಲಿಂದು ಜೋಡೆತ್ತುಗಳಾದ ದರ್ಶನ್ ಮತ್ತು ಯಶ್ ರ ರಿಯಲ್ ಪಿಕ್ಚರ್ ಶುರುವಾಗಲಿದೆ. ಅಮ್ಮ ಸುಮಲತಾ ಗೆ ಸ್ಟಾರ್ ಗಳ ದೊಡ್ಡ ದಂಡೇ ಸಾಥ್ ನೀಡಿರುವುದು ನಮಗೆಲ್ಲಾ ಗೊತ್ತೇ ಇದೆ. ಇಷ್ಟು ದಿವಸ ಮಾಡುತ್ತಿದ್ದ ಪ್ರಚಾರಕ್ಕಿಂತ ಇಂದಿನಿಂದ ಬಿರುಸಾದ ಚಟುವಟಿಕೆಯಲ್ಲಿ ದರ್ಶನ್ ಮತ್ತು ರಾಖಿ ಬಾಯ್ ಎಂಟ್ರಿ ನೀಡಲಿದ್ದಾರೆ.

ದಳಪತಿಗಳ ವಿರುದ್ಧ ಹಳ್ಳಿ ಹಳ್ಳಿಗಳಲ್ಲೂ ಮತ ಬೇಟೆಗೆ ಎಲ್ಲಾ ಸಿದ್ಧತೆ ನಡೆಸಲಾಗಿದೆ. ನೆನ್ನೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂಡ್ಯದ ಬಹಳಷ್ಟು ಹಳ್ಳಿಗಳಿಗೆ ಭೇಟಿ ನೀಡಿ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ದರ್ಶನ್ ಮುಂದೆಯೇ ನಿಖಿಲ್ ಗೆ ಜೈಕಾರ ಕೂಗಿದ ಪ್ರಸಂಗವೂ ನಡೆದಿತ್ತು.

ಇಂದು ಪ್ರಚಾರಕ್ಕೆ ರಾಖಿಬಾಯ್ ಯಶ್ ದುಮುಕಲಿದ್ದಾರೆ. ಇಂದು ಸಹ ಪಕ್ಷೇತರ ಅಭ್ಯರ್ಥಿ ಸುಮಲತಾ ರ ಪರ ಜೋರಾದ ಶಕ್ತಿ ಪ್ರದರ್ಶನ ನಡೆಯಲಿದೆ. ಹಳ್ಳಿ ಹಳ್ಳಿಗಳಲ್ಲೂ ಪ್ರಚಾರದಲ್ಲಿ ದರ್ಶನ್ ಹಾಗೂ ಯಶ್ ಭಾಗಿಯಾಗಲಿದ್ದಾರೆ.

ಇತ್ತ  ಮೈತ್ರಿ ಅಭ್ಯರ್ಥಿ ನಿಖಿಲ್ ರನ್ನು ಗೆಲ್ಲಿಸಲೇ ಬೇಕೆಂದು ದೋಸ್ತಿ ಸರ್ಕಾರ ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಜೊತೆಗೆ ನಾವೇನು ಕಮ್ಮಿ ಇಲ್ಲವೆಂದು, ಅಬ್ಬರದ ಪ್ರಚಾರದಲ್ಲಿ ನಿರತವಾಗಿದೆ.

ಆದರೆ ನಿಜಕ್ಕೂ ಮತದಾರರನ್ನು ಯಾರು ಸೆಳೆಯುತ್ತಾರೆ, ಮತದಾರರ ಒಲವು ಯಾರ ಮೇಲಿದೆ ಎಂಬುದು ಕಾದುನೋಡಬೇಕಾಗಿದೆ.