ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಂತೂ ಅದೆಷ್ಟೋ ಸ್ಟಾರ್ ನಟ ನಟಿಯರ ಮುದ್ದಾದ ಚೈಲ್ಡ್ ಹುಡ್ ಫೋಟೋಗಳು ಹಾಗೂ ಇನ್ನಿತರ ಒಳ್ಳೆ ಮೆಮೊರಿಸ್ ಇರುವಂತಹ ಫೋಟೋಗಳೆಲ್ಲವೂ ಬಹಳ ದೊಡ್ಡ ಮಟ್ಟದಲ್ಲಿ ಹರಿದಾಡಿದ್ದವು.
ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ಬಾರಿ ವೈರಲಾಗುತ್ತಿರುವ ಈ ಮುದ್ದಾದ ಪೋರಿಯಾ ಫೋಟೋ (Photo Goes Viral) ನೋಡಿ ಜನ ಯಾರಿರಬಹುದು ಎಂದು ತಲೆಗೆ ಹುಳ ಬಿಟ್ಟುಕೊಳ್ಳುತ್ತಿದ್ದಾರೆ.
ಮೊಗ್ಗಿನ ಜಡೆ ಹಾಕಿಕೊಂಡು ಕೆಂಪು ಸೀರೆಯನ್ನು ಹುಟ್ಟು ಕನ್ನಡಿಯ ಮುಂದೆ ನಿಂತಿರುವಂತಹ ಈ ಮುದ್ದು ಗೊಂಬೆ ಯಾರಿರಬಹುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗೂ ಇದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ.
ಹೌದು ಗೆಳೆಯರೇ ನೋಡಲು ಸೀರೆ ಉಟ್ಟ ಮುದ್ದಾದ ಗೊಂಬೆಯಂತೆ ಇರುವ ಪುಟ್ಟ ಪೋರಿ ಮತ್ಯಾರು ಅಲ್ಲ, ಅದ್ಭುತ ನಿರೂಪಣೆ ಹಾಗೂ ನಟನೆಯ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿರುವಂತಹ ನಟಿ ಕಮ್ ಆಂಕರ್ ಶ್ವೇತಾ ಚಂಗಪ್ಪ (Shwetha Changappa).
ತಮ್ಮ ಅಮೋಘ ಅಭಿನಯದ ಮೂಲಕ ಇತ್ತೀಚಿಗಷ್ಟೇ ಶಿವರಾಜಕುಮಾರ್ ಅಭಿನಯದ ವೇದ ಸಿನಿಮಾದಲ್ಲಿ ನಟಿಸಿ ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೆ ಕಳೆದ ಕೆಲವು ದಿನಗಳ ಹಿಂದೆ ಕಲರ್ ಸೂಪರ್ ಚಾನೆಲ್ನಲ್ಲಿ ಪ್ರಸಾರವಾಗುತ್ತಿದ್ದ ಸೃಜನ್ ಲೋಕೇಶ್ ಅವರ ನೇತೃತ್ವದಲ್ಲಿ ಅದ್ಭುತವಾಗಿ ಮೂಡಿ ಬರುತ್ತಿದಂತಹ ಕನ್ನಡದ ಪ್ರಖ್ಯಾತ ಕಿರುತೆರೆ ಕಾರ್ಯಕ್ರಮ ಮಜಾ ಟಾಕೀಸ್ ನ ರಾಣಿಯೆಂಬ ಪಾತ್ರದ ಮೂಲಕ ಜನಮನ್ನಣೆಯನ್ನು ಕೂಡ ಪಡೆದುಕೊಂಡಿದ್ದರು.
ಅಷ್ಟೇ ಅಲ್ಲದೆ ಜೋಡಿ ನಂಬರ್ ಒನ್ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳ ನಿರೂಪಣಾ ಜವಾಬ್ದಾರಿಯನ್ನು ಕೂಡ ಹೊತ್ತಿರುವ ಶ್ವೇತಾ ಚಂಗಪ್ಪ ನಟನೆಯಲ್ಲಿ ಮಾತ್ರವಲ್ಲದೆ ಆಂಕರಿಂಗ್ ನಲ್ಲಿಯೂ ಕೂಡ ತಮ್ಮ ಅದ್ಭುತ ಕಲೆಯನ್ನು ಹೊರಹಾಕಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್, ಫೇಸ್ಬುಕ್ ಹಾಗೂ ಯೂಟ್ಯೂಬ್ ಮೂಲಕ ಅಭಿಮಾನಿಗಳೊಡನೆ ಸದಾಕಾಲ ಒಡನಾಟದಲ್ಲಿರುವಂತಹ ಶ್ವೇತ ಅವರು ಇತ್ತೀಚಿಗಷ್ಟೇ ಹಂಚಿಕೊಂಡಿರುವಂತಹ ಪೋಸ್ಟ್ ಒಂದು ಬಾರಿ ವೈರಲಾಗುತ್ತಿದೆ.
ನಟಿ ಶ್ವೇತಾ ಚಂಗಪ್ಪ ತಮ್ಮ ಚೈಲ್ಡ್ ಫೋಟೋ (Childhood Photo) ಒಂದನ್ನು ಹಂಚಿಕೊಂಡು ಈ ಫೋಟೋದಲ್ಲಿ ಅಮ್ಮನ ಸೀರೆಯನ್ನು ಹಾಕಿಕೊಂಡು ಮೊಗ್ಗಿನ ಜಡೆಯೊಂದಿಗೆ ಮಿಂಚುತ್ತಿರುವಂತಹ ಈ ಕ್ಯೂಟ್ ಆದ ಹುಡುಗಿ ಯಾರೆಂದು ಗೆಸ್ ಮಾಡಿ ನೋಡೋಣ ಎಂದು ಅಭಿಮಾನಿಗಳಿಗೆ ಸವಾಲ್ ಹಾಕಿದ್ದಾರೆ.
ಅದರೊಂದಿಗೆ ಬಾಲ್ಯದ ಫೋಟೋಗಳು ಮನುಷ್ಯ ಜೀವನದ ಸುಮಧುರ ಕ್ಷಣಗಳು ಎಂಬುದು ಎಷ್ಟು ಸತ್ಯ ಅಲ್ವಾ? ಎಂದು ಕೇಳುತ್ತಾ ಅಭಿಮಾನಿಗಳಿಗೆ ತಮ್ಮ ಮೊಗ್ಗಿನ ಜಡೆಯ ಚೈಲ್ಡ್ ಹುಡ್ ಫೋಟೋಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುವಂತೆ ಶ್ವೇತಾ ಚಂಗಪ್ಪ ಬರೆದುಕೊಂಡಿದ್ದಾರೆ.
Actress cum Anchor Shwetha Changappa Childhood Photo Goes Viral
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.