Sandalwood News

Pushpa Cinema, ಯಾವುದೇ ಸಿನಿಮಾ ಸಾಧಿಸದ ಹೊಸ ದಾಖಲೆ

Pushpa Cinema Creates All Time Record: ಪುಷ್ಪಾ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಾಕ್ಸ್ ಆಫೀಸ್ ಅಲ್ಲಿ ಸೃಷ್ಟಿಸಿದ ಹವಾ ನಮಗೆಲ್ಲಾ ಗೊತ್ತೇ ಇದೆ. ಸುಕುಮಾರ್ ನಿರ್ದೇಶನದಲ್ಲಿ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾದ ಈ ಚಿತ್ರದ ಮೂಲಕ ಪುಷ್ಪರಾಜ್ ಆಗಿ ನಟಿಸಿದ್ದ ಸ್ಟಾರ್ ಹೀರೋ ಅಲ್ಲು ಅರ್ಜುನ್ ಅಭಿನಯ ಅಮೋಘ…. ಶ್ರೀವಲ್ಲಿ ಪಾತ್ರದಲ್ಲಿ ಕನ್ನಡದ ಚೆಲುವೆ ರಶ್ಮಿಕಾ ಮಂದಣ್ಣ ಮಿಂಚಿದ್ದರು.

ಇದನ್ನೂ ಓದಿ : ಹೊಸ ರೆಕಾರ್ಡ್ ಸೃಷ್ಟಿಸಿದ Pushpa Cinema

ಡಿಸೆಂಬರ್ 17, 2021 ರಂದು ಥಿಯೇಟರ್‌ಗಳಲ್ಲಿ ಗ್ರ್ಯಾಂಡ್ ರಿಲೀಸ್ ಆಗುವುದರೊಂದಿಗೆ, ಪುಷ್ಪಾ ಎಲ್ಲಾ ಭಾಷೆಗಳಲ್ಲಿ ನಿರ್ಮಾಪಕರು ಮತ್ತು ವಿತರಕರಿಗೆ ಬಂಪರ್ ಸುಗ್ಗಿಯನ್ನೇ ತಂದು ಕೊಟ್ಟಿತ್ತು. ಬಿಡುಗಡೆಗೂ ಮುನ್ನದಿಂದ ಬಿಡುಗಡೆಯ ನಂತರ ಇಲ್ಲಿಯವರೆಗೂ ದಾಖಲೆ ಸೃಷ್ಟಿಸುತ್ತ ಸುದ್ದಿಯಲ್ಲಿದೆ.

Allu Arjun Starrer Pushpa Cinema Creates All Time Record

ಇತ್ತೀಚೆಗೆ ಪುಷ್ಪಾ ಸಿನಿಮಾ ಮಡಿಲಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಭಾರತದಲ್ಲಿ 5 ಶತಕೋಟಿ ವೀಕ್ಷಣೆಗಳನ್ನು ತಲುಪಿದ ಮೊದಲ ಆಲ್ಬಂ ಎಂಬ ಹೆಗ್ಗಳಿಕೆಗೆ ಪುಷ್ಪಾ ಟ್ರೆಂಡ್ ಸೆಟ್ಟರ್ ಆಗಿದೆ. ಇದನ್ನು ಮೈತ್ರಿ ಮೂವಿ ಮೇಕರ್ಸ್ ತಂಡ ವಿಶೇಷ ಪೋಸ್ಟರ್ ಮೂಲಕ ಎಲ್ಲರಿಗೂ ಹಂಚಿಕೊಂಡಿದೆ.

ಇದನ್ನೂ ಓದಿ : 3D ರೂಪದಲ್ಲಿ ಪ್ರಭಾಸ್ ಹೊಸ ಸಿನಿಮಾ

ಅನಸೂಯಾ, ಸುನೀಲ್, ಫಹಾದ್ ಫಾಸಿಲ್ ಮತ್ತು ಅಜಯ್ ಘೋಷ್ ಅವರು ಕೆಂಪು ಚಂದನದ ಅಕ್ರಮ ಸಾಗಣೆಯ ಹಿನ್ನೆಲೆಯ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪುಷ್ಪದಲ್ಲಿ ದೇವಿ ಶ್ರೀ ಪ್ರಸಾದ್ ಸಂಯೋಜಿಸಿದ ಪ್ರತಿಯೊಂದು ಹಾಡು ಸಂಗೀತ ಪ್ರೇಮಿಗಳ ಸಾರ್ವಕಾಲಿಕ ನೆಚ್ಚಿನ ಹಾಡುಗಳ ಪಟ್ಟಿಯನ್ನು ಪ್ರವೇಶಿಸಿದೆ. ಮತ್ತು ಸೀಕ್ವೆಲ್ ಆಗಿ ಬರುತ್ತಿರುವ ಪುಷ್ಪ 2 ಆಲ್ಬಂ ಇದಕ್ಕಿಂತ ಹೆಚ್ಚಿಗೆ ಟ್ರೆಂಡ್ ಸೃಷ್ಟಿಸಲಿದೆ ಎಂಬ ಕುತೂಹಲ ಹೆಚ್ಚಾಗಿದೆ…

ಇದನ್ನೂ ಓದಿ : Whatsapp ಸಂದೇಶ ಅಳಿಸಲು ಡಿಲೀಟ್ ಫೀಚರ್

Allu Arjun Starrer Pushpa Cinema Creates All Time Record

Watch Pushpa Movie Trailer

Related Stories

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ