Sandalwood News

Amazon Prime Video: ಪ್ರೈಮ್‌ ಡೇ 2022 ಕ್ಕೆ ಬ್ಲಾಕ್‌ಬಸ್ಟರ್‌ ಮನರಂಜನೆಯನ್ನು ಘೋಷಿಸಿದ ಅಮೆಜಾನ್‌ ಪ್ರೈಮ್ ವಿಡಿಯೋ

  • ಜುಲೈ 23 ಮತ್ತು 24 ರಂದು ಪ್ರೈಮ್‌ ಡೇಯಲ್ಲಿ ಪ್ರೈಮ್ ಸದಸ್ಯರಿಗೆ ಕೆಲವು ಹೊಸ ರಿಲೀಸ್‌ಗಳು ಮತ್ತು ಪ್ರೈಮ್ ವಿಡಿಯೋ ಚಾನೆಲ್‌ಗಳ ಮೂಲಕ ಪಾಲುದಾರರಿಂದ ಆಕರ್ಷಕ ಕೊಡುಗೆಗಳು ಲಭ್ಯವಿವೆ.
  • Amazon Prime Video Announces Blockbuster Entertainment for Prime Day 2022

ಮುಂಬೈ : ಪ್ರೈಮ್ ಸದಸ್ಯರಿಗೆ ಪ್ರೈಮ್ ವಿಡಿಯೋ (Amazon Prime Video – Prime Day 2022) ಮನರಂಜನೆಯ ಗುಚ್ಛವನ್ನೇ ಘೋಷಿಸಿದೆ. ಅತ್ಯಂತ ನಿರೀಕ್ಷಿತ ಅಮೆಜಾನ್‌ ಒರಿಜಿನಲ್ ಸಿರೀಸ್‌ಗಳು ಮತ್ತು ಜನಪ್ರಿಯ ಸಿನಿಮಾಗಳು ವಿವಿಧ ಭಾಷೆಗಳಲ್ಲಿ ಪ್ರೈಮ್ ಡೇಯಲ್ಲಿ ಲಭ್ಯವಾಗಲಿದೆ.

ಇತ್ತೀಚೆಗೆ ಬಿಡುಗಡೆಯಾದ ಬ್ಲಾಕ್‌ಬಸ್ಟರ್ ಸಿನಿಮಾ ರನ್‌ವೇ 34 (ಹಿಂದಿ), ಸರ್ಕಾರು ವಾರಿ ಪಾಟ (ತೆಲುಗು, ತಮಿಳು, ಮಲಯಾಳಂ), ಮತ್ತು ಸಾಮ್ರಾಟ್‌ ಪ್ರಥ್ವಿರಾಜ್‌ (ಹಿಂದಿ, ತಮಿಳು, ತೆಲುಗು) ಜೊತೆಗೆ, ಕ್ರಿಸ್‌ ಪ್ಯಾಟ್‌ ನಟನೆಯ ಆಕ್ಷನ್‌ ಥ್ರಿಲ್ಲರ್ ಅಮೆಜಾನ್‌ ಒರಿಜಿನಲ್‌ ದಿ ಟರ್ಮಿನಲ್‌ ಲಿಸ್ಟ್ (ಇಂಗ್ಲಿಷ್‌, ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ), ಹೊಸ ಸಿರೀಸ್ ಕಾಮಿಕ್‌ಸ್ತಾನ್ (ಹಿಂದಿ), ಹಾಗೂ ಮಾಡರ್ನ್‌ ಲವ್ ಹೈದರಾಬಾದ್ (ತೆಲುಗು) ಜಾಗತಿಕ ಸರಣಿಯ ಭಾರತೀಯ ಅಡಾಪ್ಟೇಶನ್‌ ಕೂಡ ಲಭ್ಯವಿದೆ.

ಪ್ರೈಮ್‌ ಡೇ 2022 ಕ್ಕೆ ಬ್ಲಾಕ್‌ಬಸ್ಟರ್‌ ಮನರಂಜನೆಯನ್ನು ಘೋಷಿಸಿದ ಅಮೆಜಾನ್‌ ಪ್ರೈಮ್ ವಿಡಿಯೋ

ಪ್ರೈಮ್ ಡೇ 2022 ಕ್ಕೆ ಸಮೀಪದಲ್ಲಿ ಇನ್ನೂ ಎರಡು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಪ್ರೈಮ್‌ ಸದಸ್ಯರಿಗೆ ಘೋಷಿಸಲಾಗುತ್ತದೆ. ವಿಶೇಷ ಪ್ರೈಮ್ ಡೇ ಕೊಡುಗೆಯಾಗಿ, ಪ್ರೈಮ್ ವೀಡಿಯೋ ಚಾನೆಲ್‌ಗಳ ಮೂಲಕ ಆಡ್ ಆನ್‌ ಸಬ್‌ಸ್ಕ್ರಿಪ್ಷನ್‌ಗಳ ಮೇಲೆ 50% ವರೆಗೆ ರಿಯಾಯಿತಿಯನ್ನು ಪಡೆಯಲಿದ್ದಾರೆ.

ಪ್ರೈಮ್ ವೀಡಿಯೋದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಸರ್ಕಾರಿ ವಾರಿ ಪಾಟ (ತಮಿಳು, ತೆಲುಗು, ಮಲಯಾಳಂ), ರನ್‌ವೇ 34 (ಹಿಂದಿ), ಸಾಮ್ರಾಟ್‌ ಪ್ರಥ್ವಿರಾಜ್‌ (ಹಿಂದಿ, ತಮಿಳು, ತೆಲುಗು) ರೀತಿಯ ವಿವಿಧ ಭಾಷೆಗಳ ಜನಪ್ರಿಯ ಸಿನಿಮಾದ ಮೂಲಕ ಮೊದಲೇ ಪ್ರೈಮ್ ಡೇ ಸಂಭ್ರಮಾಚರಣೆ ಆರಂಬವಾಗಲಿದೆ.

Amazon Prime Video Announces Blockbuster Entertainment for Prime Day 2022

ಅಮೆಜಾನ್‌ ಪ್ರೈಮ್ ವಿಡಿಯೋ – ಪ್ರೈಮ್‌ ಡೇ 2022 ಕ್ಕೆ ಬ್ಲಾಕ್‌ಬಸ್ಟರ್‌ ಮನರಂಜನೆ

ಇಷ್ಟೇ ಅಲ್ಲ, ಇನ್ನೂ ಎರಡು ಭಾರತೀಯ ಅಮೆಜಾನ್ ಒರಿಜಿನಲ್ ಸಿರೀಸ್ ಕೂಡ ಬಿಡುಗಡೆಯಾಗಲಿದೆ. ಅವುಗಳೆಂದರೆ ಮಾಡರ್ನ್‌ ಲವ್ ಹೈದರಾಬಾದ್ (ತೆಲುಗು). ಇದು ಜಾಗತಿ ಸರಣಿಯ ಎರಡನೇ ಭಾರತೀಯ ಅವತರಣೆಇಕೆಯಾಗಿದ್ದು, ಇದು ಜುಲೈ 7 ರಂದು ಬಿಡುಗಡೆಯಾಗಲಿದೆ. ಕಾಮಿಕ್‌ಸ್ತಾನ್‌ ಸೀಸನ್ 3 (ಹಿಂದಿ) ಕೂಡಾ ಜುಲೈ 15 ರಂದು ಬಿಡುಗಡೆಯಾಗಲಿದೆ.

ಕ್ರಿಸ್‌ ಪ್ಯಾಟ್ ನಟನೆಯ ದಿ ಟರ್ಮಿನಲ್‌ ಲಿಸ್ಟ್ (ಇಂಗ್ಲಿಷ್‌, ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ) ಕೂಡ ಪ್ರೈಮ್‌ ಡೇ ಸಮೀಪದಲ್ಲಿ ಬಿಡುಗಡೆಯಾಗಲಿದೆ.

ಪ್ರೈಮ್‌ ಸದಸ್ಯರಿಗೆ ಅಚ್ಚರಿಯೆಂಬಂತೆ, ಎರಡು ಹೆಚ್ಚುವರಿ ಬಹುನಿರೀಕ್ಷಿತ ಶೀರ್ಷಿಕೆಗಳನ್ನೂ ಪ್ರೈಮ್‌ ಡೇಗೆ ಸಂದರ್ಭದಲ್ಲಿ ಘೋಷಿಸಲಾಗುತ್ತದೆ.

ಇದರ ಜೊತೆಗೆ, ಮೊದಲ ಬಾರಿಗೆ ಪ್ರೈಮ್‌ ಸದಸ್ಯರಿಗೆ ಪ್ರೈಮ್ ವೀಡಿಯೋ ಚಾನೆಲ್‌ಗಳಲ್ಲಿ ಲಭ್ಯವಿರುವ 12 ಜನಪ್ರಿಯ ವೀಡಿಯೋ ಸ್ಟ್ರೀಮಿಂಗ್ ಸೇವೆಗಳಿಂದ ಹೆಚ್ಚುವರಿ ಸಬ್‌ಸ್ಕ್ರಿಪ್ಷನ್‌ಗಳ ಮೇಲೆ 50% ರಿಯಾಯಿತಿಯನ್ನೂ ಘೋಷಿಸಲಾಗುತ್ತಿದೆ.

ಪ್ರೈಮ್ ವೀಡಿಯೋ ಚಾನೆಲ್‌ಗಳ ಮೂಲಕ ಸಾವಿರಾರು ಹೆಚ್ಚುವರಿ ಶೀರ್ಷಿಕೆಗಳನ್ನು ಪ್ರೈಮ್‌ ಸದಸ್ಯರು ಪಡೆಯಬಹುದಾಗಿದೆ. ಯಾವುದೇ ಲಾಗಿನ್ ಕಿರಿಕಿರಿ ಇಲ್ದೇ ಅನುಭವಿಸಬಹುದಾಗಿದೆ ಮತ್ತು ಎಲ್ಲ ಪ್ರೈಮ್ ವೀಡಿಯೋ ವೈಶಿಷ್ಟ್ಯಗಳಾದ ಐಎಂಡಿಬಿ ಎಕ್ಸ್‌ರೇ, ಒಂದೇ ವಾಚ್‌ಲಿಸ್ಟ್‌ ಆನಂದಿಸಬಹುದಾಗಿದೆ ಮತ್ತು ಆಫ್‌ಲೈನ್‌ ವೀಕ್ಷಣೆಗಾಗಿ ಲೈಬ್ರರಿ ಡೌನ್‌ಲೋಡ್ ಮಾಡಬಹುದಾಗಿದೆ.

ಇದರಲ್ಲಿ 12 ಒಟಿಟಿ ಸೇವೆಗಳಿದ್ದು, ಎಎಂಸಿ+, ಏಕಾರ್ನ್‌ ಟಿವಿ, ಹಾಯು, ಡಿಸ್ಕವರಿ+, ಲಯನ್ಸ್‌ಗೇಟ್‌ ಪ್ಲೇ, ಎರೋಸ್ ನೌ, ಡೊಕುಬೇ, ಮುಬಿ, ಹೋಯ್‌ಚೋಯ್‌, ಮನೋರಮಾ ಮ್ಯಾಕ್ಸ್‌, ಶಾರ್ಟ್ಸ್ ಟಿವಿ ಮತ್ತು ನಮ್ಮಫ್ಲಿಕ್ಸ್‌ ಇರಲಿದೆ.

The TerminalList

Sarkaru vaari paata

Samrat-Prithviraj

Runway

MordenLove

Comicstaan

Amazon Prime Video Announces Blockbuster Entertainment for Prime Day 2022

Prime Video announces an entertainment bonanza for Prime members, with an exciting line-up of highly anticipated Amazon Original series and popular movies across multiple languages this Prime Day.

Along with blockbuster movies released recently such as Runway 34 (Hindi), Sarkaru Vaari Paata (Telugu, Tamil, Malayalam), and Samrat Prithviraj (Hindi, Tamil, Telugu), Prime members will be able to catch the latest Amazon Original action-thriller series starring Chris Pratt – The Terminal List (English, Hindi, Tamil, Telugu, Malayalam, Kannada), a new season of fan-favourite Comicstaan (Hindi), and the second Indian adaptation of the beloved global series Modern Love Hyderabad (Telugu).

There’s more in store for Prime members with two more blockbuster movies that will be announced closer to Prime Day 2022. Also, as a special Prime Day offer, many of our partners will be offering up to 50% discount on add-on subscriptions through Prime Video Channels this Prime Day!

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ