Jai Bhim Cinema; ಜಯಬೀಮ್ ಚಿತ್ರತಂಡದ ವಿರುದ್ಧ ಕೇಸ್ ದಾಖಲು
Jai Bhim Cinema: ಜಯಬೀಮ್ ಚಿತ್ರತಂಡದ ವಿರುದ್ಧ ಕೇಸ್ ದಾಖಲು; ಹಕ್ಕುಸ್ವಾಮ್ಯ ಕಾಯ್ದೆಯಡಿ ಪೊಲೀಸ್ ಕ್ರಮ
ಚೆನ್ನೈ ಶಾಸ್ತ್ರಿನಗರ ಪೊಲೀಸರು ‘ಜಯಬೀಮ್’ (Jai Bhim Cinema) ಚಿತ್ರತಂಡದ ವಿರುದ್ಧ ಹಕ್ಕುಸ್ವಾಮ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಚೆನ್ನೈ ಶಾಸ್ತ್ರಿನಗರ ಪೊಲೀಸರು ಸೂರ್ಯ ಅಭಿನಯದ ‘ಜಯಭೀಮ್’ ಚಿತ್ರದ ನಿರ್ದೇಶಕ ಜ್ಞಾನವೇಲ್, ನಟ ಸೂರ್ಯ ಅವರ ನಿರ್ಮಾಣ ಸಂಸ್ಥೆ ‘2ಡಿ’ ಎಂಟರ್‌ಟೈನ್‌ಮೆಂಟ್ಸ್ ಮತ್ತು ಚಿತ್ರತಂಡದ ವಿರುದ್ಧ ಹಕ್ಕುಸ್ವಾಮ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
‘ಜಯಭೀಮ್’ ಚಿತ್ರವು ಸತ್ಯ ಘಟನೆಯಾಧಾರಿತವಾಗಿದ್ದು, ಪೊಲೀಸ್ ಚಿತ್ರಹಿಂಸೆಯಿಂದ ಹತ್ಯೆಗೀಡಾದ ರಾಜಾಕಣ್ಣು ಅವರ ಸಂಬಂಧಿ ಹಾಗೂ ಆ ಪ್ರಕರಣದ ಸಂತ್ರಸ್ತ ಕೊಳಂಜಿಯಪ್ಪನ್ ಅವರು ಸೈತಪ್ಪೇಟ್ ನ್ಯಾಯಾಲಯದಲ್ಲಿ ದಾಖಲಿಸಿರುವ ಪ್ರಕರಣದ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ : Bigg Boss Sonu Gowda; ಆ ವಿಡಿಯೋ ಬಗ್ಗೆ ಮಾತನಾಡಿದ ಸೋನು ಗೌಡ
ರಾಜಾಕಣ್ಣು ಅವರ ಸಂಬಂಧಿ ಕೊಳಂಜಯಪ್ಪನವರು ತಮ್ಮ ಜೀವನದ ನೈಜ ಘಟನೆಯನ್ನು ತಮ್ಮ ಅನುಮತಿಯಿಲ್ಲದೆ ಚಿತ್ರೀಕರಿಸಲಾಗಿದ್ದು, ಹಕ್ಕುಸ್ವಾಮ್ಯ ಕಾನೂನು ಆಧಾರದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕೋರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
26ರೊಳಗೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ಶಾಸ್ತ್ರಿನಗರ ಠಾಣೆ ಪೊಲೀಸರಿಗೆ ಸೈತಾಪೇಟ್ ನ್ಯಾಯಾಲಯ ಆದೇಶ ನೀಡಿದ್ದು, ಇದೀಗ ಪ್ರಕರಣ ದಾಖಲಾಗಿರುವುದು ಗಮನಿಸಬೇಕಾದ ಸಂಗತಿ.
Follow us On
Google News |
Advertisement