ತಮಿಳು ನಟ ವಿಕ್ರಮ್ ಕಾವೇರಿ ಆಸ್ಪತ್ರೆಗೆ ದಾಖಲು – ಹೃದಯಾಘಾತ
Chiyan Vikram: ತಮಿಳು ನಟ ಚಿಯಾನ್ ವಿಕ್ರಮ್ ಶುಕ್ರವಾರ ಬೆಳಗ್ಗೆ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ವಿಕ್ರಮ್ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸದ್ಯ ಅವರ ಆರೋಗ್ಯದ ಬಗ್ಗೆ ಆಸ್ಪತ್ರೆಯಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಶುಕ್ರವಾರ ಸಂಜೆ (ಇಂದು) ‘ಪೊನ್ನಿಯನ್ ಸೆಲ್ವಂ-1’ ಟೀಸರ್ ಬಿಡುಗಡೆ ಸಮಾರಂಭದಲ್ಲಿ ವಿಕ್ರಮ್ ಭಾಗವಹಿಸಬೇಕಿತ್ತು. ಸದ್ಯ ಅವರ ಅಭಿನಯದ ‘ಕೋಬ್ರಾ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
ಕ್ರಮ್ ಕಾರ್ಯಕ್ರಮಕ್ಕೆ ಬರಬೇಕಿದ್ದಾಗ ಈ ಘಟನೆ ನಡೆದಿದೆ. ಅವರ ಅಭಿಮಾನಿಗಳು ತೀವ್ರ ನಿರಾಶೆಗೊಂಡಿದ್ದಾರೆ.
ಸದ್ಯ ಪೊನ್ನಿಯನ್ ಸೆಲ್ವಂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸುತ್ತಿದ್ದಾರೆ. ಸೆಪ್ಟೆಂಬರ್ 3 ರಂದು ಹಿಂದಿ ಹಾಗೂ ದಕ್ಷಿಣ ಭಾಷೆಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಪ್ರಯತ್ನ ಮಾಡುತ್ತಿದ್ದಾರೆ.
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019