777 Charlie Movie, 777 ಚಾರ್ಲಿ ಸಿನಿಮಾ ವೀಕ್ಷಿಸಿದ ಸಿಎಂ ಬೊಮ್ಮಾಯಿ

777 Charlie Movie, ಭಾರೀ ಪ್ರಶಂಸೆಗೆ ಪಾತ್ರವಾಗಿ ಅತ್ಯುತ್ತಮ ಪ್ರದರ್ಶನ ಕಾಣುತ್ತಿರುವ 777 ಚಾರ್ಲಿ ಸಿನಿಮಾವನ್ನ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಅವರು ವೀಕ್ಷಿಸಿದ್ದಾರೆ.

Online News Today Team

ಬೆಂಗಳೂರು (Bengaluru): ಭಾರೀ ಪ್ರಶಂಸೆಗೆ ಪಾತ್ರವಾಗಿ ಅತ್ಯುತ್ತಮ ಪ್ರದರ್ಶನ ಕಾಣುತ್ತಿರುವ 777 ಚಾರ್ಲಿ ಸಿನಿಮಾವನ್ನ (777 Charlie Movie) ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಅವರು ವೀಕ್ಷಿಸಿದ್ದಾರೆ. ನಗರದ ಒರಾಯನ್ ಮಾಲ್ ಪಿವಿಆರ್ ನಲ್ಲಿ ವಿಶೇಷ ಪ್ರದರ್ಶಶದಲ್ಲಿ 777 ಚಾರ್ಲಿ ಕನ್ನಡ ಚಲನಚಿತ್ರವನ್ನು ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಸಚಿವರಾದ ಆರ್ ಅಶೋಕ, ಬಿ ಸಿ ನಾಗೇಶ, ಶಾಸಕ ರಘುಪತಿ ಭಟ್, ಚಿತ್ರದ ನಾಯಕ ನಟ ರಕ್ಷಿತ್ ಶೆಟ್ಟಿ (Rakshit Shetty) ಮತ್ತು ಚಿತ್ರದ ನಿರ್ದೇಶಕ ಕಿರಣ್ ರಾಜ್, ನಾಯಕ ನಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಚಾರ್ಲಿ ಪಾತ್ರದಲ್ಲಿ ನಾಯಿಯೊಂದು ಕಾಣಿಸಿಕೊಂಡಿದ್ದು ಉತ್ತಮ ಕಥೆ ಹೊಂದಿರುವ ಸಿನಿಮಾ (Cinema) ಅತ್ಯುತ್ತಮ ಸಂದೇಶ ನೀಡಿದ್ದು ಭಾವನಾತ್ಮಕವಾಗಿದೆ ಎಂದು ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಹ ಶ್ವಾನಪ್ರಿಯರಾಗಿದ್ದು ಗೃಹಸಚಿವರಾಗಿದ್ದಾಗ ಅವರು ಸಾಕಿದ್ದ ನಾಯಿ ಸನ್ನಿ ಸಾವನ್ನಪ್ಪಿದಾಗ ಭಾವುಕರಾಗಿದ್ದನ್ನ ಸ್ಮರಿಸಬಹುದು.

CM Bommai Watched 777 Charlie Movie With Rakshit Shetty

Watch 777 Charlie Movie Trailer

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ಸ್ಟೋರೀಸ್ ನೋಡಿ – Web Stories

Follow Us on : Google News | Facebook | Twitter | YouTube