ಗಿಚ್ಚಿ ಗಿಲಿಗಿಲಿ ನಟ ಚಂದ್ರಪ್ರಭ ಮತ್ತೆ ಗಾರೆ ಕೆಲಸ ಮಾಡುವ ಸ್ಥಿತಿ
ಹಾಸ್ಯ ಶೋಗಳಿಂದ ಹೆಸರು ಪಡೆದ ಚಂದ್ರಪ್ರಭ, ಇಂದು ಗಾರೆ ಕೆಲಸ ಮಾಡುತ್ತಿದ್ದಾರೆ. ಅವಕಾಶಗಳ ಕೊರತೆ, ಜೀವನದ ಕಷ್ಟಗಳು ಅವರನ್ನು ಹಿಂದಿನ ಕೆಲಸವನ್ನೇ ಮತ್ತೆ ಹಿಡಿಯುವ ಸ್ಥಿತಿಗೆ ತಂದಿವೆ.

ಟಿವಿಯಲ್ಲಿ ಮಿಂಚುತ್ತಿದ್ದೆ, ಈಗ ನೋಡಿದ್ರೆ ಗಾರೆ ಕೆಲಸ ಮಾಡ್ತೀಯ ಅಂತ ಎಲ್ಲ ಕೇಳ್ತಾರೆ” ಎಂಬ ಚಂದ್ರಪ್ರಭನ (Chandraprabha) ಮಾತುಗಳು, ರಿಯಾಲಿಟಿ ಶೋನಿಂದ (TV Reality Show) ಈಗಿನ ತನಕ ಅವರ ಪ್ರಯಾಣವನ್ನು ಬಿಂಬಿಸುತ್ತವೆ.
ಹಾಸ್ಯ ಚಟಾಕಿಗಳಿಂದ ರಾಜ್ಯದಾದ್ಯಂತ ಜನಪ್ರಿಯರಾದ ಚಂದ್ರಪ್ರಭ, ಈಗ ಅವಕಾಶ ದೊರಕದೆ, ಕಳೆದ ಎರಡು ತಿಂಗಳುಗಳಿಂದ ಕಟ್ಟಡ ನಿರ್ಮಾಣ (Building Construction) ಕ್ಷೇತ್ರದಲ್ಲಿ ಗಾರೆ ಕೆಲಸ ಮಾಡುತ್ತಿದ್ದಾರೆ ಎಂಬುದು ಅವರದೇ ಮಾತು.
ಚಂದ್ರಪ್ರಭ ಮೊದಲಿನಿಂದಲೂ ಗಾರೆ ಕೆಲಸ ಮಾಡುತ್ತಿದ್ದವರು. ತಮ್ಮ ತಂದೆಯಿಂದಲೇ ಅವರು ಈ ಕೆಲಸ ಕಲಿತಿದ್ದರು. ನಂತರದಲ್ಲಿ ರಿಯಾಲಿಟಿ ಶೋಗಳಲ್ಲಿ ಅವಕಾಶ ದೊರೆತು, ಸುಮಾರು 80 ಸಿನಿಮಾ ಹಾಗೂ ಅನೇಕ ಟಿವಿ ಶೋಗಳಲ್ಲಿ ಕಾಣಿಸಿಕೊಂಡರು. ಆದರೆ ಈಗ ಕಾಲ ಬದಲಾಗಿದೆ; ದುಡಿಮೆಗೆ ಗಾರೆ ಕೆಲಸವೇ ಆಯ್ಕೆ ಆಗಿದೆ. ಈ ವೃತ್ತಿಗೆ ಮತ್ತೆ ಮರಳಿದ್ದು ಖುಷಿ ಇದೆ ಎನ್ನುತ್ತಾರೆ ಅವರು.
ಹಾಸ್ಯ ಶೋಗಳ ಮೂಲಕ ಜನಪ್ರಿಯರಾಗಿದ್ದ ಅವರು, ವೇದಿಕೆಯಲ್ಲಿ ಜನರನ್ನು ನಗಿಸುತ್ತಿದ್ದವರು ಇಂದು ಇಟ್ಟಿಗೆ, ಸಿಮೆಂಟ್ ಜೊತೆಗೆ ಜೀವನ ಕಟ್ಟುತ್ತಿದ್ದಾರೆ. ಅವರ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅವರು ಹಂಚಿಕೊಂಡ ಗಾರೆ ಕೆಲಸದ ವಿಡಿಯೋಗಳು ಸಾಕಷ್ಟು ಸ್ಪಂದನೆ ಪಡೆಯುತ್ತಿವೆ. ನಗುತ್ತಾ ಕೆಲಸ ಮಾಡುವ ಅವರ ದೃಶ್ಯಗಳೇ ಸ್ಪಷ್ಟವಾಗಿ ತೋರಿಸುತ್ತವೆ — ಸಾಧನೆಯ ಹೆಜ್ಜೆಗಳ ಹಿಂದೆ ಇರುವ ನಿಜದ ಜೀವನ.
ಇಂತಹ ಕಲಾವಿದರ ಜೀವನ ಸವಾಲುಗಳಿಂದ ಕೂಡಿರುತ್ತದೆ. ಅವಕಾಶಗಳ ಕೊರತೆ, ಹಣಕಾಸಿನ ಅಡಚಣೆಗಳು ಹಾಗೂ ನಿರಂತರ ಶ್ರಮ ಅವರನ್ನು ನೆಲಕ್ಕೆ ಇಳಿಸುತ್ತವೆ. ಆದರೆ ಚಂದ್ರಪ್ರಭ ಮಾದರಿಯಂತೆ ತಮ್ಮ ಹಳೆಯ ಬದುಕಿಗೆ ಹೆಮ್ಮೆಪಟ್ಟು ಎದುರಿಸುವವರು ಹಲವರಿಗು ಪ್ರೇರಣೆಯಾಗಬಹುದು.
Gicchi Giligili Actor Turns to Masonry Work




