‘ಗಂಧದ ಕುಡಿ’ಯ ಮಡಿಲಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಗಳ ಗರಿ
‘ಗಂಧದ ಕುಡಿ’ಯ ಮಡಿಲಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಗಳ ಗರಿ
international awards for Gandada Kudi/Chandan Van
ಹೌದು ಗಂಧದ ಕುಡಿ ಬಿಡುಗಡೆಗೂ ಮುಂಚೆಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ನಮ್ಮ ಸ್ಯಾಂಡಲ್ ವುಡ್ ಏನೂ ಕಲಾವಿದರಿಗೆ , ಕಲಾತ್ಮಕತೆಗೆ ಕಡಿಮೆ ಇಲ್ಲ ಎಂದು ಸಾಭೀತು ಪಡಿಸಿದೆ.
ಅಶ್ಲೀಲ ಕಥೆಗಳು , ಮುಜುಗರ ತರಿಸುವ ದೃಶ್ಯಗಳು ಕಥೆಯೇ ಇಲ್ಲದ ಚಿತ್ರಕಥೆಗಳು ಅಷ್ಟೇಕೆ ಕುಟುಂಬ ಸದಸ್ಯರೊಂದಿಗೆ ನೋಡಲೇ ಆಗದ ಸಿನಿಮಾಗಳು ,
ಆ ನಡುವೆ ಸಂದೇಶ ಭರಿತ ಇಂತಹ ಕಲಾತ್ಮಕ ಸಿನಿಮಾ ಕೇವಲ ನಾಲ್ಕೇ ನಾಲ್ಕು ಪ್ರಶಸ್ತಿ ಪಡೆದಿರುವುದು ಕಡಿಮೆಯೇ ಸರಿ.
” ಗಂಧದ ಕುಡಿ ” ಗೆ ಒಲಿದ 4 ಅಂತಾರಾಷ್ಟ್ರೀಯ ಪ್ರಶಸ್ತಿಗಳು
ಮಂಗಳೂರಿನ ಇನ್ವೆಂಜರ್ ಟೆಕ್ನಾಲಜೀಸ್ ಬ್ಯಾನರ್‌ನಲ್ಲಿ ಕೆ.ಸತ್ತೆಂದ್ರ ಪೈ ಹಾಗೂ ಕೆ ಮೋಹನ್ ಪೈ ಅವರ ನಿರ್ಮಾಣದಲ್ಲಿ ಇಮ್ಯಾಜಿನೇಷನ್ ಮೂವೀಸ್‌ನ ಸಂತೋಷ್ ಶೆಟ್ಟಿ ಕಟೀಲು ಇವರ ನಿರ್ದೇಶನದ ‘ಗಂಧದ ಕುಡಿ/ಚಂದನ್‌ವನ್’ ಚಲನಚಿತ್ರಕ್ಕೆ ನವೆಂಬರ್ 25ರಂದು ಮುಂಬೈಯಲ್ಲಿ ನಡೆದ ಮೂನ್‌ವೈಟ್ ಚಲನಚಿತ್ರೋತ್ಸವದಲ್ಲಿ 4 ಅಂತಾರಾಷ್ಟ್ರೀಯ ಪ್ರಶಸ್ತಿಗಳು ಒಲಿದಿವೆ.
ಅಗಸ್ಟ್ ತಿಂಗಳಿನಲ್ಲಿ ಅಮೆರಿಕಾದ ಕ್ಯಾಲಿಫೋರ್ನಿಯಾದ “ಸ್ಯಾನ್ ಡಿಯಾಗೋ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ”ದಲ್ಲಿ Best Family Feature 2018 (ಅತ್ಯುತ್ತಮ ಕೌಟುಂಬಿಕ ಚಲನಚಿತ್ರ), ಅಕ್ಟೋಬರ್ ತಿಂಗಳಿನಲ್ಲಿ ಕೋಲ್ಕತ್ತಾದಲ್ಲಿ ನಡೆದ NEZ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ “ಅತ್ಯುತ್ತಮ ಚಲನಚಿತ್ರ” ಹಾಗೂ ಚಿತ್ರದ ಹಿನ್ನಲೆ ಸಂಗೀತಕ್ಕಾಗಿ ಪ್ರಸಾದ್ ಕೆ ಶೆಟ್ಟಿ ‘ಅತ್ಯುತ್ತಮ ಹಿನ್ನಲೆ ಸಂಗೀತ’ ಪ್ರಶಸ್ತಿಗಳನ್ನು ಪಡೆದಿದ್ದರು .
ಇದೀಗ ನವೆಂಬರ್ 24 ಮತ್ತು 25 ರಂದು ಮುಂಬೈಯಲ್ಲಿ ನಡೆದ ‘ಮೂನ್‌ವೈಟ್ ಫಿಲಂಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ” ದಲ್ಲಿ ‘ಅತ್ಯುತ್ತಮ ಚಿತ್ರ , ‘ಅತ್ಯುತ್ತಮ ನಿರ್ದೆಶಕ’ ಪ್ರಶಸ್ತಿ ಸಹಿತ ಪ್ರಶಸ್ತಿಗಳ ಗೊಂಚಲನ್ನೆ ಬಾಚಿಕೊಂಡಿದೆ.
ಸಾವಿರಾರು ಚಲನಚಿತ್ರಗಳ ಜೊತೆ ಪೈಪೋಟಿಯಿತ್ತ ಕನ್ನಡ ಸಿನಿಮಾ ಗಂಧದ ಕುಡಿ.
ಮುಂಬೈನ ‘ಮೂನ್‌ವೈಟ್ ಫಿಲಂಸ್’ನವರು ಆಯೋಜಿಸಿದ್ದ ‘ಮೂನ್‌ವೈಟ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಭಾರತದ ವಿವಿಧ ರಾಜ್ಯಗಳ ವಿವಿಧ ಭಾಷೆಗಳ ಹಾಗೂ ವಿದೇಶಗಳ ಸಾವಿರಕ್ಕೂ ಅಧಿಕ ಚಲನಚಿತ್ರಗಳು ಭಾಗವಹಿಸಿದ್ದವು.
ಸುಮಾರು 50 ವಿಭಾಗಗಳಲ್ಲಿ ವಿವಿಧ ಪ್ರಶಸ್ತಿಗಳನ್ನು ನೀಡಲಾಗಿದ್ದು, ಅವುಗಳಲ್ಲಿ ‘ಗಂಧದ ಕುಡಿ/ ಚಂದನ್‌ವನ್’ ಚಲನ ಚಿತ್ರವು ‘ಅತ್ಯುತ್ತಮ ಚಲನಚಿತ್ರ’, ಚಿತ್ರದ ನಿರ್ದೇಶನಕ್ಕಾಗಿ ಸಂತೋಷ್ ಕುಮಾರ್ ಕಟೀಲು ಅವರಿಗೆ ‘ಅತ್ಯುತ್ತಮ ನಿರ್ದೇಶಕ’, ಹಾಗೂ ಚಿತ್ರದಲ್ಲಿನ ನಟನೆಗಾಗಿ ಕನ್ನಡ ಚಿತ್ರರಂಗದ ಹಿರಿಯ ನಟ ರಮೇಶ್ ಭಟ್ ಹಾಗೂ ಕಿರುತೆರೆ ನಟಿ ಜ್ಯೋತಿ ರೈ ‘ಅತ್ಯುತ್ತಮ ನಟ’, ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದಿದ್ದಾರೆ.
ಜೊತೆಗೆ ಚಿತ್ರದಲ್ಲಿ ನಟಿಸಿದ ಬಾಲನಟರಾದ ಬೇಬಿ ನಿಧಿ ಸಂಜೀವ ಶೆಟ್ಟಿ, ಬೇಬಿ ಕೀಷಾ, ಮಾಸ್ಟರ್ ವಿಘ್ನೇಶ್, ಮಾಸ್ಟರ್ ಶ್ರೀಶ ಶೆಟ್ಟಿ, ಮಾಸ್ಟರ್ ಶ್ರೇಯಸ್ ಶೆಟ್ಟಿ, ಬೇಬಿ ಆ್ಯಶ್ಲಿನ್ ಡಿಸೋಜಾ, ಬೇಬಿ ಪ್ರಣತಿ ಮೂನ್‌ವೈಟ್ ಫಿಲಂಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವಿಶೇಷ ಪ್ರಶಸ್ತಿಯನ್ನು (Special Festival Mention)ಪಡೆದಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಚಲನಚಿತ್ರ ಗಂಧದ ಕುಡಿ
ಹಲವು ಪ್ರಶಸ್ತಿಗಳನ್ನು ಪಡೆಯುವುದರ ಮುಖಾಂತರ ಚಿತ್ರವು ಪ್ರದರ್ಶಿತಗೊಂಡ ಎಲ್ಲಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಮರ್ಶಕರ ಮೆಚ್ಚುಗೆಯನ್ನು ಪಡೆದಿದೆ.
ಇಷ್ಟು ಮಾತ್ರವಲ್ಲದೆ, ಚಿತ್ರವು
‘ಅತ್ಯುತ್ತಮ ಮೂಲಕಥೆ’ ಹಾಗೂ ‘ಅತ್ಯುತ್ತಮ ಕಥಾ ಲೇಖಕ’ ವಿಭಾಗದಲ್ಲಿ ಸಂತೋಷ್ ಶೆಟ್ಟಿ ಕಟೀಲು,
‘ಅತ್ಯುತ್ತಮ ಸಂಕಲನ’ ವಿಭಾಗದಲ್ಲಿ ರವಿರಾಜ್ ಗಾಣಿಗ,
ಅತ್ಯುತ್ತಮ ಹಿನ್ನಲೆ ಸಂಗೀತ’ ವಿಭಾಗದಲ್ಲಿ ಪ್ರಸಾದ್ ಕೆ ಶೆಟ್ಟಿ,
‘ಅತ್ಯುತ್ತಮ ಛಾಯಾಗ್ರಹಣ’ ವಿಭಾಗದಲ್ಲಿ ಸಚಿನ್ ಎಸ್ ಶೆಟ್ಟಿ, ಕಾಪು,
‘ಅತ್ಯುತ್ತಮ ದೃಶ್ಯ ಸಂಯೋಜನೆ’ ವಿಭಾಗದಲ್ಲಿ ಇಮ್ಯಾಜಿನೇಷನ್ ಮೂವೀಸ್, ಮಂಗಳೂರು ನಾಮನಿರ್ದೇಶನಗೊಂಡಿದ್ದು, ಬಿಡುಗಡೆಗೆ ಮುನ್ನವೇ ಸದ್ದು ಮಾಡುತ್ತಿದೆ.
ನವೆಂಬರ್ 24 ಮತ್ತು 25 ರಂದು ನಡೆದ, ಪ್ರಶಸ್ತಿ ಪ್ರದಾನ ಸಮಾರಂಭ
ಚಿತ್ರದ ನಿರ್ಮಾಪಕರಾದ ಸತ್ತೆಂದ್ರ ಪೈ, ಸಹನಿರ್ದೇಶಕಿ ಪ್ರೀತಾ ಮಿನೇಜಸ್, ಕನ್ನಡ ಚಿತ್ರರಂಗದ ಹಿರಿಯ ನಟ ರಮೇಶ್ ಭಟ್, ಬಾಲನಟಿ ನಿಧಿ ಸಂಜೀವ ಶೆಟ್ಟಿ ಪಾಲ್ಗೊಂಡು ಪ್ರಶಸ್ತಿಗಳನ್ನು ಸ್ವೀಕರಿಸಿದರು.
‘ಗಂಧದ ಕುಡಿ/ ಚಂದನ್‌ವನ್’ ಚಲನಚಿತ್ರವು ಮಂಗಳೂರಿನ ನಿರ್ದೇಶಕ ಸಂತೋಷ್ ಶೆಟ್ಟಿ ಕಟೀಲು ಅವರ ನಿರ್ದೇಶನದ ಎರಡನೆಯ ಚಲನಚಿತ್ರ.
ಮೊದಲ ಚಲನಚಿತ್ರ ‘ಕನಸು ಕಣ್ಣು ತೆರೆದಾಗ’ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಮರ್ಶಕರ ಮೆಚ್ಚುಗೆ ಗಳಿಸಿ ಪ್ರಶಸ್ತಿಗೆ ಪಾತ್ರವಾಗಿತ್ತು.
ನಿರ್ದೇಶಕರು ತಮ್ಮ ಮೊದಲನೆಯ ಚಿತ್ರದಲ್ಲಿ ಸ್ವಚ್ಚತೆಯ ಕುರಿತಾದ ಸಂದೇಶವನ್ನು ಮಕ್ಕಳ ಮುಖಾಂತರ ಪ್ರೇಕ್ಷಕರಿಗೆ ತಲುಪಿಸಿದ್ದರು.
ವಿಭಿನ್ನ ಶೈಲಿಯ ಕಥೆ ಹಾಗೂ ಪರಿಸರ ಕಾಳಜಿಯ ಕನ್ನಡ ಮೂವಿ ಗಂಧದ ಕುಡಿ.
ಈ ಬಾರಿ ‘ಗಂಧದ ಕುಡಿ / ಚಂದನ್‌ವನ್’ ಚಿತ್ರವು ಮನೋರಂಜನೆ ಜೊತೆಗೆ, ಸಂಪೂರ್ಣ ಹಾಸ್ಯ ಹಾಗೂ ವಿಭಿನ್ನ ಪಾತ್ರಗಳೊಂದಿಗೆ ಪರಿಸರ ಸಂರಕ್ಷಣೆಯ ಕಾಳಜಿ ತೋರಿದ್ದಾರೆ.
ಚಿತ್ರವು ವಿಭಿನ್ನ ಶೈಲಿಯಲ್ಲಿ ನಿರ್ದೇಶಿಸಿದ್ದು, ಡಿಸೆಂಬರ್ ತಿಂಗಳಾಂತ್ಯದಲ್ಲಿ ಚಿತ್ರದ ಆಡಿಯೋ ಬಿಡುಗಡೆಗೊಳ್ಳಲಿದ್ದು ಅತೀ ಶೀಘ್ರದಲ್ಲಿ ತೆರೆಕಾಣಲಿದೆ.////
WebTitle : ‘ಗಂಧದ ಕುಡಿ’ಯ ಮಡಿಲಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಗಳ ಗರಿ-international awards for Gandada Kudi/Chandan Van
>>> ಕ್ಲಿಕ್ಕಿಸಿ ಕನ್ನಡ ನ್ಯೂಸ್ : Kannada Film News । SandalWood News
Gandada Kudi Kannada New Movie | Kannada Cinema Gandada Kudi | Latest Movie Gandada Kudi | Kannada Film Gandada Kudi
Our Whatsapp Channel is Live Now 👇