ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ಜೈಲರ್ ಸಿನಿಮಾ, ಎರಡೇ ದಿನದಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?
Jailer Cinema Collections : ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಮತ್ತು ಮಿಲ್ಕಿ ಬ್ಯೂಟಿ ತಮನ್ನಾ ಅಭಿನಯದ ಸಿನಿಮಾ ಜೈಲರ್. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಚಿತ್ರ ಇದೇ ತಿಂಗಳ 10 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಮೊದಲ ದಿನವೇ ಪಾಸಿಟಿವ್ ಟಾಕ್ ಪಡೆದಿರುವ ಜೈಲರ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಸುರಿಮಳೆಗರೆಯುತ್ತಿದೆ. ಬಿಡುಗಡೆಯಾದ ದಿನವೇ ರೂ.52 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಎರಡು ದಿನವೂ ಅದೇ ಗತಿಯಲ್ಲಿ ಸಾಗುತ್ತಿದೆ.
Jaya Prada : ಖ್ಯಾತ ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ
ಎರಡು ದಿನಗಳಲ್ಲಿ ಜೈಲರ್ ರು.100 ಕೋಟಿ ದಾಟಿದೆ ಎಂದು ಸಿನಿ ಟ್ರೇಡ್ ಮೂಲಗಳು ಬಹಿರಂಗಪಡಿಸಿವೆ. ವಿಶ್ವಾದ್ಯಂತ ನೂರು ಕೋಟಿಗೂ ಹೆಚ್ಚು ಗಳಿಸಿದೆಯಂತೆ. ಅದರಲ್ಲೂ ದಕ್ಷಿಣದಲ್ಲಿ ತಲೈವಾಗೆ ಅಪಾರ ಅಭಿಮಾನಿಗಳಿದ್ದಾರೆ.
ಅದು ಬಿಟ್ಟರೆ ವಿದೇಶದಲ್ಲೂ ರಜನಿಕಾಂತ್ ಚಿತ್ರಗಳ ಕ್ರೇಜ್ ಅದೇ ಮಟ್ಟದಲ್ಲಿದೆ. ಇದರೊಂದಿಗೆ ಜೈಲರ್ ಸುಲಭವಾಗಿ ರೂ.100 ಕೋಟಿ ಗಡಿ ದಾಟಿದೆ. ವಾರಾಂತ್ಯದಲ್ಲಿ ಇನ್ನಷ್ಟು ದಾಖಲೆಗಳು ಮುರಿಯುವುದು ಖಚಿತ.
ಮುಂದಿನ ದಿನಗಳಲ್ಲಿ ಇನ್ನಷ್ಟು ದಾಖಲೆಗಳು ಮುರಿಯುವ ನಿರೀಕ್ಷೆಯಿದೆ ಎಂದು ವ್ಯಾಪಾರ ಮೂಲಗಳು ನಿರೀಕ್ಷಿಸುತ್ತಿವೆ. ಇನ್ನು ಸುನೀಲ್, ರಮ್ಯಾ ಕೃಷ್ಣ, ಮಲಯಾಳಂ ಸ್ಟಾರ್ ಹೀರೋ ಮೋಹನ್ ಲಾಲ್, ಕನ್ನಡದ ಸ್ಟಾರ್ ಹೀರೋ ಶಿವರಾಜ್ ಕುಮಾರ್ ಮತ್ತು ಬಾಲಿವುಡ್ ನಟ ಜಾಕಿ ಶ್ರಾಫ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ ನೀಡಿದ್ದಾರೆ.
ಅನಂತನಾಗ್ ಅಭಿನಯದ ‘ನಾ ನಿನ್ನ ಬಿಡಲಾರೆ’ ಭಯಾನಕ ಚಿತ್ರ ಆಗಿನ ಕಾಲಕ್ಕೆ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?
Jailer Cinema Collections on 2nd Day