ಪತ್ನಿ ಸ್ಪಂದನಾಗೆ ಬಳೆ ತೊಡಿಸಿ ಬಿಕ್ಕಳಿಸಿ ಬಿಕ್ಕಳಿಸಿ ಅತ್ತ ನಟ ವಿಜಯ್ ರಾಘವೇಂದ್ರ! ಕಂಬನಿ ಮಿಡಿದ ಇಡೀ ಸ್ಯಾಂಡಲ್ ವುಡ್
ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಪಾರ್ಥಿವ ಶರೀರದ ಪಕ್ಕದಲ್ಲಿ ಕುಳಿತು ಕಣ್ಣೀರು ಹಾಕುತ್ತಿರುವ ಹೃದಯ ವಿದ್ರಾವಕ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು ಅಭಿಮಾನಿಗಳು ಸೇರಿದಂತೆ ಇಡೀ ರಾಜ್ಯವೇ ಮರುಗಿದೆ.
ಕನ್ನಡ ನಟ ವಿಜಯ್ ರಾಘವೇಂದ್ರ (Actor Vijaya Raghavendra) ಅವರ ಪತ್ನಿ ಸ್ಪಂದನಾ (Wife Spandana) ಹೃದಯಾಘಾತದಿಂದ ಶನಿವಾರ ರಾತ್ರಿ ನಿಧನರಾದರು. ಈ ಘಟನೆ ನಡೆದಾಗ ಸ್ಪಂದನಾ ಬ್ಯಾಂಕಾಕ್‌ನಲ್ಲಿದ್ದರು. ಆಕೆಯ ಸಾವು ಹೃದಯ ಸ್ತಂಭನ ಮತ್ತು ಕಡಿಮೆ ರಕ್ತದೊತ್ತಡದಿಂದ ಸಂಭವಿಸಿದೆ ಎಂದು ಕುಟುಂಬದ ಮೂಲಗಳು ಬಹಿರಂಗಪಡಿಸಿವೆ. ಸ್ಪಂದನಾ ಅವರಿಗೆ ಕೇವಲ 41 ವರ್ಷ ಆಗಿತ್ತು.
ಸ್ಪಂದನಾ ಅವರು ನಿವೃತ್ತ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ), ಬಿ ಕೆ ಶಿವರಾಮ್ ಅವರ ಪುತ್ರಿ. ಅವರು 2007 ರಲ್ಲಿ ವಿಜಯ್ ಅವರನ್ನು ವಿವಾಹವಾದರು ಮತ್ತು ದಂಪತಿಗೆ ಶೌರ್ಯ ಎಂಬ ಮಗನಿದ್ದಾನೆ. ಸ್ಪಂದನಾ 1985 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಅವರು ಬೆಂಗಳೂರಿನ ಸ್ಟೆಲ್ಲಾ ಮಾರಿಸ್ ಕಾಲೇಜು ಮತ್ತು ಕೇರಳದ MES ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.
ಸ್ಪಂದನಾ ಅವರು ವಿ ರವಿಚಂದ್ರನ್ ಅವರ 2016 ರ ಚಲನಚಿತ್ರ ‘ಅಪೂರ್ವ’ದಲ್ಲಿ (Kannada Cinema) ಅತಿಥಿ ಪಾತ್ರವನ್ನು ಮಾಡುವುದರ ಜೊತೆಗೆ ಅವರ ಪತಿಯ ಒಂದೆರಡು ಚಲನಚಿತ್ರಗಳನ್ನು ಸಹ ನಿರ್ಮಿಸಿದ್ದಾರೆ. ಇನ್ನು ಸ್ಪಂದನಾ ಅವರ ಸಹೋದರ ರಕ್ಷಿತ್ ಶಿವರಾಮ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ರಾಜ್ಯ ಜನರಲ್ ಆಗಿ ಪ್ರಮುಖ ಸ್ಥಾನವನ್ನು ಹೊಂದಿದ್ದಾರೆ.
ಸ್ಪಂದನಾ ದಕ್ಷಿಣ ಕನ್ನಡದ ಬೆಳ್ತಂಗಡಿ ಮೂಲದವರಾಗಿದ್ದು, ಪತಿ ಮತ್ತು ಮಗನೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
View this post on Instagram
ಕೆಲ ದಿನಗಳ ಹಿಂದೆಯಷ್ಟೇ ವಿಜಯ್ ಮತ್ತು ಸ್ಪಂದನಾ ಅವರು ಕರ್ನಾಟಕ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ವಿಜಯ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಭೇಟಿಯ ಚಿತ್ರವನ್ನು ಸಹ ಹಂಚಿಕೊಂಡಿದ್ದರು.
ಇನ್ನು ಇಂದು ಸ್ಪಂದನಾ ಅವರ ಅಂತಿಮ ದರ್ಶನಕ್ಕೆ ಆಪ್ತರು, ಗಣ್ಯರು ಆಗಮಿಸಿದ್ದರು. ಬಿಕೆ ಶಿವರಾಂ ನಿವಾಸದ ಮುಂಭಾಗದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಸ್ಯಾಂಡಲ್ ವುಡ್ ನ ಬಹುತೇಕ ಎಲ್ಲರೂ ಆಗಮಸಿ ಅಂತಿಮ ದರ್ಶನ ಪಡೆದು ವಿಜಯ್ ರಾಘವೇಂದ್ರ ಅವರಿಗೆ ಸಾಂತ್ವಾನ ಹೇಳಿದರು.
An inconsolable #vijayraghavendra sat near the mortal remains of his wife, Spandana, at their Malleswaram residence, on Wednesday morning. #Spandana #RIP #RestInPeace #VijayRaghavendra pic.twitter.com/Dbh1sDcDC8
— Bangalore Times (@BangaloreTimes1) August 9, 2023
ಇನ್ನು ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಪಾರ್ಥಿವ ಶರೀರದ ಪಕ್ಕದಲ್ಲಿ ಕುಳಿತು ಕಣ್ಣೀರು ಹಾಕುತ್ತಿರುವ ಹೃದಯ ವಿದ್ರಾವಕ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು ಅಭಿಮಾನಿಗಳು ಸೇರಿದಂತೆ ಇಡೀ ರಾಜ್ಯವೇ ಮರುಗಿದೆ. ಇನ್ನು ವಿಜಯ್ ರಾಘವೇಂದ್ರ ಪತ್ನಿಗೆ ಬಳೆ ತೊಡಿಸಿ ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಿದ್ದ ದೃಶ್ಯ ನೋಡಿದ ಯಾರೇ ಆಗಲಿ ಆ ಭಗವಂತನನ್ನು ಒಂದು ಕ್ಷಣ ಶಪಿಸದೆ ಇರುವುದಿಲ್ಲ.
ಸ್ಯಾಂಡಲ್‌ವುಡ್ ಚಿತ್ರರಂಗ ಮತ್ತು ನಟ ವಿಜಯ್ ರಾಘವೇಂದ್ರ ಅವರ ಅಭಿಮಾನಿಗಳು ಅವರ ಪತ್ನಿ ಸ್ಪಂದನಾ ಅವರ ಅನಿರೀಕ್ಷಿತ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅಂತ್ಯಕ್ರಿಯೆ ಮತ್ತು ಅಂತಿಮ ವಿಧಿವಿಧಾನಗಳನ್ನು ಪೂರೈಸಲಾಗಿದೆ.
Kannada Actor Vijaya Raghavendra Wife Spandana Funeral Update