ಆವತ್ತು ಮಂಚಕ್ಕೆ ಕರೆದಾಗ ಒಪ್ಪಿದ್ರೆ ಇವತ್ತು ಟಾಪ್ ನಟಿ ಆಗ್ತಾಯಿದ್ದೆ, ಅವಕಾಶಕ್ಕಾಗಿ ಮಂಚ ಹತ್ಬೇಕಿತ್ತು ಎಂದ ನಟಿ ಆಶಿತಾ

ಕೆಲದಿನಗಳ ಹಿಂದಷ್ಟೇ ಸಂದರ್ಶನ ಒಂದರಲ್ಲಿ ಮಾತನಾಡಿದ ನಟಿ ಆಶಿತಾ ನೇರವಾಗಿಯೇ ಸಿನಿಮಾ ರಂಗದ ಕರಾಳತೆಯನ್ನು ತೆರೆದಿಟ್ಟಿದ್ದಾರೆ.

ಸ್ನೇಹಿತರೇ, ಕಾಸ್ಟಿಂಗ್ ಕೌಚ್ ಸಮಸ್ಯೆ ಎಂಬುದು ಕೇವಲ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ (Kannada Cinema Industry) ಮಾತ್ರವಿಲ್ಲ, ಬದಲಿಗೆ ಬಾಲಿವುಡ್, ಹಾಲಿವುಡ್ ನಂತಹ ದೊಡ್ಡ ಮಟ್ಟದ ಹೆಸರು ಮಾಡಿರುವ ಸಿನಿಮಾ ಇಂಡಸ್ಟ್ರಿಯಲ್ಲಿಯೂ ನಟಿಯರು ಈ ರೀತಿ ಮಾನಸಿಕ ದೈಹಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ.

ಈ ಕುರಿತು ಕೆಲದಿನಗಳ ಹಿಂದಷ್ಟೇ ಸಂದರ್ಶನ ಒಂದರಲ್ಲಿ ಮಾತನಾಡಿದ ನಟಿ ಆಶಿತಾ (Actress Ashita) ನೇರವಾಗಿಯೇ ಸಿನಿಮಾ ರಂಗದ ಕರಾಳತೆಯನ್ನು ತೆರೆದಿಟ್ಟಿದ್ದಾರೆ.

ಹೌದು ಗೆಳೆಯರೇ ಅವಕಾಶಗಳಿಗಾಗಿ ಮಂಚ ಹತ್ತಬೇಕಿತ್ತು ಇಲ್ಲ ಅಂದ್ರೆ ಸೆಟ್ನಲ್ಲಿ ಟಾರ್ಚರ್ ಕೊಡ್ತಾ ಇದ್ರು ಎನ್ನುವ ಮೂಲಕ ನಟಿ ಆಶಿತಾ ಸಿನಿಮಾ ಬದುಕಿನ ಕರಾಳ ಮುಖ ಪರಿಚಯವನ್ನು ಮಾಡಿಸಿದ್ದಾರೆ.

Kannada Actress Ashita Comments on Casting Couch Goes Viral

ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ಜೈಲರ್ ಸಿನಿಮಾ, ಎರಡೇ ದಿನದಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?

ಹೌದು ಗೆಳೆಯರೇ ಸಿನಿಮಾ ಕ್ಷೇತ್ರದಲ್ಲಿ ಯಾವುದೇ ಇನ್ಫ್ಲುಯೆನ್ಸ್ ಇಲ್ಲದೆ ಒಂದು ಹೆಣ್ಣು ಮಗಳು ಗುರುತಿಸಬೇಕೆಂದರೆ ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.

ಹಿಂದೆ ಸಾಕಷ್ಟು ನಟಿಯರು ಕಾಸ್ಟಿಂಗ್ ಸಮಸ್ಯೆಯ ಕುರಿತು ದನಿಯೆತ್ತಿದ್ದರು. ಇದೀಗ ನಟಿ ಆಶಿತಾ ” ನಾನು ಸಿನಿಮಾ ಇಂಡಸ್ಟ್ರಿಗೆ ಹೊಸದಾಗಿ ಬಂದಾಗ ಎಲ್ಲವೂ ಸುಗಮವಾಗಿತ್ತು.‌ ಯಾವುದೇ ಕಿರಿ ಕಿರಿಗಳಿರಲಿಲ್ಲ ನಮ್ಮ ಪಾಡಿಗೆ ನಾವು ಕೆಲಸ ಮಾಡಿಕೊಂಡು ಹೋಗುತ್ತಿದ್ದೆವು. ಯಾವಾಗ ನಾನು ಸ್ವಲ್ಪ ನೇಮ್ ಮಾಡಿಕೊಂಡೆನೋ ಇಂತ ಕೆಲವು ಕೆಟ್ಟ ಆಫರ್ ಗಳು ನನಗೆ ಬರಲಾರಂಭವಾಯಿತು.

ಸಿನಿಮಾ ಇಂಡಸ್ಟ್ರಿಗೆ ಯಾವಾಗ ಉದ್ಯಮೀಗಳು ಹಾಗೂ ರಾಜಕಾರಣಿಗಳು ನಿರ್ಮಾಪಕ ರೂಪದಲ್ಲಿ ಬರಲು ಶುರು ಮಾಡಿದರೋ, ಆ ಸಂದರ್ಭದಲ್ಲಿ ಎಲ್ಲಾ ನಟಿಯರು ಕೂಡ ಅವರ ವೈಯಕ್ತಿಕ ಆಸೆಗಳನ್ನು ಈಡೇರಿಸಿದರೆ ಮಾತ್ರ ಸಿನಿಮಾದಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತಿತ್ತು.

ಇಲ್ಲವಾದರೆ ಶೂಟಿಂಗ್ ಸೆಟ್ಟಿನಲ್ಲಿ ಹಿಂಸಿಸುತ್ತಿದ್ದರು. ಸರಿಯಾದ ಶಾಟ್ ಬಂದರೂ ಕೂಡ ರಿಟೆಕ್ ರಿಟೆಕ್ ಎಂದು ಇಂಡೈರೆಕ್ಟ್ ಆಗಿ ಟಾರ್ಚರ್ ಮಾಡುತ್ತಿದ್ದರು.

Jaya Prada : ಖ್ಯಾತ ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ

ಬಹುಶಃ ನಾನು ಅವರ ಆಫರ್ಗಳಿಗೆ ಒಪ್ಪಿ ಮಂಚ ಅತ್ತಿದ್ದರೆ ಇಂದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಪ್ ನಟಿಯಾಗಿ ಇರುತ್ತಿದ್ದೆ. ಆದರೆ ನಾನು ಆ ಕ್ಯಾಟಗರಿಯ ಹೆಣ್ಣುಮಗಳಲ್ಲ” ಎನ್ನುವ ಮೂಲಕ ಸಿನಿ ಬದುಕಿನ ಮತ್ತೊಂದು ಮುಖವನ್ನು ತೆರೆದಿಟ್ಟಿದ್ದಾರೆ. ಕೆಲ ತಿಂಗಳುಗಳ ಹಿಂದೆ ತಾನು ಸಿನಿಮಾ ರಂಗದ ಕರಾಳ ಮುಖ ಬಿಚ್ಚಿಟ್ಟು, ತಾನು ಆ ವರ್ಗದ ಹೆಣ್ಣಲ್ಲ ಎಂದಿದ್ದರು.

ಆಗ ನಟಿ ಆಶಿತಾ ನೀಡಿದ ಹೇಳಿಕೆಯಿಂದ ಸಿನಿ ರಂಗವೇ ದಂಗಾಗಿಹೋಗಿತ್ತು, ಆದರೆ ಆಶಿತಾ ಧೈರ್ಯವನ್ನು ಮೆಚ್ಚಲೇ ಬೇಕು. ಅವಕಾಶಕ್ಕಾಗಿ ಅಥವಾ ಹೆಣ್ಣನ್ನು ಯಾವ ರೀತಿ ಬಳಸಿಕೊಳ್ಳಲು ನೋಡುತ್ತಾರೆ ಎನ್ನುವುದ ಬಗ್ಗೆ ಬೆಳಕು ಚೆಲ್ಲಿದ್ದರು. ಇನ್ನು ಸಿನಿ ರಂಗಕ್ಕೆ ಬರಬೇಕು ಅಂದುಕೊಳ್ಳುವ ಹೆಣ್ಣು ಮಕ್ಕಳಿಗೆ ಆಶಿತಾ ಒಂದು ರೀತಿಯ ಕಿವಿಮಾತು ಹೇಳಿರುವಂತೆಯೇ ಆಗಿದೆ. ಏನೇ ಆಗಲಿ ಇಂತಹ ಹೀನಾಯ ಆಲೋಚನೆ ನಿಲ್ಲಬೇಕು. ಕಲಾವಿದರಿಗೆ ಗೌರವ ಕೊಡಬೇಕು, ಅದರಲ್ಲೂ ಹೆಣ್ಣಿಗೆ ನಾವೇ ಭದ್ರೆತೆಯಾಗಬೇಕು

Kannada Actress Ashita Comments on Casting Couch Goes Viral

Related Stories