ಯಾವುದೇ ಡೈಲಾಗ್ ಕೊಟ್ಟರು ಪಟಪಟ ಅಂತ ಹೇಳುತ್ತಿದ್ದ ನಟಿ ಮಂಜುಳಾ ಓದಿದ್ದು ಎಷ್ಟನೇ ತರಗತಿ ಗೊತ್ತೇ?

ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವಾಗಲೇ ವಿದ್ಯಾಭ್ಯಾಸದತ್ತ ಗಮನಹರಿಸಿದ ಮಂಜುಳಾ ಅವರು ಜೀವನ ವಿಜ್ಞಾನದಲ್ಲಿ ತಮ್ಮ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದರು.

ಕನ್ನಡ ಸಿನಿಮಾ ರಂಗದ (Kannada Film Industry) ಬಜಾರಿ, ಬಾಯಿ ಬಡಕಿ, ಸ್ವಾಭಿಮಾನಿ ಹೆಣ್ಣು ಎಂಬೆಲ್ಲ ಬಿರುದು ಪಡೆದು ಪ್ರಸಿದ್ಧ ನಟಿಯಾಗಿ ಸಾಲು ಸಾಲು ಸಿನಿಮಾಗಳ ಅವಕಾಶವನ್ನು ಗಿಟ್ಟಿಸಿಕೊಂಡು ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸಿದ ಮಂಜುಳಾ (Actress Manjula) ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯ ಹೇಳಿ?

ಡಾಕ್ಟರ್ ರಾಜಕುಮಾರ್ ಅವರ ಸಂಪತ್ತಿಗೆ ಸವಾಲ್ ಸಿನಿಮಾದ ದುರ್ಗಿ ಪಾತ್ರದ ಮೂಲಕ ಮನೆಮಾತಾದಂತಹ ಈ ನಟಿ ಐವತ್ನಾಲ್ಕು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ ಉತ್ತುಂಗದ ಶಿಖರದಲ್ಲಿದ್ದವರು.

ಆದರೆ ಮನೆಯಲ್ಲಿ ಯಾರೂ ಇಲ್ಲದಂತಹ ಸಮಯದಲ್ಲಿ ಮಾಡಿಕೊಂಡಂತಹ ಎಡವಟ್ಟಿನಿಂದಾಗಿ ವಿಧಿ ನಟಿ ಮಂಜುಳ ಅವರ ಬಾಳಲ್ಲಿ ವಿಕೃತಿಯನ್ನು ಮೆರೆದು ಅತಿ ಚಿಕ್ಕ ವಯಸ್ಸಿಗೆ ಅವರನ್ನು ಬಾರದ ಲೋಕಕ್ಕೆ ಪಯಣ ಬೆಳೆಸುವಂತೆ ಮಾಡಿಬಿಡ್ತು.

ಯಾವುದೇ ಡೈಲಾಗ್ ಕೊಟ್ಟರು ಪಟಪಟ ಅಂತ ಹೇಳುತ್ತಿದ್ದ ನಟಿ ಮಂಜುಳಾ ಓದಿದ್ದು ಎಷ್ಟನೇ ತರಗತಿ ಗೊತ್ತೇ? - Kannada News

ಹೀಗೆ ಬದುಕಿದ್ದಷ್ಟು ದಿನ ಸಿನಿಮಾಗಳಲ್ಲಿ ಅಭಿನಯಿಸುತ್ತಾ ಸಿನಿ ಪ್ರೇಕ್ಷಕರನ್ನು ರಂಜಿಸಿದ ಮಂಜುಳಾ ಯಾವುದೇ ಡೈಲಾಗ್ ಕೊಟ್ಟರು ಪಟಪಟ ಅಂತ ಹೇಳುತ್ತಾ ನಿರ್ದೇಶಕರಿಂದ ಸೈ ಎನಿಸಿಕೊಳ್ಳುತ್ತಿದ್ದಂತಹ ನಟಿ.

ಹೌದು ಸ್ನೇಹಿತರೆ, ಅತಿ ಚಿಕ್ಕ ವಯಸ್ಸಿಗೆ ಮನೆ ಕಟ್ಟಿ ನೋಡು ಎಂಬ ಸಿನಿಮಾದ ಮೂಲಕ ಬಾಲ ನಟಿಯಾಗಿ ಬೆಳ್ಳಿತರೆಗೆ ಪ್ರವೇಶ ಮಾಡಿದ ಮಂಜುಳಾ ಅವರು ನ್ಯಾಷನಲ್ ಕಾಲೇಜಿನಲ್ಲಿ ಬಿ ಎಸ್ ಸಿ (National Collage) ಓದಿದ ನಂತರ ಯಾರ ಸಾಕ್ಷಿ ಎಂಬ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕ ನಟಿಯಾಗಿ ಆಯ್ಕೆಯಾದರು.

Kannada Actress Manjula Education Backgroundಅಲ್ಲಿಂದ ಶುರುವಾದ ಪ್ರಣಯ ಜೋಡಿ ಶ್ರೀನಾಥ್ ಹಾಗೂ ಮಂಜುಳಾ ಅವರ ಜಿಗಲ್ ಬಂದಿ ಕನ್ನಡ ಸಿನಿಮಾ ರಂಗಕ್ಕೆ (Kannada Cinema) ಅಗಾಧವಾದ ಕೊಡುಗೆಯನ್ನು ನೀಡಿತ್ತು.

ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವಾಗಲೇ ವಿದ್ಯಾಭ್ಯಾಸದತ್ತ (Education) ಗಮನಹರಿಸಿದ ಮಂಜುಳಾ ಅವರು ಜೀವನ ವಿಜ್ಞಾನದಲ್ಲಿ ತಮ್ಮ ಬ್ಯಾಚುಲರ್ ಆಫ್ ಸೈನ್ಸ್ (Bachelor of Science) ಪದವಿಯನ್ನು ಪಡೆದರು. ಆನಂತರ ಸಿನಿಮಾ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಮಂಜುಳ ಅವರು ಪೀಕ್ನಲ್ಲಿ ಇರುವಾಗಲೇ ನಿರ್ಮಾಪಕ ಅಮೃತಂ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡರು.

ಹೌದು ಗೆಳೆಯರೇ ಹುಡುಗಾಟದ ಹುಡುಗಿ ಎಂಬ ಸಿನಿಮಾದ ಮೂಲಕ ಅಮೃತ ಮಂಜುಳ ಅವರಿಗೆ ಪರಿಚಯವಾಗುತ್ತಾರೆ. ಇವರಿಬ್ಬರ ನಡುವೆ ಆ ಸಮಯದಲ್ಲಿ ಶುರುವಾದ ಪ್ರೇಮ ಮದುವೆಯ ಹಂತಕ್ಕೆ ತಲುಪಿ ಕನ್ನಡ ಸಿನಿಮಾ ರಂಗದ ಸಾಕ್ಷಿಯಾಗಿ ಅಮೃತಂ ಮತ್ತು ಮಂಜುಳಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಹಲವಾರು ವರ್ಷಗಳ ಕಾಲ ಸುಖವಾಗಿ ಸಾಂತರಿಕ ಜೀವನ ನಡೆಸಿದ ಈ ದಂಪತಿಗಳಿಗೆ ಅಭಿಷೇಕ್ ಎಂಬ ಗಂಡು ಮಗ ಜನಿಸಿದ ನಂತರ ಒಂದು ಹೆಣ್ಣು ಮಗುವನ್ನು ದತ್ತು ಪಡೆದು ಅದಕ್ಕೆ ಅಭಿನಯ ಎಂಬ ಹೆಸರಿಟ್ಟರು.

ಹೀಗೆ ಜೀವನದಲ್ಲಿ ಯಾವುದೇ ಕೊರತೆ ಇಲ್ಲದೆ ಬಹಳ ಸುಖವಾಗಿದ್ದ ಮಂಜುಳಾ ಅವರ ಬದುಕಿನ ಮೇಲೆ ಅದ್ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ ಆಕಸ್ಮಿಕವಾಗಿ ಬೆಂಕಿ ಅನಾಹುತಕ್ಕೆ ಮಂಜುಳಾ ತಮ್ಮ 35ನೇ ವಯಸ್ಸಿಗೆ ಇಹಲೋಕ ತ್ಯಜಿಸಿಬಿಟ್ಟರು.

Kannada Actress Manjula Education Background

Follow us On

FaceBook Google News

Kannada Actress Manjula Education Background