ಶ್ರೀಲೀಲಾ, ರಶ್ಮಿಕಾಗೆ ಶುರುವಾಯಿತು ಡವ-ಡವ! ತೆಲುಗಿಗೆ ಕಾಂತಾರ ಬೆಡಗಿ ಸಪ್ತಮಿ ಗೌಡ ಎಂಟ್ರಿ
Actress Sapthami Gowda : ಈಗಾಗಲೇ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ತೆಲುಗಿಗೆ ಹಾರಿ ತಮ್ಮ ಬದುಕನ್ನು ಕಟ್ಟಿಕೊಂಡಿರುವ ರಶ್ಮಿಕಾ ಮಂದಣ್ಣ, ಶ್ರೀಲೀಲಾ, ನಭಾ, ನೇಹಾ ಶೆಟ್ಟಿ ಅವರಂತೆ ಸಪ್ತಮಿ ಗೌಡ ಕೂಡ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡಲಿದ್ದಾರಾ?
Actress Sapthami Gowda : ಸ್ನೇಹಿತರೆ, ಬೇರೆ ಭಾಷೆಯ ಸಿನಿಮಾ ಇಂಡಸ್ಟ್ರಿಗಳಲ್ಲಿ ನಮ್ಮ ಕನ್ನಡದ ನಟಿಯರ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ ಹೆಸರುವಾಸಿಯಾದಂತಹ ನಟಿ ರಶ್ಮಿಕಾ ಮಂದಣ್ಣ (Actress Rashmika Mandanna) ಇಂದು ಟಾಲಿವುಡ್ (Tollywood), ಕಾಲಿವುಡ್ (Kollywood) ಹಾಗೂ ಬಾಲಿವುಡ್ ಗೆ (Bollywood) ಬೇಕಿರುವಂತಹ ಬಹು ಬೇಡಿಕೆಯ ನಟಿ.
ಅದರಂತೆ ನಟ ವಿರಾಟ್ ಅವರೊಂದಿಗೆ ಕಿಸ್ ಸಿನಿಮಾದ ಮೂಲಕ ತಮ್ಮ ಬಣ್ಣದ ಲೋಕದ ಪಯಣವನ್ನು ಪ್ರಾರಂಭಿಸಿದಂತಹ ಶ್ರೀಲೀಲಾ (Actress Sreeleela) ಪೆಳ್ಳಿ ಸಂದಡಿ ಎಂಬ ಚಿತ್ರದ ಮೂಲಕ ತೆಲುಗು ಸಿನಿಮಾ (Telugu Cinema) ಇಂಡಸ್ಟ್ರಿಗೆ ಹಾರಿ ಇಂದು ಅಲ್ಲೇ ನೆಲೆ ಕಂಡುಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾಗೆ ಕಾಲಿಟ್ಟ ನಯನತಾರಾ, ಒಂದೇ ಒಂದು ಪೋಸ್ಟಿಗೆ 1.5 ಮಿಲಿಯನ್ ಫಾಲೋವರ್ಸ್!
ಇನ್ನು ಪಾಪ್‌ಕಾರ್ನ್ ಮಂಕಿ ಟೈಗರ್ ಹಾಗೂ ಕಾಂತಾರದಂತಹ ಯಶಸ್ವಿ ಸಿನಿಮಾಗಳ ಮೂಲಕ ಮನೆಮಾತಾದಂತಹ ಲೀಲಾ ಅಲಿಯಾಸ್ ಸಪ್ತಮಿ ಗೌಡ (Actress Sapthami Gowda) ಕೂಡ ಟಾಲಿವುಡ್ ಸಿನಿಮಾಗೆ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದು, ಇದು ರಶ್ಮಿಕಾ ಹಾಗೂ ಶ್ರೀಲೀಲಾ ಅವರ ಸಿನಿ ಕರಿಯರ್ ಮೇಲೆ ನೇರವಾದ ಪ್ರಭಾವ ಬೀರಲಿದೆ ಎಂಬ ಸುದ್ದಿ ಟಾಲಿವುಡ್ ಗಲ್ಲಿ ಗಲ್ಲಿಯಲ್ಲಿ ಹರಿದಾಡುತ್ತಿದೆ.
ಹೌದು ಗೆಳೆಯರೇ ಕೆಲವು ದಿನಗಳ ಹಿಂದಷ್ಟೇ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ನಟಿ ಶ್ರೀಲೀಲಾ ಹಾಗೂ ರಶ್ಮಿಕಾ ಮಂದಣ್ಣ ನಡುವಿನ ಪೈಪೋಟಿ ಬಹುದೊಡ್ಡ ಮಟ್ಟದಲ್ಲಿ ಸುದ್ದಿಗೊಳಗಾಗಿತ್ತು, ರಶ್ಮಿಕಾ ಮಂದಣ್ಣ ಅಭಿನಯಿಸಬೇಕಿದ್ದಂತಹ ಸಿನಿಮಾದಲ್ಲಿ ಶ್ರೀಲೀಲಾ ಚಾನ್ಸ್ ಗಿಟ್ಟಿಸಿಕೊಂಡು ರಶ್ಮಿಕಾರಿಗೆ ಟಕ್ಕರ್ ಕೊಡುವ ರೀತಿ ತಮ್ಮ ನಟನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಬಹುದೊಡ್ಡ ಚರ್ಚೆಗೆ ಗ್ರಾಸವಾಗಿತ್ತು.
ಆದರೆ ಈಗ ತೆಲುಗಿಗೆ ಮತ್ತೋರ್ವ ನಟಿಯ ಎಂಟ್ರಿ ಈ ಇಬ್ಬರಿಗೂ ಟಕ್ಕರ್ ಕೊಡಲಿರುವುದು ಬಹುತೇಕ ಪಕ್ಕ ಎನ್ನುವಂತಾಗಿದೆ. ಹೌದು ಸ್ನೇಹಿತರೆ ಕಾಂತಾರ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಹೊರಹೊಮ್ಮಿರುವಂತಹ ಸಪ್ತಮಿ ಗೌಡ ಅವರು ಕಾಳಿ, ಯುವ ಹಾಗೂ ಕಾಂತಾರ ಪಾರ್ಟ್ 2 ಚಿತ್ರಗಳ ಶೂಟಿಂಗ್ ಕೆಲಸದಲ್ಲಿ ತೊಡಗಿಕೊಂಡಿದ್ದು, ಇದರ ನಡುವೆ ತೆಲುಗಿನ ತಮ್ಮುಡು ಎಂಬ ಚಿತ್ರವನ್ನು ಒಪ್ಪಿಕೊಂಡಿರುವ ಮಾಹಿತಿಯನ್ನು ಅಧಿಕೃತವಾಗಿ ಹೊರಹಾಕಿದ್ದಾರೆ.
ತೆಲುಗಿನ ಪ್ರಖ್ಯಾತ ನಟ ನಿತಿನ್ (Actor Nithin) ಅವರೊಂದಿಗೆ ನಟಿ ಸಪ್ತಮಿ ಗೌಡ ಪ್ರಪ್ರಥಮ ತೆಲುಗು ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದು, ನಿರ್ದೇಶಕ ವೇಣು ಶ್ರೀರಾಮ್ ಅವರ ಆಕ್ಷನ್ ಕಟ್ನಲ್ಲಿ ತಯಾರಾಗುತ್ತಿರುವ ಈ ಸಿನಿಮಾಗೆ ದಿಲ್ ರಾಜು ಹಣ ಹೂಡಿಕೆ ಮಾಡುತ್ತಿದ್ದಾರೆ.
ಹೌದು ಗೆಳೆಯರೇ ಕಾಂತಾರ ಸಿನಿಮಾ ತೆಲುಗಿಗೆ ಡಬ್ಬಾಗಿ ನಟಿ ಸಪ್ತಮಿ ಗೌಡ ತೆಲುಗು ಸಿನಿ ರಸಿಕರ ಮನಸ್ಸನ್ನು ಗೆದ್ದಿದ್ದರು, ಹೀಗಾಗಿ ನಿತಿನ್ ಅವರೊಂದಿಗೆ ಅಭಿನಯಿಸುವಂತಹ ಅವಕಾಶವನ್ನು ಗಿಟ್ಟಿಸಿಕೊಂಡಿದ್ದು, ಈಗಾಗಲೇ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ತೆಲುಗಿಗೆ ಹಾರಿ ತಮ್ಮ ಬದುಕನ್ನು ಕಟ್ಟಿಕೊಂಡಿರುವ ರಶ್ಮಿಕಾ ಮಂದಣ್ಣ, ಶ್ರೀಲೀಲಾ, ನಭಾ, ನೇಹಾ ಶೆಟ್ಟಿ ಅವರಂತೆ ಸಪ್ತಮಿ ಗೌಡ ಕೂಡ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡಲಿದ್ದಾರಾ? ಎಂಬುದನ್ನು ಕಾದು ನೋಡಬೇಕಿದೆ.
Kannada Actress Sapthami Gowda Makes Tollywood Debut With Nithin Thammudu Movie