ಅದ್ಭುತ ಪ್ರತಿಭೆಯ ಯುವ ಗಾಯಕ ಕೆಕೆ ಅವರ ಹಠಾತ್ ನಿಧನ ದುರಂತ : ಮಮತಾ ಬ್ಯಾನರ್ಜಿ

Story Highlights

ಕೋಲ್ಕತ್ತಾದಲ್ಲಿ ಹಠಾತ್ ನಿಧನರಾದ ಜನಪ್ರಿಯ ಗಾಯಕ ಕೆಕೆ ಪಾರ್ಥಿವ ಶರೀರವನ್ನು ಸರ್ಕಾರಿ ವಿಧಿವಿಧಾನಗಳಿಗಾಗಿ ಎಸ್‌ಎಸ್‌ಕೆಎಂ ಆಸ್ಪತ್ರೆಯಿಂದ ರವೀಂದ್ರ ಸದನ್‌ಗೆ ಸ್ಥಳಾಂತರಿಸಲಾಯಿತು.

ಕೋಲ್ಕತ್ತಾದಲ್ಲಿ ಹಠಾತ್ ನಿಧನರಾದ ಜನಪ್ರಿಯ ಗಾಯಕ ಕೆಕೆ (Krishnakumar kunnath) ಪಾರ್ಥಿವ ಶರೀರವನ್ನು ಸರ್ಕಾರಿ ವಿಧಿವಿಧಾನಗಳಿಗಾಗಿ ಎಸ್‌ಎಸ್‌ಕೆಎಂ ಆಸ್ಪತ್ರೆಯಿಂದ ರವೀಂದ್ರ ಸದನ್‌ಗೆ ಸ್ಥಳಾಂತರಿಸಲಾಯಿತು. ರವೀಂದ್ರ ಸದನದಲ್ಲಿ ಕೆ.ಕೆ.ಪಾರ್ಥೀವ ಶರೀರಕ್ಕೆ ಸೇನಾ ಲಾಂಛನದೊಂದಿಗೆ ಗೌರವ ಸಲ್ಲಿಸಲಾಯಿತು. ಯೋಧರು ಗಾಳಿಯತ್ತ ಗುಂಡು ಹಾರಿಸಿದರು.

‘ಅದ್ಭುತ ಪ್ರತಿಭೆಯ ಯುವ ಗಾಯಕ ಕೆ.ಕೆ ಅವರ ಹಠಾತ್ ನಿಧನ ದುರಂತ. ನಾನು ಅವರ ಬಗ್ಗೆ ಏನು ಹೇಳಬಲ್ಲೆ? ಎಂದು ಸಿಎಂ ಮಮತಾ ಬ್ಯಾನರ್ಜಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೆಕೆ ಹಠಾತ್ ಸಾವಿನ ಕುರಿತು ಬಾಲಿವುಡ್ ಸಂಗೀತ ಸಂಯೋಜಕ ಇಸ್ಮಾಯಿಲ್ ದರ್ಬಾರ್ ಮಾತನಾಡಿ ಇಂದು ನನ್ನ ಹುಟ್ಟುಹಬ್ಬ… ಇಂದು ಕೆಕೆಯಂತಹ ಉತ್ತಮ ಸ್ನೇಹಿತ ಮತ್ತು ಪ್ರತಿಭಾವಂತ ಗಾಯಕನನ್ನು ಕಳೆದುಕೊಂಡಿರುವುದು ನನ್ನನ್ನು ತುಂಬಾ ಖಿನ್ನನಾಗಿಸಿದೆ. ಕೆಕೆ ತುಂಬಾ ಒಳ್ಳೆಯ ಮನುಷ್ಯ. ಪ್ರಾಮಾಣಿಕ ವ್ಯಕ್ತಿ. ನನಗೆ ಸಾಕಷ್ಟು ಅವರ ನೆನಪುಗಳಿವೆ ಎಂದು ಹೇಳಿದ್ದಾರೆ.

ತೆಲುಗು, ತಮಿಳು, ಹಿಂದಿ ಹೀಗೆ ಹಲವು ಭಾಷೆಗಳಲ್ಲಿ ಹಲವು ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದ ಕೆಕೆ ಅವರ ಹಠಾತ್ ನಿಧನಕ್ಕೆ ಸಿನಿಮಾ ಮತ್ತು ಸಂಗೀತ ಲೋಕವೇ ಕಂಬನಿ ಮಿಡಿದಿದೆ. ಕೋಲ್ಕತ್ತಾದಲ್ಲಿ ಮಂಗಳವಾರ ರಾತ್ರಿ ನಡೆದ ಸಂಗೀತ ಕಛೇರಿಯಲ್ಲಿ 53 ವರ್ಷದ ಕೆ.ಕೆ. ಬಳಿಕ ಹೋಟೆಲ್ ಕೊಠಡಿಯಲ್ಲಿ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ, ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Gun Salute To Singer Kk At Rabindra Sadan In Kolkata

Related Stories