ಜನಪ್ರಿಯ ಗಾಯಕ ಕೆಕೆ ನೆನೆದು ಮೆಗಾಸ್ಟಾರ್ ಚಿರಂಜೀವಿ ಟ್ವೀಟ್
ಜನಪ್ರಿಯ ಗಾಯಕ ಕೆಕೆ (Krishnakumar Kunnath) ಅವರ ಹಠಾತ್ ನಿಧನದಿಂದ ಸಿನಿಮಾ ಮತ್ತು ಸಂಗೀತ ಲೋಕ ಆಘಾತಕ್ಕೊಳಗಾಗಿದೆ.
ಜನಪ್ರಿಯ ಗಾಯಕ ಕೆಕೆ (Krishnakumar Kunnath) ಅವರ ಹಠಾತ್ ನಿಧನದಿಂದ ಸಿನಿಮಾ ಮತ್ತು ಸಂಗೀತ ಲೋಕ ಆಘಾತಕ್ಕೊಳಗಾಗಿದೆ.
ಮಂಗಳವಾರ ರಾತ್ರಿ ಕೋಲ್ಕತ್ತಾದಲ್ಲಿ ನಡೆದ ಸಂಗೀತ ಕಛೇರಿಯಲ್ಲಿ ಭಾಗವಹಿಸಿದ್ದ 53 ವರ್ಷದ ಕೆಕೆ ಅವರನ್ನು ಹೊಟೇಲ್ ಕೊಠಡಿಯಲ್ಲಿ ಕುಸಿದು ಬಿದ್ದ ನಂತರ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಸಿಎಂಆರ್ಐ ವೈದ್ಯರು ತಿಳಿಸಿದ್ದಾರೆ. ಕೆಕೆ ಹಠಾತ್ ನಿಧನಕ್ಕೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಚಿರಂಜೀವಿ ಟ್ವೀಟ್ ಮಾಡಿದ್ದಾರೆ. ಕೇಕೆ ಅವರು ತಮ್ಮ ವೃತ್ತಿಜೀವನದಲ್ಲಿ ಬ್ಲಾಕ್‌ಬಸ್ಟರ್ ಹಿಟ್ ‘ಇಂದ್ರ’ ದಿಂದ ಸಾರ್ವಕಾಲಿಕ ನೆಚ್ಚಿನ ಹಾಡು ‘ದಾಯಿ ದಾಯಿ ದಾಮ್ಮ’ ಹಾಡಿದರು. ಈ ಹಾಡು ಚಿರು ಅವರ ವೃತ್ತಿಜೀವನದ ಅತ್ಯುತ್ತಮ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅದನ್ನೇ ನೆನಪಿಸಿಕೊಂಡು ಚಿರು ಸಂತಾಪ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.
ಖುಷಿ, ಬಾಲು, ಜಲ್ಸಾ, ಇಂದ್ರ, ನೇನುನ್ನಾನು, ಸಂತೋಷಂ, ಗುಡುಂಬಾ ಶಂಕರ್, ಸೈನಿಕುಡು ಮುಂತಾದ ತೆಲುಗು ಚಿತ್ರಗಳಲ್ಲಿ ಕೇಕೆ ಸಾರ್ವಕಾಲಿಕ ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ.
Heartbroken at the shocking demise of KK. Gone too soon! A fabulous singer and a great soul.He sang ‘Daayi Daayi Daama’ from ‘Indra’ for me. My heartfelt condolences to his family & near and dear ones. May his soul rest in peace! #RIPKK
— Chiranjeevi Konidela (@KChiruTweets) June 1, 2022
Heartbroken At The Shocking Demise Of Kk Tweeted Chiranjeevi
Follow us On
Google News |