ಕೆಜಿಎಫ್2 ಸಿನಿಮಾ ನೋಡಿ ಪ್ಯಾಕೆಟ್ ಸಿಗರೇಟ್ ಸೇದಿದ ಬಾಲಕ, ಆಸ್ಪತ್ರೆ ಪಾಲು
ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಕೆಜಿಎಫ್2 ಸಿನಿಮಾ ನೋಡಿದ 15ರ ಹರೆಯದ ಬಾಲಕ ತಕ್ಷಣ ಹೀರೋ ಕ್ಯಾರೆಕ್ಟರ್ ‘ರಾಕಿ ಭಾಯ್’ನನ್ನು ರೋಲ್ ಮಾಡೆಲ್ ಆಗಿ ತೆಗೆದುಕೊಂಡು, ನಾಯಕನ ಜಾಗದಲ್ಲಿ ತನ್ನನ್ನು ಕಲ್ಪಿಸಿಕೊಂಡು ಸಿಗರೇಟ್ ಪ್ಯಾಕೆಟ್ (ಒಂದರ ಹಿಂದೆ ಒಂದರಂತೆ) ಸೇದಿದ್ದಾನೆ.
ಹೊಸ ತಲೆಮಾರಿನ ಸಿನಿಮಾಗಳು ಮಕ್ಕಳ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತಿವೆ ಎಂಬುದನ್ನು ತೋರಿಸುವ ಘಟನೆ ಇದು. ಸಿನಿಮಾ ಹೀರೋಗಳ ಜಾಗದಲ್ಲಿ ತಮ್ಮನ್ನು ಬಿಂಬಿಸಿಕೊಂಡು ಮಕ್ಕಳು ಕೇವಲ ಸಿನಿಮಾದ ದುಶ್ಚಟ ಮಾತ್ರ ಆಯ್ಕೆ ಮಾಡಿಕೊಳ್ಳುವುದು ದುರಾದೃಷ್ಟ.
ಸಿನಿಮಾ ನೋಡಿದ 15ರ ಹರೆಯದ ಹುಡುಗನೊಬ್ಬ ತನ್ನನ್ನು ನಾಯಕ ಎಂದು ಬಿಂಬಿಸಿಕೊಂಡು ಏಕಾಏಕಿ ಪ್ಯಾಕೆಟ್ ಸಿಗರೇಟ್ ಸೇದಿ ಕೊನೆಗೆ ಆಸ್ಪತ್ರೆ ಸೇರಿರುವ ಘಟನೆ ಹೈದರಾಬಾದ್ ನಲ್ಲಿ ಬೆಳಕಿಗೆ ಬಂದಿದೆ.
ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಕೆಜಿಎಫ್2 ಸಿನಿಮಾ ನೋಡಿದ 15ರ ಹರೆಯದ ಬಾಲಕ ತಕ್ಷಣ ಹೀರೋ ಕ್ಯಾರೆಕ್ಟರ್ ‘ರಾಕಿ ಭಾಯ್’ನನ್ನು ರೋಲ್ ಮಾಡೆಲ್ ಆಗಿ ತೆಗೆದುಕೊಂಡು, ನಾಯಕನ ಜಾಗದಲ್ಲಿ ತನ್ನನ್ನು ಕಲ್ಪಿಸಿಕೊಂಡು ಸಿಗರೇಟ್ ಪ್ಯಾಕೆಟ್ (ಒಂದರ ಹಿಂದೆ ಒಂದರಂತೆ) ಸೇದಿದ್ದಾನೆ.
ಕೊನೆಗೆ ನೋಯುತ್ತಿರುವ ಗಂಟಲು ಮತ್ತು ನೋವು ಮತ್ತು ಕೆಮ್ಮಿನಿಂದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಡಲೇ ಬಾಲಕನ ಪೋಷಕರು ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಿದ ವೈದ್ಯರು ಯಾವುದೇ ಸಮಸ್ಯೆಯಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
‘ರಾಕಿ ಭಾಯಿ’ಯಂತಹ ಸಿನಿಮಾ ಪಾತ್ರಗಳು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಮಕ್ಕಳು ಸಮಾಜದ ಬಗ್ಗೆ ವಿಪರೀತ ಮನೋಭಾವ ತೋರುತ್ತಿದ್ದಾರೆ ಎಂದು ಬಾಲಕನಿಗೆ ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ. ಪಾಲಕರು ತಮ್ಮ ಮಕ್ಕಳ ಮೇಲೆ ಕಣ್ಣಿಟ್ಟು ಅವರಿಗೆ ಒಳ್ಳೆಯದು ಮತ್ತು ಕೆಟ್ಟದ್ದನ್ನು ವಿವರಿಸಬೇಕು ಎಂದು ವೈದ್ಯರು ಹೇಳುತ್ತಾರೆ.
ಆದರೆ ಅದೇ ಸಿನಿಮಾದಲ್ಲಿ ತಾಯಿಯ ಮೇಲೆ ಪ್ರೀತಿ, ಸಾಧಿಸಬೇಕೆಂಬ ಚಲ ಸೇರಿದಂತೆ ಅನೇಕ ವಿಷಯಗಳಿದ್ದರೂ ಈ ಯುವಕರು ಆ ಕಡೆ ಯಾಕೆ ಗಮನ ಕೊಡುವುದಿಲ್ಲ ?
Inspired By Kgfs Rocky Bhai 15 Year Old Smokes Full Pack Of Cigarettes
Follow Us on : Google News | Facebook | Twitter | YouTube