Ads By Google
Sandalwood News

ನಟ ಶಶಿಕುಮಾರ್ ಗೆ ಅಪಘಾತವಾದಾಗ ಅವರ ಪತ್ನಿ ಅನುಭವಿಸಿದಂತಹ ಸಂಕಟ ಅಷ್ಟಿಷ್ಟಲ್ಲ! ಅಷ್ಟಕ್ಕೂ ಅಂದು ಆಗಿದ್ದೇನು ಗೊತ್ತಾ?

Actor Shashikumar: ಅಲ್ಪಾವಧಿಯಲ್ಲಿ ಬಹು ದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಿಕೊಂಡಿದಂತಹ ನಟ ಶಶಿಕುಮಾರ್ ಅವರಿಗೆ ಬೆಂಗಳೂರಿನ ಶಿವಾನಂದ ಸರ್ಕಲ್ ನಲ್ಲಿ ಉಂಟಾದಂತಹ ರಸ್ತೆ ಅಪಘಾತ ಅವರ ಬದುಕನ್ನೇ ಬದಲಿಸಿ ಬಿಡ್ತು

Ads By Google

Actor Shashikumar: ಸ್ನೇಹಿತರೇ, ಭಾಗಶಹಃ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಆ ಚಿಗುರುಮೀಸೆ ಹುಡುಗನಲ್ಲಿ ನಾಯಕನಟನಾಗುವ ಎಲ್ಲ ಅರ್ಹತೆಗಳು ಇದ್ದವು. ಕೆಂಬಣ್ಣದಿಂದ ಹೊಳೆಯುತ್ತಿದ್ದ, ಬಹಳ ಸುಂದರವಾದ ಸುರದ್ರೂಪಿಯಾಗಿದ್ದ, ಡ್ಯಾನ್ಸ್, ನಟನೆ, ಸಂಭಾಷಣೆ ಮುಂತಾದ ಎಲ್ಲದರಲ್ಲೂ ಕೂಡ ಪರಿಣಿತಿಯನ್ನು ಸಾಧಿಸಿದ್ದ ಆತನಿಗೆ ಆರಂಭದಲ್ಲಿ ಎದುರಾದ ಎಲ್ಲಾ ಪಾತ್ರಗಳು ವಿಲನ್ ಶೇಡಿನದ್ದೇ.

ನಿಧಾನವಾಗಿ ತನ್ನ ಹಾವ-ಭಾವ ಎಲ್ಲವನ್ನೂ ಬದಲಿಸಿಕೊಂಡ ಆತನಿಗೆ ಬಹುಬೇಗನೆ ನಾಯಕನಟನಾಗುವ ಅವಕಾಶಗಳು ಒದಗಿ ಬರುತ್ತವೆ.

ನೋಡನೋಡುತ್ತಲೇ ಕನ್ನಡದ (Kannada Cinema Industry) ಬಹುಬೇಡಿಕೆಯ ನಾಯಕನಟನಾಗಿ ಹೊರಹೊಮ್ಮಿದ. ಹಲವಾರು ನಾಯಕಿಯರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಾ ಹೋದಾಗ 90ರ ದಶಕದ ಟಾಪ್ ಮೋಸ್ಟ್ ಹೀರೋ ಎಂಬ ಹೆಸರಿಗೆ ಪಾತ್ರರಾದ, ಕನ್ನಡದ ಬಿಗ್ಗೆಸ್ಟ್ ನಟ ಎಂಬ ಖ್ಯಾತಿಯ ಜೊತೆ ಪಕ್ಕದ ತೆಲುಗು ತಮಿಳು ಸಿನಿಮಾಗಳಲ್ಲಿ ಅವಕಾಶಗಳ ಮಹಾಪೂರವೇ ಹರಿದುಬಂತು. ವರ್ಷವೊಂದಕ್ಕೆ ಆತನ ಸುಮಾರು ಎಂಟು ಚಿತ್ರಗಳು ಥಿಯೇಟರಿಗೆ ಬರಲು ಆರಂಭಿಸಿದವು.

ಅವಕಾಶಗಳು ಸಿಕ್ಕರೂ ಡಾ.ರಾಜಕುಮಾರ್ ಅವರೊಂದಿಗೆ ರವಿಚಂದ್ರನ್ ನಟಿಸದಿರಲು ಕಾರಣವೇನು ಗೊತ್ತಾ?

ಕನ್ನಡ ಚಿತ್ರರಂಗದ ಬಲವರ್ಧನೆಗೆ ಒಬ್ಬ ಸುಪ್ರೀಂ ಹೀರೋ ದೊರಕಿದ ಎಂದು ಕನ್ನಡ ಸಿನಿ ರಂಗ (Kannada Film Industry) ಕೊಂಡಾಡುತ್ತಿದ್ದ ಆತನ ಕೆರಿಯರ್ ಉತ್ತುಂಗದಲ್ಲಿ ಇರಬೇಕಾದರೆ ಅನಿರೀಕ್ಷಿತವಾಗಿ ನಡೆದ ಆ ಒಂದು ದುರ್ಘಟನೆ ಬದುಕನ್ನೇ ಕದಡಿ ಹಾಕಿತ್ತು.

ಯಾರ ಶಾಪವೋ ಅಥವಾ ಯಾರ ದೃಷ್ಟಿ ಆತನ ಮೇಲೆ ಬಿತ್ತೋ ಗೊತ್ತಿಲ್ಲ. ಒಂದು ದಿನ ಯಾರು ಕೂಡ ಊಹೆ ಮಾಡಲಾಗದಂತಹ ರಸ್ತೆ ಅಪಘಾತಕ್ಕೆ ಸಿಲುಕಿದ್ದ, ಭೀಕರ ರಸ್ತೆ ದುರ್ಘಟನೆಯಿಂದ ಗಂಭೀರ ಗಾಯಕ್ಕೆ ತುತ್ತಾದ ಆತನ ಮುಖ ಛಿದ್ರ ಛಿದ್ರ ಗೊಂಡಿತ್ತು.

ಎಲ್ಲ ಭಾಷೆಗಳಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಸ್ಟಾರ್ ನಟನೊಂದಿಗೆ ರೋಮ್ಯಾನ್ಸ್ ! ನ್ಯಾಷನಲ್ ಕ್ರಶ್ ಜೊತೆಗಾರ ಆ ಸ್ಟಾರ್ ನಟ ಯಾರು?

ಆ ಏಟಿನ ಗಾಯಕ್ಕೆ ಆತ ಉಳಿದದ್ದೇ ಹೆಚ್ಚು ಎಂದು ಹೇಳಬಹುದು. ಆ ಒಂದು ಆಕ್ಸಿಡೆಂಟ್ ಸುಂದರ ಯುವಕನ ಮುಖವನ್ನು ಜಕಮ್ ಮಾಡಿತ್ತು. ಹತ್ತಾರು ವರ್ಷಗಳ ಕಾಲ ಯಾವ ಮುಖ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿ ಎಲ್ಲರ ಗಮನವನ್ನು ತನ್ನತ್ತ ಸೆಳೆದುಕೊಂಡಿತ್ತೋ ದುರ್ಘಟನೆಯ ನಂತರ ಆ ಮುಖ ತನ್ನ ಮೂಲ ರೂಪವನ್ನು ಕಳೆದುಕೊಂಡಿತು. ಉತ್ತುಂಗದ ಶಿಖರದಲ್ಲಿದ್ದ ಆ ನಟನ ಕೆರಿಯರ್ ಪಾತಾಳ ಕಚ್ಚಿತ್ತು.

ಹೌದು ಗೆಳೆಯರೇ ಅಲ್ಪಾವಧಿಯಲ್ಲಿ ಬಹು ದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಿಕೊಂಡಿದಂತಹ ನಟ ಶಶಿಕುಮಾರ್ (Actor Shashikumar) ಅವರಿಗೆ ಬೆಂಗಳೂರಿನ ಶಿವಾನಂದ ಸರ್ಕಲ್ ನಲ್ಲಿ ಉಂಟಾದಂತಹ ರಸ್ತೆ ಅಪಘಾತ ಅವರ ಬದುಕನ್ನೇ ಬದಲಿಸಿ ಬಿಡ್ತು ಎಂದರೆ ತಪ್ಪಾಗಲಾರದು.

ನಟ ಟೈಗರ್ ಪ್ರಭಾಕರ್ ಬಂದ ಅವಮಾನಗಳನ್ನು ಸಹಿಸಿ ಸ್ವತಃ ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದು ಏಕೆ ಗೊತ್ತೇ?

ಹೌದು ಎದುರುಗಡೆ ವೇಗವಾಗಿ ಬರುತ್ತಿದ್ದಂತಹ ಗಾಡಿಯಿಂದ ಅಪಘಾತವನ್ನು ತಪ್ಪಿಸುವ ಸಲುವಾಗಿ ಸ್ಟೇರಿಂಗ್ ಅನ್ನು ಪಕ್ಕಕ್ಕೆ ತಿರುಗಿಸಿದರು ಅಷ್ಟೇ ಬೃಹತ್ತಾದ ಗಾಡಿ ಗುದ್ದಿದ ರಬಸಕ್ಕೆ ಶಶಿಕುಮಾರ್ ಅವರ ಮುಖಕ್ಕೆ ತಗುಲಿ ಗಂಭೀರವಾಗಿ ಹಾನಿಗೊಳಗಾಗಿತ್ತ.

ದೇಹ ಪೂರ್ತಿ ರಕ್ತಸ್ರಾವ ಹಾಗೂ ಶಶಿಕುಮಾರ್ ಮೂರ್ಛೆ ಹೋದ ಸ್ಥಿತಿಯಲ್ಲಿದ್ದರು. ಹೀಗೆ ತಕ್ಷಣವೇ ಆಸ್ಪತ್ರೆಗೆ ಶಶಿಕುಮಾರ್ ಅವರನ್ನು ದಾಖಲು ಮಾಡಿ ಬರೋಬ್ಬರಿ 10 ಕೋಟಿ ಅಧಿಕ ಹಣವನ್ನು ಖರ್ಚು ಮಾಡಿ ಚಿಕಿತ್ಸೆ ಕೊಡಿಸಿ ಮುಖವನ್ನು ಪ್ಲಾಸ್ಟಿಕ್ ಸರ್ಜರಿ ಕೂಡ ಮಾಡಿಸಲಾಯಿತು.

ಅಂದು ನಟಿ ಲಕ್ಷ್ಮಿ ಅವರಿಗೆ ಹಿರಿಯ ನಟ ಅಶ್ವಥ್ ಬಾಸುಂಡೆ ಬರೋ ರೀತಿ ಹೊಡೆದಿದ್ದು ಯಾಕೆ? ಆಗ ಜೂಲಿ ಲಕ್ಷ್ಮಿ ಮಾಡಿದ್ದೇನು ಗೊತ್ತಾ?

ಆದರೆ ಈ ಒಂದು ಸಂದರ್ಭದಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಎಷ್ಟು ನೋವನ್ನು ಅನುಭವಿಸಿದರೋ ಅಷ್ಟೇ ಸಮಾನವಾದ ನೋವನ್ನು ಅನುಭವಿಸಿದ್ದು ಅವರ ಪತ್ನಿ ಸರಸ್ವತಿ.

ಹೌದು ಗೆಳೆಯರೆ ಕಾಲೇಜು ದಿನಗಳಲ್ಲಿ ಶಿವಕುಮಾರ್ ಮತ್ತು ಸರಸ್ವತಿಯವರು ಪ್ರೀತಿಸಿ ಬರೋಬ್ಬರಿ ಐದು ವರ್ಷಗಳ ನಂತರ ಮನೆಯವರೆಲ್ಲರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಆದರೆ ಮದುವೆಯಾದ ಕೆಲವು ವರ್ಷಗಳಲ್ಲಿ ಈ ರೀತಿಯಾದಂತಹ ಅಹಿತಕಾರಿ ಘಟನೆ ಉಂಟಾದದ್ದು ಕುಟುಂಬದಲ್ಲಿ ನುಂಗಲಾರದಂತಹ ನೋವನ್ನು ತಂದು ಒಡ್ಡಿತ್ತು ಎಂದರೆ ತಪ್ಪಾಗಲಾರದು.

ನಟ ಅಂಬರೀಶ್ ಅವರು ಎಣ್ಣೆ ಬೇಕು, ದಮ್ ಬೇಕು ಎಂದು ಹಠ ಹಿಡಿದಿದ್ದಕ್ಕೆ ವಿಷ್ಣುವರ್ಧನ್ ಮಾಡಿದ್ದೇನು ಗೊತ್ತೇ?

ಇತ್ತ ಶಶಿಕುಮಾರ್ ಅವರ ಚಿಕಿತ್ಸೆಗಾಗಿ ಆರ್ಥಿಕ ಸಮಸ್ಯೆಯೊಳಗೆ ಸರಸ್ವತಿ ಸಿಲುಕಿಕೊಂಡಿದ್ದರು. ಜೊತೆಗೆ ಆ ಸಂದರ್ಭದಲ್ಲಿ ಅವರಿನ್ನು ಬಾಡಿಗೆ ಮನೆಯಲ್ಲಿದ್ದರು, ಸಂಪೂರ್ಣ ಮನೆಯ ಜವಾಬ್ದಾರಿಯನ್ನು ಸರಸ್ವತಿ ಹೊತ್ತಿದರು.. ಇದರ ಜೊತೆಗೆ ಮನೆಯಲ್ಲಿ ಶಶಿಕುಮಾರ್ ಅವರ ಫೋಟೋ ಅಥವಾ ಕನ್ನಡಿಯನ್ನಾಗಲಿ ಯಾವುದನ್ನು ಹಾಕಿರಲಿಲ್ಲವಂತೆ. ಹೌದು ಅವುಗಳನ್ನೆಲ್ಲ ನೋಡಿದಾಗ ಶಶಿಕುಮಾರ್ ಸಾಕಷ್ಟು ಮಾನಸಿಕ ವ್ಯತೆಯನ್ನು ಅನುಭವಿಸುತ್ತಿದ್ದರು.

ಸಿನಿಮಾಗಳ ಅವಕಾಶವು ಇಲ್ಲದಂತಾಗಿತ್ತು. ಹೀಗೆ ಗಂಡನ ಯಶಸ್ಸಿನಲ್ಲಿ ಜೊತೆಗಿದ್ದಂತಹ ಸರಸ್ವತಿಯವರು ಸೋಲಿನಲ್ಲಿಯೂ ಸಾಥ್ ನೀಡಿ ಅವರು ಸಂಪೂರ್ಣ ಗುಣವಾಗುವವರೆಗೂ ಶಶಿಕುಮಾರ್ ಅವರ ಕಣ್ಣಾಗಿ ಜೀವವಾಗಿ ಇದ್ದರು.

Kannada Supreme Hero Shashikumar Life Story

Ads By Google
Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Published by.. ✍
Bengaluru, Karnataka, India
Edited By: Satish Raj Goravigere