KGF Chapter 2: ಚಿತ್ರದ ಸೆಟ್‌ನಲ್ಲಿ ಸಂಜಯ್ ದತ್ ಯಶ್‌ಗೆ ‘ನನ್ನನ್ನು ಅವಮಾನಿಸಬೇಡಿ’ ಎಂದು ಹೇಳಿದ್ದು ಏಕೆ,
KGF Chapter 2 : 'ಕೆಜಿಎಫ್ 2' 2022 ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಏತನ್ಮಧ್ಯೆ, ಚಿತ್ರದ ಅಬ್ಬರದ ಟ್ರೇಲರ್ ಹೊರಬಂದಿದ್ದು, ಅದು ಬಂದ ತಕ್ಷಣ, ಈ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ದಾಖಲೆ ನಿರ್ಮಿಸಿದೆ.
‘ಕೆಜಿಎಫ್ 2’ 2022 ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಏತನ್ಮಧ್ಯೆ, ಚಿತ್ರದ ಅಬ್ಬರದ ಟ್ರೇಲರ್ ಹೊರಬಂದಿದ್ದು, ಅದು ಬಂದ ತಕ್ಷಣ, ಈ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ದಾಖಲೆ ನಿರ್ಮಿಸಿದೆ. ‘ಕೆಜಿಎಫ್ 2’ ಚಿತ್ರದ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಇದರಲ್ಲಿ ಚಿತ್ರದ ತಾರಾ ಬಳಗದ ಹೊರತಾಗಿ ಕರಣ್ ಜೋಹರ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಂಜಯ್ ದತ್ ಸೆಟ್ ನಲ್ಲಿ ಹೇಗೆ ಕೆಲಸ ಮಾಡುತ್ತಾರೆ ಎಂದು ಮಾಧ್ಯಮದವರು ಯಶ್ ಅವರನ್ನು ಪ್ರಶ್ನಿಸಿದರು. ಇದನ್ನು ವಿವರಿಸಿದ ಯಶ್, ನನ್ನನ್ನು ಅವಮಾನಿಸಬೇಡಿ ಎಂದು ಸಂಜಯ್ ದತ್ ಯಶ್‌ಗೆ ಹೇಳಿದಾಗ ನಡೆದ ಘಟನೆಯ ಬಗ್ಗೆ ಹೇಳಿದರು.
ಸಂಜಯ್ ದತ್ ಅವರ ಕೆಲಸವನ್ನು ಶ್ಲಾಘಿಸಿದ ಯಶ್, “ಈ ಚಿತ್ರಕ್ಕಾಗಿ ಅವರು ತಮ್ಮನ್ನು ತಾವು ಸಿದ್ಧಪಡಿಸಿಕೊಂಡಿರುವ ಅವರ ಸಮರ್ಪಣೆಯನ್ನು ತೋರಿಸುತ್ತದೆ. ಅವರು ಸಾಹಸ ದೃಶ್ಯಗಳಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ನಮಗೆಲ್ಲರಿಗೂ ತಿಳಿದಿದೆ. ನಾನು ಅವರಿಗೆ ತುಂಬಾ ಹೆದರುತ್ತಿದ್ದೆ. ಎಲ್ಲರೂ ಹುಷಾರಾಗಿರಿ ಅಂತ ಮೊದಲೇ ಹೇಳಿದ್ದೆ.
ಆದರೆ ನಂತರ ಅವರು ನನ್ನ ಬಳಿಗೆ ಬಂದು, ಯಶ್ ದಯವಿಟ್ಟು ನನ್ನನ್ನು ಅವಮಾನಿಸಬೇಡಿ. ನಾನು ಇದನ್ನು ಮಾಡುತ್ತೇನೆ ಮತ್ತು ಮಾಡಲು ಬಯಸುತ್ತೇನೆ. ನಾನು ನನ್ನ ಅತ್ಯುತ್ತಮವಾದದ್ದನ್ನು ನೀಡಲು ಬಯಸುತ್ತೇನೆ ಎಂದಿದ್ದರಂತೆ..
ಸಂಜಯ್ ದತ್ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಚಿತ್ರೀಕರಣದಲ್ಲಿದ್ದಾಗ… ಆ ದಿನಗಳಲ್ಲಿ ಅವರು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಯೊಂದಿಗೆ ಹೋರಾಡುತ್ತಿದ್ದರು. ಆದರೆ ಈ ಸಂಕಷ್ಟದ ಸಂದರ್ಭದಲ್ಲೂ ಚಿತ್ರದ ಶೂಟಿಂಗ್ ನಿಲ್ಲಿಸಲಿಲ್ಲ. ಈ ಬಗ್ಗೆ ಮಾತನಾಡಿದ ಯಶ್, ‘ಸಂಜಯ್ ಸರ್ ನೀವು ನಿಜವಾಗಿಯೂ ಯೋಧ. ನೀವು ತುಂಬಾ ಡೌನ್ ಟು ಅರ್ಥ್.. ಎಂದಿದ್ದರಂತೆ, ಹಾಗೂ ಅವರು ನನ್ನನ್ನು ಯಶ್ ಭಾಯ್ ಎಂದು ಕರೆಯುತ್ತಾರೆ ಎಂದರು.
‘ಕೆಜಿಎಫ್ ಚಾಪ್ಟರ್ 1’ ಚಿತ್ರ 2018ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರ ಗಲ್ಲಾಪೆಟ್ಟಿಗೆಯನ್ನು ಬುಡಮೇಲು ಮಾಡಿತ್ತು. ಅದೇ ಸಮಯದಲ್ಲಿ, ಈ ಚಿತ್ರದ ಎರಡನೇ ಭಾಗವು 2021 ರಲ್ಲಿ ಬಿಡುಗಡೆಯಾಗಬೇಕಿತ್ತು ಆದರೆ ಕೊರೊನಾ ವೈರಸ್ ಕಾರಣ, ಚಿತ್ರದ ಬಿಡುಗಡೆ ದಿನಾಂಕವನ್ನು ವಿಸ್ತರಿಸಲಾಯಿತು.
ಚಿತ್ರದ ಬಿಡುಗಡೆ ದಿನಾಂಕವನ್ನು ಹಲವು ಬಾರಿ ಮುಂದೂಡಲಾಗಿದೆ. ಈಗ ಈ ಚಿತ್ರ ಏಪ್ರಿಲ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ‘ಕೆಜಿಎಫ್ ಚಾಪ್ಟರ್ 2’ ಚಿತ್ರದಲ್ಲಿ ಯಶ್ ಜೊತೆಗೆ ಸಂಜಯ್ ದತ್ ಮತ್ತು ರವೀನಾ ಟಂಡನ್ ಕಾಣಿಸಿಕೊಳ್ಳಲಿದ್ದಾರೆ.
KGF Chapter 2 Trailer
Follow us On
Google News |