ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಮಾಲಾಶ್ರೀ ಮಗಳು ರಾಧನಾ ರಾಮ್ ಅವರ ಚೊಚ್ಚಲ ಚಿತ್ರ
ಹಿರಿಯ ನಟಿ ಮಾಲಾಶ್ರೀ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿ ಒಳ್ಳೆಯ ಹೆಸರು ಗಳಿಸಿದ್ದಾರೆ. ಅವರ ಮಗಳು ರಾಧನಾ ರಾಮ್ ಅವರ ಚೊಚ್ಚಲ ಚಿತ್ರ ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ನಟಿಸುತ್ತಿದ್ದಾರೆ.
ಹಿರಿಯ ನಟಿ ಮಾಲಾಶ್ರೀ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿ ಒಳ್ಳೆಯ ಹೆಸರು ಗಳಿಸಿದ್ದಾರೆ. ಅವರ ಮಗಳು ರಾಧನಾ ರಾಮ್ ಅವರ ಚೊಚ್ಚಲ ಚಿತ್ರ ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ನಟಿಸುತ್ತಿದ್ದಾರೆ. ರಾಕ್‌ಲೈನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರಾಕ್‌ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದಾರೆ.
ದರ್ಶನ್ ಅವರ ಮುಂದಿನ ನಾಯಕಿ ಬೇರೆ ಯಾರೂ ಅಲ್ಲ, ಸ್ಯಾಂಡಲ್‌ವುಡ್‌ನ ಮೂಲ ಮಹಿಳಾ ಸೂಪರ್‌ಸ್ಟಾರ್ ಮಾಲಾಶ್ರೀ ಅವರ ಪುತ್ರಿ ರಾಧನಾ ರಾಮ್ ಎನ್ನುವುದು ತಿಳಿದುಬಂದಿದೆ.
ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಚಿತ್ರದ ನಿರ್ದೇಶಕ ತರುಣ್ ಸುಧೀರ. ಈ ಸಂದರ್ಭದಲ್ಲಿ ಮಾತನಾಡಿದ ಮಾಲಾಶ್ರೀ, ‘ರಾಧನಾಗೆ ಬಾಲ್ಯದಿಂದಲೂ ನಟನೆ ಇಷ್ಟ ಎಂದಿದ್ದಾರೆ. ಇನ್ನು ರಾಧನಾ ರಾಮ್ ಮುಂಬೈನಲ್ಲಿ ನಟನೆ ಮತ್ತು ನೃತ್ಯದಲ್ಲಿ ವಿಶೇಷ ತರಬೇತಿ ಪಡೆಡಿದ್ದಾರೆ. ನನ್ನ ಮಗಳು ಸ್ವಂತ ಪ್ರತಿಭೆ ಮೂಲಕ ಉದ್ಯಮದಲ್ಲಿ ಮಿಂಚಬೇಕು ಎಂಬುದು ನನ್ನ ಆಸೆ’ ಎಂದರು.
ಇನ್ನು ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 56 ನೇ ಚಿತ್ರವಾಗಿದ್ದು ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಎನ್ನುವುದು ಇನ್ನೊಂದು ವಿಶೇಷ, ತನ್ನ ಮೊದಲ ಚಿತ್ರವೇ ಪ್ಯಾನ್ ಇಂಡಿಯಾ ಸಿನಿಮಾ ಎಂದರೇ ರಾಧನಾ ರಾಮ್ ಅದೃಷ್ಟವೇ ಸರಿ, ಆದಾಗ್ಯೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಆಕೆಯು ಸಹ ಈ ಬಗ್ಗೆ ಹರ್ಷ ವ್ಯಕ್ತ ಪಡಿಸಿದ್ದಾರೆ. ದರ್ಶನ್ ಜೊತೆಗೆ ಅಭಿನಯಿಸುತ್ತಿದ್ದು, ಮೊದಲ ಚಿತ್ರವೇ ಪ್ಯಾನ್ ಇಂಡಿಯಾ ಸಿನಿಮಾ ಆದ್ದರಿಂದ ಆಕೆಯ ಮೇಲೆ ಸಿನಿರಸಿಕರಿಗೆ ನಿರೀಕ್ಷೆ ಹೆಚ್ಚಿದೆ.
ಇನ್ನು ಚಿತ್ರದ ಮುಹೂರ್ತ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಕನಕಪುರದಲ್ಲಿ ನಡೆಯಿತು, ಇನ್ನೇನು ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದ್ದು, ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ, ಮುಂದಿನ ವೃಷಕ್ಕೆಲ್ಲ ಚಿತ್ರೀಕರಣ ಮುಗಿದು ತೆರೆ ಮೇಲೆ ಬರುವ ನಿರೀಕ್ಷೆ ಇದೆ.
ತರುಣ್ ಸುಧೀರ್ ನಿರ್ದೇಶನದ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ಎದುರು ರಾಧನಾ ನಟಿಸಲಿದ್ದಾರೆ. “ಮತ್ತು ಅದು ಅಂದುಕೊಂಡಂತೆ ಹೇಳಿದರೆ, ಇದು ನಿಜಕ್ಕೂ ಕನಸು ನನಸಾಗಿದೆ” ಎಂದು ರಾಧನಾ ಹೇಳುತ್ತಾರೆ.
ಆಕೆಯ ಮೂಲ ಹೆಸರು ಅನನ್ಯಾ ಆಗಿದ್ದರೆ, ರಾಧನಾ ರಾಮ್ ಅವರು ಚಲನಚಿತ್ರಗಳಿಗೆ ಅಳವಡಿಸಿಕೊಂಡ ಹೆಸರು. “ದರ್ಶನ್ ಸರ್ ಜೊತೆ ಕೆಲಸ ಮಾಡುವುದು ಮತ್ತು ತರುಣ್ ಸರ್ ನಿರ್ದೇಶನ ಮಾಡುವುದು ಹೆಚ್ಚಿನ ಹೊಸಬರ ಕನಸು; ನಾನು ಪಡೆದಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ವಾಸ್ತವವಾಗಿ, ನನ್ನ ತಾಯಿಯೊಂದಿಗಿನ ಕರೆಗಳಲ್ಲಿ ಚಿತ್ರದ ಮಾತುಕತೆಗಳು ಪ್ರಾರಂಭವಾದಾಗ, ನಾನು ಕೋಣೆಯಲ್ಲಿದ್ದೆ ಮತ್ತು ಅದು ನಂಬಲಾಗಲಿಲ್ಲ. ಮುಹೂರ್ತದ ಹಾದಿಯಲ್ಲಿಯೂ ನಾನು ಅದನ್ನು ಜೀರ್ಣಿಸಿಕೊಳ್ಳುತ್ತಿದ್ದೇನೆ, ”ಎಂದು ಅವರು ಹೇಳುತ್ತಾರೆ.
80 ಮತ್ತು 90 ರ ದಶಕದಲ್ಲಿ ಗಲ್ಲಾಪೆಟ್ಟಿಗೆಯನ್ನು ಆಳಿದ ಮಾಲಾಶ್ರೀ, ಕನಸಿನ ರಾಣಿ ಎಂದು ಜನಪ್ರಿಯರಾಗಿದ್ದರು. ಆಕೆಯ ಪತಿ ಮತ್ತು ಪ್ರಸಿದ್ಧ ನಿರ್ಮಾಪಕ ರಾಮು ಅವರು ಎಕೆ 47, ಲಾಕಪ್ ಡೆತ್, ಸಿಂಹದ ಮಾರಿ, ಮತ್ತು ಗೋಲಿಬಾರ್‌ನಂತಹ ಕೆಲವು ದೊಡ್ಡ-ಬಜೆಟ್ ಚಿತ್ರಗಳನ್ನು ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಮಿನುಗುತಿರೋ ತಾರೆಗಳೊಟ್ಟಿಗೆ, ಹೊಸದೊಂದು ತಾರೆ! ✨
ನಮ್ಮ ಚಿತ್ರ #D56 ಗೆ ನಾಯಕಿಯಾಗಿ @Radhanaram_ ಗೆ ಸ್ವಾಗತ!
ಕನಸಿನರಾಣಿ ಮಾಲಾಶ್ರೀ ಹಾಗು 'ಕೋಟಿ' ರಾಮು ರವರ ಮಗಳಾದ #Radhanaram ಗೆ, ಬೆಳ್ಳಿ ತೆರೆಗೆ ನಲ್ಮೆಯ ಸ್ವಾಗತ! 😊
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು@dasadarshan @TharunSudhir#D56WelcomesRadhanaRam pic.twitter.com/S5cZp3IC7r
— RocklineEnt (@RocklineEnt) August 5, 2022
Follow us On
Google News |
Advertisement