2ನೇ ಮದುವೆ ಬಗ್ಗೆ ಮಾತನಾಡಿದ ಮೇಘನಾ ರಾಜ್ ಏನಂದ್ರು ಗೊತ್ತಾ?
ಈ ಬಗ್ಗೆ ಮೇಘನಾ ಸ್ಪಷ್ಟನೆ ನೀಡಿದ್ದು, ಜನರು ಏನಾದರೂ ಮಾತನಾಡುತ್ತಾರೆ... ಆದರೆ, ನಾನು ಏನು ಮಾಡಬೇಕು, ನನ್ನ ನಿರ್ಧಾರ ಏನು ಎಂಬುದು ನನ್ನ ಜೀವನಕ್ಕೆ ಸಂಬಂಧಿಸಿದ ವಿಷಯ ಎಂದಿದ್ದಾರೆ.
- ಮೇಘನಾ ರಾಜ್ ಮದುವೆ ವಿಚಾರ – ಸ್ಪಷ್ಟನೆ ನೀಡಿದ ನಟಿ!
- ಚಿರು ಅವರ ಆಶೀರ್ವಾದವಿದ್ದರೆ ಮಾತ್ರ ಮದುವೆ ಸಾಧ್ಯ
- ನನ್ನ ಇಮೇಜ್ ನನ್ನ ಸುತ್ತಲಿನ ಜನರಿಂದ ಸೃಷ್ಟಿಯಾಗಿದೆ
ನಟಿ ಮೇಘನಾ ರಾಜ್ (Actress Meghana Raj) ತಮ್ಮ ಮದುವೆ ಬಗ್ಗೆ ಹರಿದಾಡುತ್ತಿರುವ ಚರ್ಚೆಗಳಿಗೆ ಕೊನೆಗೂ ಮುಕ್ತವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಪತಿ, ಜನಪ್ರಿಯ ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರ ಅಗಲಿಕೆಯ ನೋವು ಇನ್ನೂ ಕಡಿಮೆಯಾಗಿಲ್ಲ. ಆದರೆ, ಮೇಘನಾ ಮತ್ತೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಇದು ನಿಜವೇ? ಈ ಬಗ್ಗೆ ಮೇಘನಾ ಸ್ಪಷ್ಟನೆ ನೀಡಿದ್ದು, ಜನರು ಏನಾದರೂ ಮಾತನಾಡುತ್ತಾರೆ… ಆದರೆ, ನಾನು ಏನು ಮಾಡಬೇಕು, ನನ್ನ ನಿರ್ಧಾರ ಏನು ಎಂಬುದು ನನ್ನ ಜೀವನಕ್ಕೆ ಸಂಬಂಧಿಸಿದ ವಿಷಯ ಎಂದಿದ್ದಾರೆ.
ಮಗ ರಾಯನ್ (Rayaan) ಈಗ ದೊಡ್ಡವನಾಗುತ್ತಿದ್ದಾನೆ. “ತಂದೆಯ ಪ್ರೀತಿ ಅವನಿಗೆ ಇರಬೇಕಾ ಎಂಬ ಪ್ರಶ್ನೆ ನನಗೆ ಬಂದಿಲ್ಲ ಎಂದು ಹೇಳುವುದಾದರೆ, ಅದು ಸುಳ್ಳಾಗುತ್ತದೆ,” ಎಂದು ಅವರು ಹೇಳಿದ್ದಾರೆ. “ನಮ್ಮ ಮನೆಯಲ್ಲೇ ಚಿರು ಇದ್ದಾರೆ. ಅವರ ಹಾಡು, ಅವರ ಫೋಟೋ, ಅವರ ಚಿತ್ರಗಳು… ಈ ಎಲ್ಲವನ್ನೂ ನೋಡಿ ರಾಯನ್ ಬೆಳೆಯುತ್ತಿದ್ದಾನೆ. ಅವನಿಗೆ ಚಿರು ಅವರೇ ಅಪ್ಪ.”
ಇನ್ನೂ, “ನಾನು ಮದುವೆಯಾಗಬೇಕೋ ಅಥವಾ ಬೇಡವೋ ಎಂದು ತೀರ್ಮಾನಿಸುವ ಹೊಣೆ ನನ್ನದೇ. ಆದರೆ, ನನ್ನ ಬದುಕಿನ ಬಗ್ಗೆ ಚಿರು ಅವರೇ ನಿರ್ಧಾರ ಮಾಡುತ್ತಾರೆ. ಚಿರು ನನಗೆ ಒಳ್ಳೆಯದನ್ನು ಮಾತ್ರ ಬಯಸುತ್ತಾರೆ,” ಎಂದಿದ್ದಾರೆ.
ಇನ್ನು ಮತ್ತೊಬ್ಬರನ್ನು ಮದುವೆಯಾಗಲಿದ್ದಾರಾ ಎಂಬ ಪ್ರಶ್ನೆಗೆ ಅವರು, “ನಾನು ಮದುವೆಯಾಗುವುದಿಲ್ಲ ಅಂತ ಹೇಳಲಾರೆ. ಆದರೆ, ಚಿರು ಅವರ ಆಶೀರ್ವಾದವಿದ್ದರೆ ಮಾತ್ರ ನಾನು ಮದುವೆಯಾಗುತ್ತೇನೆ,” ಎಂದಿದ್ದಾರೆ.
“ಸಮಾಜ ನನ್ನ ನಿರ್ಧಾರವನ್ನು ಒಪ್ಪಿಕೊಳ್ಳುತ್ತಾ ಎಂಬ ಪ್ರಶ್ನೆ ನನಗೆ ಮುಖ್ಯವಲ್ಲ. ಆದರೆ, ಜನರು ಏನು ಹೇಳುತ್ತಾರೆ ಎಂಬುದರ ಬಗ್ಗೆ ಒತ್ತಡ ಅನುಭವಿಸುತ್ತೇನೆ,” ಎಂದಿದ್ದಾರೆ. “ನನಗೆ ಇರುವ ಇಮೇಜ್ ನನ್ನದೇ ಅಲ್ಲ, ಅದು ನನ್ನ ಸುತ್ತಲಿನ ಜನರಿಂದ ಸೃಷ್ಟಿಯಾಗಿದೆ,” ಎಂದು ಅವರು ಹೇಳಿಕೊಂಡಿದ್ದಾರೆ.
Meghana Raj Opens Up About Second Marriage Rumors
Our Whatsapp Channel is Live Now 👇