ನಟಿ ಪ್ರಿಯಾಂಕಾ ಉಪೇಂದ್ರ ಮೊಬೈಲ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ

ನಟಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಹ್ಯಾಕ್ ಮಾಡಿದ ಬಿಹಾರ ಮೂಲದ ವಿಕಾಸ್ ಕುಮಾರ್ ಬಂಧನಗೊಂಡಿದ್ದು, ಪೊಲೀಸರು ತನಿಖೆ ಬಳಿಕ ಆರೋಪಿಯನ್ನು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

  • ಪ್ರಿಯಾಂಕಾ ಉಪೇಂದ್ರ ಮೊಬೈಲ್ ಹ್ಯಾಕ್ ಮಾಡಿದ್ದ ಆರೋಪಿ
  • ಬಿಹಾರ ಮೂಲದ ಆರೋಪಿ ವಿಕಾಸ್ ಕುಮಾರ್ ಬಂಧನ
  • ಸದಾಶಿವನಗರ ಪೊಲೀಸರಿಂದ ಆರೋಪಿ ಬಂಧಿಸಿ ವಿಚಾರಣೆ

ಬೆಂಗಳೂರು (Bengaluru): ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra) ಅವರ ಮೊಬೈಲ್ ಹ್ಯಾಕ್ ಪ್ರಕರಣದಲ್ಲಿ ಪೊಲೀಸರು ಮಹತ್ವದ ಬೆಳವಣಿಗೆಯನ್ನು ದಾಖಲಿಸಿದ್ದಾರೆ. ಸದಾಶಿವನಗರ ಠಾಣೆಯ ಪೊಲೀಸರು ಬಿಹಾರ ಮೂಲದ ವಿಕಾಸ್ ಕುಮಾರ್ ಎಂಬ ವಂಚಕನನ್ನು ಬಂಧಿಸಿ, ವಿಚಾರಣೆಗಾಗಿ ಬೆಂಗಳೂರಿಗೆ ಕರೆತಂದಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಯು ಪ್ರಿಯಾಂಕಾ ಉಪೇಂದ್ರ ಅವರ ಫೋನ್ ಹ್ಯಾಕ್ ಮಾಡಿ, ಅದರಲ್ಲಿದ್ದ ಸಂಪರ್ಕ ಸಂಖ್ಯೆಗೆ ಮೆಸೇಜ್ ಕಳುಹಿಸಿ ಹಣ ಬೇಡಿದ್ದಾನೆ. ನಟಿಯ ಮಗನ ಖಾತೆಯಿಂದ ಸುಮಾರು ₹50,000 ರೂಪಾಯಿಗಳನ್ನು ಖಾಲಿ ಮಾಡಿರುವುದಾಗಿ ತನಿಖೆಯಲ್ಲಿ ಬಹಿರಂಗವಾಗಿದೆ.

ಇದನ್ನೂ ಓದಿ: ಗಡ್ಡಪ್ಪ ಇನ್ನಿಲ್ಲ: ಕನ್ನಡ ತಿಥಿ ಸಿನಿಮಾ ಖ್ಯಾತಿಯ ನಟ ಚನ್ನೇಗೌಡ ನಿಧನ

ಘಟನೆಯು ಸೆಪ್ಟೆಂಬರ್ 15ರಂದು ನಡೆದಿದ್ದು, ವಂಚಕನು ಡೆಲಿವರಿ ಬಾಯ್‌ನಂತೆ ನಟಿಸಿ ಪ್ರಿಯಾಂಕಾಗೆ ಕರೆಮಾಡಿದ್ದ. “ನಿಮ್ಮ ಆರ್ಡರ್ ಡೆಲಿವರಿ ವಿಳಾಸ ಸಿಗುತ್ತಿಲ್ಲ” ಎಂದು ಹೇಳಿ, ಕಳುಹಿಸಿದ ಲಿಂಕ್ ಕ್ಲಿಕ್ ಮಾಡಲು ಹೇಳಿದ್ದಾನೆ. ನಟಿ ಅದನ್ನು ಕ್ಲಿಕ್ ಮಾಡಿದ ಕೆಲವೇ ಕ್ಷಣಗಳಲ್ಲಿ ಅವರ ಮೊಬೈಲ್ ಹ್ಯಾಕ್ ಆಗಿತ್ತು.

ಮೊದಲು ಪ್ರಿಯಾಂಕಾ ಅವರಿಗೆ ಇದು ತಾಂತ್ರಿಕ ಸಮಸ್ಯೆ ಎಂದು ಭಾಸವಾದರೂ, ಕೆಲವೇ ಹೊತ್ತಿನಲ್ಲಿ ಅವರ ಪತಿ ಉಪೇಂದ್ರ ಹಾಗೂ ಸ್ನೇಹಿತ ಮಹಾದೇವ್ ಅವರ ಫೋನ್‌ಗಳು ಸಹ ಹ್ಯಾಕ್ ಆಗಿದ್ದವು. ಇದರಿಂದ ವಂಚನೆಯು ಗಂಭೀರವಾಗಿರುವುದು ದೃಢಪಟ್ಟಿತ್ತು.

ಪ್ರಿಯಾಂಕಾ ಉಪೇಂದ್ರ ಅವರು ತಕ್ಷಣ ಸದಾಶಿವನಗರ ಪೊಲೀಸರಿಗೆ ದೂರು ಸಲ್ಲಿಸಿದರು. ಪೊಲೀಸರು ತಾಂತ್ರಿಕ ತಂಡದ ಸಹಾಯದಿಂದ ಆರೋಪಿಯನ್ನು ಟ್ರೇಸ್ ಮಾಡಿ ಬಿಹಾರದಿಂದ ಬಂಧಿಸಿದರು. ಪೊಲೀಸರು ಆರೋಪಿಯಿಂದ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳುತ್ತಿದ್ದಾರೆ.

Priyanka Upendra’s Phone Hacker Arrested in Bihar

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories