ಗಡ್ಡಪ್ಪ ಇನ್ನಿಲ್ಲ: ಕನ್ನಡ ತಿಥಿ ಸಿನಿಮಾ ಖ್ಯಾತಿಯ ನಟ ಚನ್ನೇಗೌಡ ನಿಧನ

ತಿಥಿ ಸಿನಿಮಾದ ಖ್ಯಾತಿಯ ನೊದೆಕೊಪ್ಪಲು ಗ್ರಾಮದ ಗಡ್ಡಪ್ಪ ಅಲಿಯಾಸ್‌ ಚನ್ನೇಗೌಡ (89) ಅವರು ಆಸ್ತಮಾ ಮತ್ತು ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಬುಧವಾರ ಮುಂಜಾನೆ ನಿಧನರಾದರು.

  • ತಿಥಿ ಸಿನಿಮಾದ ಗಡ್ಡಪ್ಪ ಅಲಿಯಾಸ್‌ ಚನ್ನೇಗೌಡ ನಿಧನ
  • ಆಸ್ತಮಾ, ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಗಡ್ದಪ್ಪ
  • ನೊದೆಕೊಪ್ಪಲು ಗ್ರಾಮದಲ್ಲೇ ಅಂತ್ಯಕ್ರಿಯೆ ವ್ಯವಸ್ಥೆ

Thithi Fame Actor Gadappa: ಮಂಡ್ಯ ಜಿಲ್ಲೆಯ ನೊದೆಕೊಪ್ಪಲು ಗ್ರಾಮದಲ್ಲಿ ಜನಿಸಿದ ಗಡ್ಡಪ್ಪ ಅಲಿಯಾಸ್‌ ಚನ್ನೇಗೌಡ ಅವರು ಬುಧವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಅವರು ಕಳೆದ ಕೆಲವು ವರ್ಷಗಳಿಂದ ಆಸ್ತಮಾ ಮತ್ತು ಹೃದಯ ಕಾಯಿಲೆಯಿಂದ ಬಳಲುತ್ತಿದ್ದರು. ತಿಂಗಳ ಹಿಂದೆ ಬಿದ್ದು ಸೊಂಟಕ್ಕೆ ಪೆಟ್ಟು ಬಿದ್ದಿದ್ದರಿಂದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ಕನ್ನಡ ಸಿನಿರಂಗದಲ್ಲಿ ಅವರಿಗೊಂದು ವಿಭಿನ್ನ ಸ್ಥಾನ ಸಿಕ್ಕಿತ್ತು. ‘ತಿಥಿ’ ಸಿನಿಮಾದಲ್ಲಿ ಅವರ ನೈಸರ್ಗಿಕ ಅಭಿನಯ ರಾಷ್ಟ್ರ ಮಟ್ಟದ ಪ್ರಶಂಸೆಗೆ ಪಾತ್ರವಾಯಿತು. ಅಲ್ಲದೆ ‘ತರ್ಲೆ ವಿಲೇಜ್’, ‘ಜಾನಿ ಮೇರಾ ನಾಮ್’, ‘ಹಳ್ಳಿ ಪಂಚಾಯಿತಿ’ ಸೇರಿದಂತೆ 10ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

ಅವರ ಪುತ್ರಿ ಶೋಭಾ ಅವರು, “ನಮ್ಮ ತಂದೆಗೆ ಸಿನಿಮಾ ಅಂದ್ರೆ ಹುಚ್ಚು. ಯಾವ ಚಿತ್ರ ಬಂದರೂ ನೋಡಿ ಸಂತೋಷ ಪಡುತ್ತಿದ್ದರು. ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ದಿನಗಳಲ್ಲಿ ‘ಗಡ್ಡಪ್ಪ’ ಎಂಬ ಹೆಸರು ಬಂದಿತು. ನಂತರ ಅದೇ ಹೆಸರು ಸಿನಿಮಾದಲ್ಲೂ ಖ್ಯಾತಿಯಾಯಿತು,” ಎಂದು ಭಾವುಕರಾದರು.

ಅವರ ಅಂತ್ಯಕ್ರಿಯೆ ಬುಧವಾರ ಸಂಜೆ 5 ಗಂಟೆಗೆ ಸ್ವಗ್ರಾಮ ನೊದೆಕೊಪ್ಪಲು ಜಮೀನಿನಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಅಭಿಮಾನಿಗಳು ಮತ್ತು ಚಿತ್ರರಂಗದ ಕಲಾವಿದರು ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

Thithi Fame Actor Gadappa Passes Away at 89

English Summary▼

Ramya

Sub Editor, Cinema, Health & Lifestyle : 👤 Ramya is a journalist with five years of experience in… More »

Related Stories