Snack Toy Turns Fatal | ಕುರುಕಲು ತಿಂಡಿಯ ಪೊಟ್ಟಣದಲ್ಲಿದ್ದ ಆಟಿಕೆಯನ್ನು ನುಂಗಿ 4 ವರ್ಷದ ಬಾಲಕಿ ಸಾವು

Snack Toy Turns Fatal: ಚನ್ನಗಿರಿ ಪಟ್ಟಣದಲ್ಲಿ ಕುರುಕಲು ತಿಂಡಿಯ ಪೊಟ್ಟಣದಲ್ಲಿದ್ದ ಆಟಿಕೆಯನ್ನು ನುಂಗಿದ ನಾಲ್ಕು ವರ್ಷದ ಬಾಲಕಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾಳೆ. ಪೋಷಕರು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೂ ಮನೆಗೆ ಮರಳಿದ ಬಳಿಕ ಮತ್ತೆ ಆರೋಗ್ಯ ಹದಗೆಟ್ಟು ಸಾವನ್ನಪ್ಪಿದ ಘಟನೆ ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ.

  • ನಾಲ್ಕು ವರ್ಷದ ಅಲಿಯಾ ಶೇಕ್ ಸಾವು
  • ತಿಂಡಿಯಲ್ಲಿದ್ದ ಆಟಿಕೆ ನುಂಗಿದ್ದ ಮಗು
  • ಚನ್ನಗಿರಿ ಪಟ್ಟಣದಲ್ಲಿ ದುರ್ಘಟನೆ

ದಾವಣಗೆರೆ (Davanagere): ಕುರುಕಲು ತಿಂಡಿ ತಿನ್ನುತ್ತಿದ್ದ ನಾಲ್ಕು ವರ್ಷದ ಪುಟ್ಟ ಬಾಲಕಿ ದುರಂತ ಸಾವಿಗೀಡಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ (Channagiri) ಪಟ್ಟಣದಲ್ಲಿ ನಡೆದಿದೆ. ತಿಂಡಿಯ ಪೊಟ್ಟಣದಲ್ಲಿದ್ದ ಆಟಿಕೆಯನ್ನು (Snack Packet Toy) ನುಂಗಿದ್ದೇ ಮಗುವಿನ ಸಾವಿಗೆ ಕಾರಣ ಎನ್ನಲಾಗಿದೆ.

ಚನ್ನಗಿರಿ ಪಟ್ಟಣದ ಕೌಸರ್ ಮಸೀದಿ ಏರಿಯಾದಲ್ಲಿ ಈ ಘಟನೆ ಸಂಭವಿಸಿದೆ. ಅಲಿಯಾ ಶೇಕ್ (Alia Sheikh) ಎಂಬ ನಾಲ್ಕು ವರ್ಷ ನಾಲ್ಕು ತಿಂಗಳ ಬಾಲಕಿ ಮೃತಪಟ್ಟಿದ್ದಾಳೆ. ಮನೆಯ ಸಮೀಪದ ಅಂಗಡಿಯಿಂದ ಕುರುಕಲು ತಿಂಡಿ ಖರೀದಿಸಿ ತಿನ್ನುತ್ತಿದ್ದಾಗ ಅದರೊಳಗಿದ್ದ ಸಣ್ಣ ಆಟಿಕೆಯನ್ನು ಮಗು ನುಂಗಿದೆ ಎನ್ನಲಾಗಿದೆ.

ಇದಾದ ಕೆಲವೇ ಹೊತ್ತಿನಲ್ಲಿ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿದ್ದು, ಆತಂಕಗೊಂಡ ಪೋಷಕರು ತಕ್ಷಣವೇ ಆಕೆಯನ್ನು ಚನ್ನಗಿರಿ ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರಿಂದ ಚಿಕಿತ್ಸೆ ಕೊಡಿಸಿದ ಬಳಿಕ ಮಗುವನ್ನು ಮನೆಗೆ ಕರೆದುಕೊಂಡು ಬಂದಿದ್ದರು.

ಆದರೆ ಮನೆಗೆ ಮರಳಿದ ನಂತರ ಮತ್ತೆ ಬಾಲಕಿ ಅಸ್ವಸ್ಥಗೊಂಡಿದ್ದಾಳೆ. ಪರಿಸ್ಥಿತಿ ಹದಗೆಟ್ಟು ಕೊನೆಗೆ ಮೃತಪಟ್ಟಿದ್ದಾಳೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಕುಟುಂಬದಲ್ಲಿ ಶೋಕ ಆವರಿಸಿದೆ.

ಮಕ್ಕಳಿಗಾಗಿ ಮಾರುಕಟ್ಟೆಯಲ್ಲಿ ಮಾರಾಟವಾಗುವ ತಿಂಡಿ ಪೊಟ್ಟಣಗಳಲ್ಲಿರುವ ಸಣ್ಣ ವಸ್ತುಗಳ ಬಗ್ಗೆಯೂ ಪೋಷಕರು ಎಚ್ಚರಿಕೆ ವಹಿಸಬೇಕಾದ ಅಗತ್ಯವನ್ನು ಈ ಘಟನೆ ನೆನಪಿಸಿದೆ. ಘಟನೆ ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories