Pushpa 2; ಪುಷ್ಪ2 ಅತಿ ದೊಡ್ಡ ಪ್ಯಾನ್ ಇಂಡಿಯಾ ಚಲನಚಿತ್ರವಾಗಲಿದೆ !
PUSHPA 2 Movie: ಅಲ್ಲು ಅರ್ಜುನ್ (Allu Arjun) ಅಭಿನಯದ 'ಪುಷ್ಪಾ-ದಿ ರೈಸ್' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಎಂತಹ ಸಂಚಲನ ಮೂಡಿಸಿದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇಂದಿನ ಅದರ ಮುಂದುವರೆದ ಭಾಗ ಪುಷ್ಪಾ 2 (Pushpa Sequel) ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿದೆ.
PUSHPA 2 Movie: ಅಲ್ಲು ಅರ್ಜುನ್ (Allu Arjun) ಅಭಿನಯದ ‘ಪುಷ್ಪಾ-ದಿ ರೈಸ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಎಂತಹ ಸಂಚಲನ ಮೂಡಿಸಿದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇಂದಿನ ಅದರ ಮುಂದುವರೆದ ಭಾಗ ಪುಷ್ಪಾ 2 (Pushpa Sequel) ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿದೆ.
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ-ದಿ ರೈಸ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹವಾ ಸೃಷ್ಟಿ ಮಾಡಿತ್ತು. ಕೇವಲ ಪ್ರಾದೇಶಿಕ ಸಿನಿಮಾವಾಗಿ ತೆರೆಕಂಡ ಈ ಸಿನಿಮಾವನ್ನು ಬೇರೆ ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಮಾಡಲಾಗಿತ್ತು. ಹಾಗಿದ್ದರೂ, ಸ್ಟೈಲಿಶ್ ಸ್ಟಾರ್ ಮ್ಯಾನರಿಸಂ ಮತ್ತು ಸುಕುಮಾರ್ ಅವರ ಟೇಕ್‌ಗಳು ಇತರ ಭಾಷೆಯ ಪ್ರೇಕ್ಷಕರನ್ನು ಹುಚ್ಚರನ್ನಾಗಿ ಮಾಡಿತು ಮತ್ತು ಚಿತ್ರವು ಅಲ್ಲಿಯೂ ದೊಡ್ಡ ಯಶಸ್ಸನ್ನು ಕಂಡಿತು. ಈ ಬಾರಿ ಪುಷ್ಪರಾಜ್ ಬೇರೆ ಬೇರೆ ಹಿಟ್ ಸಿನಿಮಾಗಳಿಗೆ ಸೆಡ್ಡು ಹೊಡೆಯಲು ತಯಾರಿಯಲ್ಲಿದೆ.
ಇದನ್ನೂ ಓದಿ : ಬಾಹುಬಲಿ ಮತ್ತು RRR ಅನ್ನು ಮೀರಿಸಲಿದಿಯಂತೆ ಪುಷ್ಪಾ 2
ಬಾಹುಬಲಿ ಮತ್ತು RRR , ಇದುವರೆಗಿನ ಭಾರತದ ಅತಿದೊಡ್ಡ ಪ್ಯಾನ್-ಇಂಡಿಯಾ ಚಲನಚಿತ್ರವಾಗಿದೆ, ಪುಷ್ಪಾ ಈ ಚಿತ್ರಗಳನ್ನು ಮೀರಿಸುವ ಸಂಪೂರ್ಣ ಯೋಜನೆಯೊಂದಿಗೆ ರಿಂಗ್‌ಗೆ ಪ್ರವೇಶಿಸುತ್ತಿದೆ. ಈಗಾಗಲೇ ಈ ಸಿನಿಮಾದ ಸ್ಕ್ರಿಪ್ಟ್ ಫೈನಲ್ ಮಾಡಿರುವ ಬನ್ನಿ ಮತ್ತು ಸುಕುಮಾರ್ ಯಾವುದೇ ತಪ್ಪು ಆಗದಂತೆ ಎಚ್ಚರ ವಹಿಸಿದ್ದಾರೆ.
ಆಗಸ್ಟ್ ನಲ್ಲಿ ಈ ಚಿತ್ರದ ರೆಗ್ಯುಲರ್ ಶೂಟಿಂಗ್ ಆರಂಭಿಸಲು ತಯಾರಾಗುತ್ತಿರುವ ಚಿತ್ರತಂಡ, ಚಿತ್ರದ ಬಜೆಟ್ ಅಥವಾ ಕಾಸ್ಟಿಂಗ್ ವಿಚಾರದಲ್ಲಿ ಯಾವುದೇ ಹೆಜ್ಜೆ ಹಿಂದೆ ಇಡದಿರಲು ನಿರ್ಧರಿಸಿದೆ. ಇದರೊಂದಿಗೆ ಅದ್ಧೂರಿ ಬಜೆಟ್ ಹಾಗೂ ಅದ್ಧೂರಿ ತಾರಾಬಳಗದಲ್ಲಿ ಈ ಸಿನಿಮಾ ಮಾಡಲು ಚಿತ್ರತಂಡ ಸಿದ್ಧವಾಗುತ್ತಿದೆ.
ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಸಿನಿಮಾ ‘ಸೀತಾ ರಾಮನ್’ ಪೋಸ್ಟರ್ ಬಿಡುಗಡೆ
ಈ ಚಿತ್ರದಲ್ಲಿ ಮತ್ತೊಂದು ವಿಲನ್ ಪಾತ್ರಕ್ಕೆ ತಮಿಳು ನಟ ವಿಜಯ್ ಸೇತುಪತಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಈಗಾಗಲೇ ಉದ್ಯಮದಲ್ಲಿ ವರದಿಯಾಗಿದೆ. ಮೇಲಾಗಿ ನಿರ್ದೇಶಕ ಸುಕುಮಾರ್ ಸೀಕ್ವೆಲ್ ಕಥೆಯನ್ನು ಆರಂಭದಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿ ಬರೆದಿದ್ದಾರೆ. 2023ರಲ್ಲಿ ಬಿಡುಗಡೆಯಾಗಲಿರುವ ‘ಪುಷ್ಪಾ-ದಿ ರೂಲ್’ ಬಾಹುಬಲಿ ಮತ್ತು ಆರ್‌ಆರ್‌ಆರ್ ಅನ್ನು ಮೀರಿಸಿ ಪ್ಯಾನ್-ಇಂಡಿಯನ್ ಸಿನಿಮಾ ಆಗುವುದು ಖಚಿತ ಎಂದು ಚಿತ್ರ ಮೂಲಗಳು ಹೇಳುತ್ತವೆ.
ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮತ್ತೊಂದು ಬಾಲಿವುಡ್ ಸಿನಿಮಾಗೆ ಸಹಿ
ಅದರಂತೆ ಈ ಸಿನಿಮಾ ಮೇಕಿಂಗ್ ನಿಂದ ಹಿಡಿದು ಪ್ರಮೋಷನ್ ವರೆಗೂ ಪ್ಲಾನ್ ಮಾಡ್ತಿದೆ ಚಿತ್ರತಂಡ. ಮತ್ತು ಪುಷ್ಪ ನಿಜವಾಗಿಯೂ ಬಾಹುಬಲಿ ಮತ್ತು RRR ಅನ್ನು ಮೀರಿಸುತ್ತದೆಯೇ ಎಂದು ತಿಳಿಯಲು ನಾವು ಇನ್ನೊಂದು ವರ್ಷ ಕಾಯಬೇಕು.
ಇದನ್ನೂ ಓದಿ : Sai Pallavi ಸಂಕಷ್ಟದಲ್ಲಿ ನಟಿ ಸಾಯಿ ಪಲ್ಲವಿ !
ಸಾಯಿ ಪಲ್ಲವಿ ಮಾಧ್ಯಮದ ಮುಂದೆ ಬಿಚ್ಚಿಟ್ಟ ಸತ್ಯ
Pushpa 2 Will Became The Biggest Pan India Movie