Rashmika Mandanna; ರಶ್ಮಿಕಾ ಮಂದಣ್ಣ ಜೋಳಿಗೆಯಲ್ಲಿ ಮತ್ತೊಂದು ಬಾಲಿವುಡ್ ಸಿನಿಮಾ

Rashmika Mandanna Next Bollywood Movie: ರಶ್ಮಿಕಾ ಮಂದಣ್ಣ ಬಾಲಿವುಡ್ (Bollywood Cinema) ಚೊಚ್ಚಲ ಚಿತ್ರ 'ಮಿಷನ್ ಮಜ್ನು' ಬಿಡುಗಡೆಗೆ ಮುನ್ನ, ಮತ್ತೊಂದು ಚಿತ್ರ ಟೈಗರ್ ಶ್ರಾಫ್ (With Tiger Shroff) ಜೊತೆ ಕಾಣಿಸಿಕೊಳ್ಳಲಿದ್ದಾರೆ.

Rashmika Mandanna Next Bollywood Movie: ರಶ್ಮಿಕಾ ಮಂದಣ್ಣ ಬಾಲಿವುಡ್ (Bollywood Cinema) ಚೊಚ್ಚಲ ಚಿತ್ರ ‘ಮಿಷನ್ ಮಜ್ನು’ ಬಿಡುಗಡೆಗೆ ಮುನ್ನ, ಮತ್ತೊಂದು ಚಿತ್ರ ಟೈಗರ್ ಶ್ರಾಫ್ (With Tiger Shroff) ಜೊತೆ ಕಾಣಿಸಿಕೊಳ್ಳಲಿದ್ದಾರೆ.

ನ್ಯಾಶನಲ್ ಕ್ರಶ್ ಎಂದೇ ಖ್ಯಾತರಾಗಿರುವ ನಟಿ ರಶ್ಮಿಕಾ ಮಂದಣ್ಣ ಅವರ ಜನಪ್ರಿಯತೆ ಸೌತ್ ನಂತರ ಬಾಲಿವುಡ್ ನಲ್ಲಿ ಹೆಚ್ಚಾಗುತ್ತಿದೆ. ‘ಪುಷ್ಪ: ದಿ ರೈಸ್’ ಚಿತ್ರದ ಅಗಾಧ ಯಶಸ್ಸಿನ ನಂತರ ರಶ್ಮಿಕಾ ದಕ್ಷಿಣ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.

ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮತ್ತೊಂದು ಬಾಲಿವುಡ್ ಸಿನಿಮಾಗೆ ಸಹಿ

Rashmika Mandanna; ರಶ್ಮಿಕಾ ಮಂದಣ್ಣ ಜೋಳಿಗೆಯಲ್ಲಿ ಮತ್ತೊಂದು ಬಾಲಿವುಡ್ ಸಿನಿಮಾ - Kannada News

ರಶ್ಮಿಕಾ ಒಂದರ ಹಿಂದೆ ಒಂದರಂತೆ ಹಲವು ಬಾಲಿವುಡ್ ಚಿತ್ರಗಳಿಗೆ ಸಹಿ ಹಾಕುತ್ತಿದ್ದಾರೆ. ಈ ನಡುವೆ ಈ ಚಿತ್ರಗಳ ನಡುವೆ ರಶ್ಮಿಕಾ ಅವರ ಜೋಳಿಗೆಯಲ್ಲಿ ಮತ್ತೊಂದು ಸಿನಿಮಾ ಬಿದ್ದಿದೆ ಎಂಬ ಸುದ್ದಿ ಹೊರ ಬರುತ್ತಿದೆ.

ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದ ಕೆಲವೇ ಕೆಲವು ನಟಿಯರಲ್ಲಿ ರಶ್ಮಿಕಾ ಮಂದಣ್ಣ ಸಹ ಒಬ್ಬರು, ಈಗ ಬಾಲಿವುಡ್ ನಲ್ಲಿಯೂ ಆಕೆಯ ಡೇಟ್ಸ್ ಗೆ ನಿರ್ಮಾಪಕರು ಮುಗಿಬೀಳುತ್ತಿದ್ದಾರೆ. ರಶ್ಮಿಕಾ ಸಹ ಸಿಕ್ಕ ಎಲ್ಲಾ ಸಿನಿಮಾಗಳಿಗೆ ಸಹಿ ಆಕದೆ, ಎಚ್ಚರಿಕೆಯಿಂದ ಸಿನಿಮಾ ಆಯ್ಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ : Sai Pallavi ಸಂಕಷ್ಟದಲ್ಲಿ ನಟಿ ಸಾಯಿ ಪಲ್ಲವಿ !

Rashmika Mandanna Next Bollywood Film with Tiger Shroff

ರಶ್ಮಿಕಾ ಮಂದಣ್ಣ ‘ಮಿಷನ್ ಮಜ್ನು’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ವಿಷಯ ಈಗಾಗಲೇ ತಿಳಿದಿದೆ. ಈ ಚಿತ್ರದಲ್ಲಿ ರಶ್ಮಿಕಾ ಜೊತೆಗೆ ನಟ ಸಿದ್ಧಾರ್ಥ್ ಮಲ್ಹೋತ್ರಾ ಕಾಣಿಸಿಕೊಳ್ಳಲಿದ್ದಾರೆ.

ಈ ನಡುವೆ ರಶ್ಮಿಕಾಗೆ ಮತ್ತೊಂದು ಬಾಲಿವುಡ್ ಚಿತ್ರ ಸಿಕ್ಕಿದೆ ಎಂಬ ಸುದ್ದಿ ಹೊರಬಿದ್ದಿದೆ. ಇದರಲ್ಲಿ ಅವರು ನಟ ಟೈಗರ್ ಶ್ರಾಫ್ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ. ಪಿಂಕ್ವಿಲ್ಲಾ ಪ್ರಕಾರ, ಬಾಲಿವುಡ್ ನಿರ್ದೇಶಕ ಶಶಾಂಕ್ ಖೈತಾನ್ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್‌ನೊಂದಿಗೆ ತಮ್ಮ ಮುಂಬರುವ ಯೋಜನೆಗಾಗಿ ಕೈಜೋಡಿಸಿದ್ದಾರೆ.

ಇದನ್ನೂ ಓದಿ : ಕಾಫಿ ವಿತ್ ಕರಣ್ ಕಾರ್ಯಕ್ರಮ ನಿರಾಕರಿಸಿದ ಶಾರುಖ್ ಖಾನ್

ವರದಿಗಳ ಪ್ರಕಾರ, ಕರಣ್ ಜೋಹರ್ ಮತ್ತು ಶಶಾಂಕ್ ಖೈತಾನ್ ಅವರ ಮುಂಬರುವ ಯೋಜನೆಯಲ್ಲಿ ನಟರಾದ ಟೈಗರ್ ಶ್ರಾಫ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಟೈಗರ್ ಶ್ರಾಫ್ ಮತ್ತು ರಶ್ಮಿಕಾ ಮಂದಣ್ಣ ಅವರ ಹೊಸ ಜೋಡಿಯನ್ನು ತಯಾರಕರು ಆಯ್ಕೆ ಮಾಡಿದ್ದಾರೆ. ಶೀಘ್ರದಲ್ಲೇ ಈ ಚಿತ್ರದ ಬಗ್ಗೆ ನಿರ್ಮಾಪಕರು ದೊಡ್ಡ ಘೋಷಣೆ ಮಾಡಲಿದ್ದಾರೆ. ರಶ್ಮಿಕಾ ಪ್ರಸ್ತುತ ಪುಷ್ಪ 2, ಗುಡ್ ಬಾಯ್ ಮತ್ತು ಮಿಷನ್ ಮಜ್ನು ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಅವರು ಶೀಘ್ರದಲ್ಲೇ ಕಾಫಿ ವಿತ್ ಕರಣ್‌ನ 7 ನೇ ಸೀಸನ್‌ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : ಸುಳ್ಳು ಸುದ್ದಿ ಹಬ್ಬಿಸಬೇಡಿ : ನಟಿ ಮೀನಾ

ಒಟ್ಟಿನಲ್ಲಿ ಸದ್ಯ ಪ್ರಚಲಿತ ಇರುವ ಬೇಡಿಕೆಯ ನಟಿಯರ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಹೆಸರು ಸಹ ಅಗ್ರಸ್ಥಾನದಲ್ಲಿದೆ.

Follow us On

FaceBook Google News

Advertisement

Rashmika Mandanna; ರಶ್ಮಿಕಾ ಮಂದಣ್ಣ ಜೋಳಿಗೆಯಲ್ಲಿ ಮತ್ತೊಂದು ಬಾಲಿವುಡ್ ಸಿನಿಮಾ - Kannada News

Read More News Today