ಗಂಡು ಮಗುವಿಗೆ ಜನ್ಮ ನೀಡಿದ ಚಿತ್ರದುರ್ಗ ರೇಣುಕಾಸ್ವಾಮಿ ಪತ್ನಿ ಸಹನಾ

Story Highlights

Renukaswamy wife : ಚಿತ್ರದುರ್ಗ ರೇಣುಕಾಸ್ವಾಮಿ ಪತ್ನಿ ಸಹನಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ,

Renukaswamy wife : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ನಡೆದು ಅದಾಗಲೇ 4 ತಿಂಗಳು ಕಳೆದಿದೆ. ಈ ಕೊಲೆಗೆ ಕಾರಣ ನಟ ದರ್ಶನ್ (Actor Darshan) ಹಾಗೂ ಗ್ಯಾಂಗ್ ಎನ್ನುವ ಆರೋಪ ಕೇಳಿಬಂದಿದ್ದು, ಸದ್ಯ ಈ ಪ್ರಕರಣ ಕೋರ್ಟ್ ಅಂಗಳದಲ್ಲಿ ಇದೆ., ಇತ್ತೀಚಿಗೆ ಕೋರ್ಟ್ ದರ್ಶನ್ ಅವರಿಗೆ ಜಾಮೀನು ನಿರಾಕರಣೆ ಮಾಡಿದೆ.

ಈ ನಡುವೆ ರೇಣುಕಾಸ್ವಾಮಿ ನಿಧನ ಹೊಂದುವಾಗ ಅವರ ಪತ್ನಿ ಸಹನಾ ಐದು ತಿಂಗಳ ಗರ್ಭಿಣಿ, ಈಗ ಸಹನಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ, ರೇಣುಕಾ ಸ್ವಾಮಿ ಸಾವಿನಿಂದ ದುಃಖದಲ್ಲಿದ್ದ ಕುಟುಂಬಕ್ಕೆ ಈ ವಿಚಾರ ಸ್ವಲ್ಪ ಖುಷಿ ತರಿಸಿದೆ. ನಗರದ ಜೆಸಿಆರ್ ಬಡಾವಣೆಯಲ್ಲಿರುವ ಕೀರ್ತಿ ಆಸ್ಪತ್ರೆಯಲ್ಲಿ ಸಹನಾ ಮಗುವಿಗೆ ಜನ್ಮ ನೀಡಿದ್ದಾರೆ.

ನಟ ದರ್ಶನ್ ಗೆಳತಿ ಪವಿತ್ರಾಗೆ ರೇಣುಕಾ ಸ್ವಾಮಿ ನಕಲಿ ಖಾತೆಯಿಂದ ಮೆಸೇಜ್ (Message) ಮಾಡಿದ್ದ ಎನ್ನುವ ಕಾರಣಕ್ಕೆ ದರ್ಶನ್ ಅವರ ಕೋಪಕ್ಕೆ ಕಾರಣ ಆಗಿತ್ತು. ರೇಣುಕಾ ಸ್ವಾಮಿಯನ್ನು ಹುಡುಕಿ ಬೆಂಗಳೂರಿಗೆ (Bengaluru) ಕರೆತಂದು ಬೆಂಗಳೂರಿನ ಪಟ್ಟಣಗೆರೆಯ ಶೆಡ್​ನಲ್ಲಿ ರೇಣುಕಾಸ್ವಾಮಿ ಕೊಲೆ ನಡೆದಿತ್ತು.

ರೇಣುಕಾ ಸ್ವಾಮಿ ಕೊಲೆಯ ಬಳಿಕ ಅವರ ಕುಟುಂಬ ಕಣ್ಣೀರಲ್ಲೇ ಕಳೆಯುತ್ತಿತ್ತು. ‘ಮಗ ಕೈ ಮುಗಿದು ಕೇಳಿಕೊಂಡರು ಬಿಡದೆ ಹತ್ಯೆ ಮಾಡಿದ್ದಾರೆ, ಬೇಡಿಕೊಂಡಾಗ ಬುದ್ದಿ ಹೇಳಿ ಅವರು ಬಿಡಬೇಕಿತ್ತು’ ಎಂದು ರೇಣುಕಾ ಸ್ವಾಮಿ ತಂದೆ-ತಾಯಿ ಕಣ್ಣೀರು ಹಾಕಿದ್ದರು. ಅಲ್ಲದೆ, ದರ್ಶನ್​ ಅವರಿಗೆ ಶಾಪ ಕೂಡ ಹಾಕಿದ್ದರು.

ಗಂಡು ಮಗುವಿಗೆ ಜನ್ಮ ನೀಡಿದ ರೇಣುಕಾ ಸ್ವಾಮಿ ಪತ್ನಿ

ಗಂಡು ಮಗುವಿಗೆ ಜನ್ಮ ನೀಡಿದ ರೇಣುಕಾಸ್ವಾಮಿ ಪತ್ನಿ

ಈಗ ನೊಂದಿದ್ದ ಕುಟುಂಬಕ್ಕೆ ಖುಷಿ ಆಗುವ ಸುದ್ದಿ ಅವರಲ್ಲಿ ಮತ್ತೆ ಬದುಕುವ ಆಸೆ ಚಿಗುರಿದೆ. ರೇಣುಕಾಸ್ವಾಮಿ ಪತ್ನಿ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಚಿತ್ರದುರ್ಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಹನಾಗೆ (Renukaswamy wife Sahana) ಹೆರಿಗೆ ಆಗಿದೆ. ರೇಣುಕಾಸ್ವಾಮಿಯೇ ಮಗನ ರೂಪದಲ್ಲಿ ಮತ್ತೆ ಹುಟ್ಟಿಬಂದ ಎಂದು ಕುಟುಂಬಸ್ಥರು ಸಮಾಧಾನ ಮಾಡಿಕೊಂಡಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್ ಅವರನ್ನು ಜೂನ್ 11ರಂದು ಬಂಧನ ಮಾಡಲಾಗಿತ್ತು. ಕಳೆದ ನಾಲ್ಕು ತಿಂಗಳಿಂದ ಜೈಲಿನಲ್ಲಿಯೇ ದರ್ಶನ್ ಇದ್ದಾರೆ. ಕೆಳ ಹಂತದ ಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ದರ್ಶನ್ ಅವರು ಈಗ ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲಿದ್ದಾರೆ.

Renukaswamy wife Sahana Blessed with Baby boy

Related Stories