RRR ಚಿತ್ರದ ಹೊಸ ದಾಖಲೆ, ಮಿಡ್ಸೀಸನ್ ಅವಾರ್ಡ್ಸ್ನಲ್ಲಿ ಆಯ್ಕೆ
RRR Movie Runner up in HCA Awards: ನಿರ್ದೇಶಕ ರಾಜಮೌಳಿ ನಿರ್ದೇಶನದ ಅತಿ ದೊಡ್ಡ ಪ್ಯಾನ್ ಇಂಡಿಯಾ ಚಿತ್ರ 'RRR' ಪ್ರಪಂಚದಾದ್ಯಂತ ಹೇಗೆ ಸಂಚಲನವನ್ನು ಸೃಷ್ಟಿಸಿತು ಎಂಬುದನ್ನು ನಾವು ನೋಡಿದ್ದೇವೆ, ಈಗ ಈ RRR ಚಿತ್ರ ಮತ್ತೊಂದು ಹೊಸ ದಾಖಲೆ ಸೃಷ್ಟಿಸಿದೆ.
RRR Movie Runner up in HCA Awards: ನಿರ್ದೇಶಕ ರಾಜಮೌಳಿ ನಿರ್ದೇಶನದ ಅತಿ ದೊಡ್ಡ ಪ್ಯಾನ್ ಇಂಡಿಯಾ ಚಿತ್ರ ‘RRR’ ಪ್ರಪಂಚದಾದ್ಯಂತ ಹೇಗೆ ಸಂಚಲನವನ್ನು ಸೃಷ್ಟಿಸಿತು ಎಂಬುದನ್ನು ನಾವು ನೋಡಿದ್ದೇವೆ, ಈಗ ಈ RRR ಚಿತ್ರ ಮತ್ತೊಂದು ಹೊಸ ದಾಖಲೆ ಸೃಷ್ಟಿಸಿದೆ.
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಯಂಗ್ ಟೈಗರ್ ಎನ್ಟಿಆರ್ ಅವರನ್ನು ಕಾಲ್ಪನಿಕ ಕಥೆಯಲ್ಲಿ ಬಳಸಿಕೊಂಡ ರೀತಿ ಅದ್ಭುತವಾಗಿದೆ. ಮತ್ತು ಈ ಚಿತ್ರದ ಹೆಸರು ಇನ್ನೂ ಸದ್ದು ಮಾಡುತ್ತಲೇ ಇದ್ದು, ಈ ಚಿತ್ರಕ್ಕೆ ಸಿನಿಪ್ರೇಮಿಗಳೆಲ್ಲಾ ಹುಚ್ಚೆದ್ದು ಕುಣಿದಿದ್ದರೆ. ಈ ಚಿತ್ರ ಈಗಾಗಲೇ ಒಟಿಟಿಯಲ್ಲಿ ಲಭ್ಯವಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರದ ಬಗ್ಗೆ ದಿನನಿತ್ಯದ ಚರ್ಚೆ ನಡೆಯುತ್ತಲೇ ಇದೆ. ಈ ನಡುವೆ ಈಗ ಈ RRR ಚಿತ್ರ ಮತ್ತೊಂದು ಹೊಸ ದಾಖಲೆ ಸೃಷ್ಟಿಸಿದೆ.
ಇದನ್ನೂ ಓದಿ : ಹಾಲಿವುಡ್ ಪ್ರೇಕ್ಷಕರನ್ನೂ ರಂಜಿಸುವಲ್ಲಿ RRR ಯಶಸ್ವಿ
ಭಾರತದ RRR ಇತ್ತೀಚೆಗೆ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ (HCA) ಮಿಡ್ಸೀಸನ್ ಅವಾರ್ಡ್ಸ್ನಲ್ಲಿ ಆಯ್ಕೆಯಾಗಿದೆ, ಇದು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರಗಳು ಮತ್ತು ಜನಪ್ರಿಯ ಚಲನಚಿತ್ರಗಳನ್ನು ಆಯ್ಕೆ ಮಾಡುತ್ತದೆ. ಈ ಪ್ರಶಸ್ತಿಗಳ ಇತ್ತೀಚಿನ ಪಟ್ಟಿಯನ್ನು ಎಚ್ಸಿಎ ಬಿಡುಗಡೆ ಮಾಡಿದೆ.
ಈ ಸಂದರ್ಭದಲ್ಲಿ ‘ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್’ ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಘೋಷಿಸಲಾಯಿತು ಮತ್ತು RRR ಅನ್ನು ರನ್ನರ್ ಅಪ್ ಎಂದು ಘೋಷಿಸಲಾಯಿತು. ಹಾಲಿವುಡ್ ಪ್ರೇಕ್ಷಕರನ್ನೂ ರಂಜಿಸುವಲ್ಲಿ RRR ಯಶಸ್ವಿಯಾಗಿದೆ ಎಂಬುದು ಈ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.
ಇದನ್ನೂ ಓದಿ : ಪ್ರಶಾಂತ್ ನೀಲ್ ಸಲಾರ್ ಸಿನಿಮಾ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ
ಈ ಪೈಪೋಟಿಯಲ್ಲಿ ಹಾಲಿವುಡ್ ಸೂಪರ್ ಚಿತ್ರಗಳು ಕಣದಲ್ಲಿದ್ದರೂ ಆರ್ ಆರ್ ಆರ್ ಅವೆಲ್ಲವನ್ನೂ ಬದಿಗೆ ಸರಿಸಿ ಎರಡನೇ ಸ್ಥಾನದಲ್ಲಿ ನಿಂತಿದೆ ಎನ್ನುತ್ತಾರೆ ಚಿತ್ರ ವಿಶ್ಲೇಷಕರು. ಇದು ಸಾಮಾನ್ಯ ಸಂಗತಿಯಲ್ಲ.
And the winner of the HCA Midseason Award for Best Picture goes to…
Everything Everywhere All At Once
Runner up: RRR #HCAMidseasonAwards #A24 #EverythingEverywhereAllAtOnce @A24 @EEAAOA24 pic.twitter.com/PMrxkgWVQ1
— Hollywood Critics Association (@HCAcritics) July 1, 2022
RRR Movie Runner up in HCA Midseason Awards
Follow Us on : Google News | Facebook | Twitter | YouTube